Loading..!

ಬ್ರೇಕಿಂಗ್ ನ್ಯೂಸ್ : ಶೀಘ್ರದಲ್ಲೇ ನಡೆಲಿದೆ ರೇಲ್ವೆ ಇಲಾಖೆಯಲ್ಲಿ 30300 ಕ್ಕೂ ಅಧಿಕ ಹುದ್ದೆಗಳ ನೇರ ನೇಮಕಾತಿ | ಈ ಕುರಿತು ಸಂಪೂರ್ಣ ಮಾಹಿತಿ ನಿಮಗಾಗಿ
Tags: Degree SSLC
Published by: Yallamma G | Date:21 ಜುಲೈ 2025
not found

         ರೇಲ್ವೆ ಇಲಾಖೆಯಲ್ಲಿ30,300ಕ್ಕೂ ಹೆಚ್ಚು ಹುದ್ದೆಗಳು ನೇಮಕಾತಿಗೆ ಸಿದ್ಧವಾಗುತ್ತಿವೆ. ಅದೂ ನೇರ ನೇಮಕಾತಿ! ಇದು ಕೇವಲ ಉದ್ಯೋಗಾವಕಾಶವಲ್ಲ, ಭದ್ರ ಭವಿಷ್ಯಕ್ಕೆ ಒಂದು ದಾರಿ. ರೈಲ್ವೇ ನೇಮಕಾತಿ ಮಂಡಳಿ (RRB) ಅಖಿಲ ಭಾರತ ಮಟ್ಟದಲ್ಲಿ ಟೈಪಿಸ್ಟ್, ಸ್ಟೇಷನ್ ಮಾಸ್ಟರ್ (NTPC) ಹುದ್ದೆಗಳ ನೇಮಕಾತಿಗಾಗಿ indianrailways.gov.in ನಲ್ಲಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಉತ್ಸಾಹಿ ಮತ್ತು ಅರ್ಹ ಭಾರತದ ಅಭ್ಯರ್ಥಿಗಳಿಂದ ಮಾತ್ರ ಅರ್ಜಿಯನ್ನು ಆಹ್ವಾನಿಸಲಾಗಿದೆ, ಅಭ್ಯರ್ಥಿಗಳುಸೆಪ್ಟೆಂಬರ್ 29, 2025 ರ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. 


                          ಹೌದು ಬರೀ ಯಾವುದೇ ಪದವಿ ಪಾಸಾಗಿದ್ರೆ ಸಾಕು ಇಲ್ಲಿದೆ ಭರ್ಜರಿ ಅವಕಾಶ, ರೈಲ್ವೆ ನೇಮಕಾತಿ ಮಂಡಳಿಯು 2025-26ನೇ ಸಾಲಿಗಾಗಿ ವಿವಿಧ ವೇತನ ಶ್ರೇಣಿಯ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆಯನ್ನು ಹೊರಡಿಸಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ರೈಲ್ವೆ ನೇಮಕಾತಿ ಮಂಡಳಿಯಲ್ಲಿ ಸರ್ಕಾರಿ ಉದ್ಯೋಗ ಎಂದರೆ ಸ್ಥಿರತೆ, ಭದ್ರತೆ ಮತ್ತು ಸಮಾಜದಲ್ಲಿ ಗೌರವ. 


                     ರೈಲ್ವೆ ನೇಮಕಾತಿ ಮಂಡಳಿಯು ಜುಲೈ 2025 ರ RRB ಅಧಿಕೃತ ಅಧಿಸೂಚನೆಯಡಿಯಲ್ಲಿಮುಖ್ಯ ವಾಣಿಜ್ಯ ಮತ್ತು ಟಿಕೆಟ್ ಮೇಲ್ವಿಚಾರಕರು, ಸ್ಟೇಷನ್ ಮಾಸ್ಟರ್, ಸರಕು ರೈಲು ವ್ಯವಸ್ಥಾಪಕ, ಜೂನಿಯರ್ ಅಕೌಂಟ್ ಅಸಿಸ್ಟೆಂಟ್ & ಟೈಪಿಸ್ಟ್ ಮತ್ತು ಹಿರಿಯ ಗುಮಾಸ್ತ ಮತ್ತು ಬೆರಳಚ್ಚುಗಾರ ಸೇರಿದಂತೆ ವಿವಿಧ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಒಟ್ಟು 30307 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕಿದೆ. ಪದವಿ ಪಾಸಾದ ಯುವಕ ಯುವತಿಯರಿಗೆ ಇದು ಉಜ್ವಲ ಅವಕಾಶವಾಗಿದ್ದು, ಇದು ನಿಮ್ಮ ಸರ್ಕಾರ ಉದ್ಯೋಗದ ಕನಸು ಸಾಕಾರಗೊಳಿಸಬಹುದಾದ ಸನ್ನಿವೇಶವಾಗಿದೆ. 


                  ಅಖಿಲ ಭಾರತ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಇಲ್ಲಿ ನಾವು ಪ್ರತಿ ಹುದ್ದೆಯ ವಿವರ, ಅರ್ಹತೆಗಳು, ವೇತನ ಮಾಹಿತಿ ಮತ್ತು ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸರಳವಾಗಿ ವಿವರಿಸಿದ್ದೇವೆ. ಆದರೆ ಯಾವ ವಿಭಾಗದಲ್ಲಿ ಎಷ್ಟು ಹುದ್ದೆಗಳಿವೆ ಮತ್ತು ನಿಮಗೆ ಯಾವುದು ಸರಿಹೊಂದುತ್ತದೆ ಎಂಬುದನ್ನು ತಿಳಿಯುವ ಮುನ್ನ, ಈ ನೇಮಕಾತಿಗೆ ಇರುವ ಒಂದು ವಿಶೇಷ ನಿಯಮದ ಬಗ್ಗೆ ತಿಳಿಯಬೇಕಿದೆ...

📌RRB ಹುದ್ದೆಯ ಅಧಿಸೂಚನೆ


🏛️ ಸಂಸ್ಥೆಯ ಹೆಸರು : ನೈಋತ್ಯ ರೈಲ್ವೆ
🧾 ಹುದ್ದೆಗಳ ಸಂಖ್ಯೆ: 904
📍  ಉದ್ಯೋಗ ಸ್ಥಳ: ಬೆಂಗಳೂರು, ಮೈಸೂರು, ಹುಬ್ಬಳ್ಳಿ - ಕರ್ನಾಟಕ
👨‍💼 ಹುದ್ದೆಯ ಹೆಸರು: ಅಪ್ರೆಂಟಿಸ್
💰 ಸ್ಟೈಫಂಡ್:  ರೈಲ್ವೆ ನೇಮಕಾತಿ ಮಂಡಳಿ ( RRB ) ನಿಯಮಗಳ ಪ್ರಕಾರ


📌 ಹುದ್ದೆಗಳ ವಿವರ : 30307
🔹 Chief Commercial and Ticket Supervisor : 6235
🔹 Station Master : 5623
🔹 Goods Train Manager : 3562
🔹 Junior Account Assistant and Typist : 7520
🔹 Senior Clerk and Typist : 7367

💰 ಮಾಸಿಕ ವೇತನ :
ಮುಖ್ಯ ವಾಣಿಜ್ಯ ಮತ್ತು ಟಿಕೆಟ್ ಮೇಲ್ವಿಚಾರಕರು ಮತ್ತು ಸ್ಟೇಷನ್ ಮಾಸ್ಟರ್ ಹುದ್ದೆಗಳಿಗೆ : ರೂ.35400/-
ಸರಕು ರೈಲು ವ್ಯವಸ್ಥಾಪಕ, ಜೂನಿಯರ್ ಅಕೌಂಟ್ ಅಸಿಸ್ಟೆಂಟ್ & ಟೈಪಿಸ್ಟ್ ಮತ್ತು ಹಿರಿಯ ಗುಮಾಸ್ತ ಮತ್ತು ಬೆರಳಚ್ಚುಗಾರ ಹುದ್ದೆಗಳಿಗೆ : ರೂ.29200/-


💼 ಆಯ್ಕೆ ಪ್ರಕ್ರಿಯೆ :
✅ ಆನ್‌ಲೈನ್ ಲಿಖಿತ ಪರೀಕ್ಷೆ (CBT)
✅ ಪ್ರಾಯೋಗಿಕ/ಶಾರೀರಿಕ ತೇರ್ಗಡೆ (ಹುದ್ದೆ ಪ್ರಕಾರ)
✅ ದಾಖಲೆ ಪರಿಶೀಲನೆ
✅ ಮೆರುಗುಪಟ್ಟಿ ಆಧಾರದ ನೇಮಕಾತಿ


🎂 ವಯೋಮಿತಿ : 
ರೈಲ್ವೆ ನೇಮಕಾತಿ ಮಂಡಳಿಯ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 01-ಜನವರಿ-2025 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 36 ವರ್ಷಗಳನ್ನು ಹೊಂದಿರಬೇಕು.
ವಯೋಮಿತಿ ಸಡಿಲಿಕೆ:
ರೈಲ್ವೆ ನೇಮಕಾತಿ ಮಂಡಳಿಯ ನಿಯಮಗಳ ಪ್ರಕಾರ


📝 ಅರ್ಜಿ ಸಲ್ಲಿಸುವ ವಿಧಾನ : 
=> ಮೊದಲನೆಯದಾಗಿ RRB ನೇಮಕಾತಿ ಅಧಿಸೂಚನೆ 2025 ಅನ್ನು ಸಂಪೂರ್ಣವಾಗಿ ಓದಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ (ನೇಮಕಾತಿ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ).
=> ಆನ್‌ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪ್ರೂಫ್, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.
=> RRB ಟೈಪಿಸ್ಟ್, ಸ್ಟೇಷನ್ ಮಾಸ್ಟರ್ (NTPC) ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ – ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
=> ಆರ್‌ಆರ್‌ಬಿ ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ನಿಮ್ಮ ಇತ್ತೀಚಿನ ಛಾಯಾಚಿತ್ರದೊಂದಿಗೆ (ಅನ್ವಯಿಸಿದರೆ) ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
=> ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)
=> ಕೊನೆಗೆ RRB ನೇಮಕಾತಿ 2025 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ. ಬಹು ಮುಖ್ಯವಾಗಿ ಅರ್ಜಿ ಸಂಖ್ಯೆ ಅಥವಾ ಹೆಚ್ಚಿನ ಉಲ್ಲೇಖಕ್ಕಾಗಿ ವಿನಂತಿ ಸಂಖ್ಯೆಯನ್ನು ಸೆರೆಹಿಡಿಯಿರಿ.

📅 ಪ್ರಮುಖ ದಿನಾಂಕಗಳು : 
✅ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 30-08-2025
✅ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29-ಸೆಪ್ಟೆಂಬರ್-2025


📢 ಈ ನೇಮಕಾತಿಯು ಸಂಪೂರ್ಣ ನೇರ ನೇಮಕಾತಿ (Direct Recruitment) ಆಗಿದ್ದು, ಲಘು ಅರ್ಹತೆಯೊಂದಿಗೆ ಉದ್ಯೋಗ ಪಡೆಯುವ ಅಪರೂಪದ ಅವಕಾಶವಾಗಿದೆ.

🎯 ಸೂಚನೆ: ನೇಮಕಾತಿಗೆ ಸಿದ್ಧತೆ ಪ್ರಾರಂಭಿಸಿ, ಹಿಂದಿನ ಪ್ರಶ್ನೆಪತ್ರಿಕೆ, ಸಿಲೆಬಸ್ ಅಧ್ಯಯನ ಮಾಡಿ. ಅಧಿಕೃತ ಅಧಿಸೂಚನೆ ಪ್ರಕಟವಾದ ತಕ್ಷಣ ಅರ್ಜಿ ಸಲ್ಲಿಸಿ.

Comments