ರೈಲ್ವೇ ನೇಮಕಾತಿ ಮಂಡಳಿಯಲ್ಲಿ(RRB) ಖಾಲಿ ಇರುವ 1376 ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗಳ ಭರ್ಜರಿ ನೇಮಕಾತಿ | ಕೂಡಲೇ ಅರ್ಜಿ ಸಲ್ಲಿಸಿ

ಭಾರತೀಯ ರೇಲ್ವೆಯ ಮಂಡಳಿಯ ಅಡಿ ಕಾರ್ಯನಿರ್ವಹಿಸುತ್ತಿರುವ ರೈಲ್ವೇ ನೇಮಕಾತಿ ಮಂಡಳಿಯಲ್ಲಿ (RRB) ಖಾಲಿ ಇರುವ1376 ನರ್ಸಿಂಗ್ ಸೂಪರಿಂಟೆಂಡೆಂಟ್, ಕ್ಲಿನಿಕಲ್ ಸೈಕಾಲಜಿಸ್ಟ್, ಡೆಂಟಲ್ ಹೈಜಿಏನಿಸ್ಟ್, ಸ್ಪೀಚ್ ಥೆರಪಿಸ್ಟ್, ಕಾರ್ಡಿಯಾಕ್ ಟೆಚ್ನಿಷಿಯನ್, ಲ್ಯಾಬ್ ಅಸಿಸ್ಟೆಂಟ್ ಗ್ರೇಡ್ - II , ಫೀಲ್ಡ್ ವರ್ಕರ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತೀಯ ಪ್ರಜೆಯಾಗಿರಬೇಕು.
ಈ ನೇಮಕಾತಿಯ ಕುರಿತ ಸವಿವರವಾದ ಮಾಹಿತಿ, ಅಧಿಕೃತ ಅಧಿಸೂಚನೆ ಹಾಗೂ ಅರ್ಜಿ ಸಲ್ಲಿಸುವ ಲಿಂಕ್ ಅನ್ನು ಈ ಕೆಳಗೆ ನೀಡಲಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸುವ ಮೂಲಕ ಆಯ್ಕೆ ಮಾಡಲಾಗುತ್ತದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 17 ಆಗಸ್ಟ್ 2024 ಹಾಗೂ ಕೊನೆಯ ದಿನಾಂಕ 16 ಸೆಪ್ಟೆಂಬರ್ 2024 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ನೇಮಕಾತಿ ನಿಯಮಾನುಸಾರ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಾಮಾನ್ಯ ಮತ್ತು OBC ಅಭ್ಯರ್ಥಿಗಳಿಗೆ ರೂ 500/- ಶುಲ್ಕವಿದ್ದು, SC/ST/ಮಹಿಳಾ/ಮಾಜಿ ಸೈನಿಕ/ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ ರೂ 250/- ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯಥಿಗಳು ಕನಿಷ್ಠ 18 ಹಾಗೂ ಗರಿಷ್ಠ 43 ವಯೋಮಿತಿಯನ್ನು ಹುದ್ದೆಗಳಿಗೆ ಅನುಗುಣವಾಗಿ ನಿಗದಿಪಡಿಸಲಾಗಿದೆ.
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗುವಂತೆ19,900 /- ರೂ ಗಳಿಂದ 44,900/- ರೂ ಗಳ ವರೆಗೆ ಮಾಸಿಕ ವೇತನ ನಿಗದಿಪಡಿಸಲಾಗಿದೆ.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.





Comments