ಪ್ರಾದೇಶಿಕ ಶಿಕ್ಷಣ ಸಂಸ್ಥೆ ಮೈಸೂರು (RIE Mysore) ಉದ್ಯೋಗ ಅವಕಾಶ 2025 – ನೇರ ಸಂದರ್ಶನ ಮೂಲಕ ನೇಮಕಾತಿ!

ಪ್ರಾದೇಶಿಕ ಶಿಕ್ಷಣ ಸಂಸ್ಥೆ ಮೈಸೂರು (RIE Mysore) ಇವರು ಪ್ರಾಥಮಿಕ ಶಿಕ್ಷಕರು ಹಾಗೂ ಪ್ರಯೋಗಾಲಯ ಸಹಾಯಕ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದಾರೆ. ಒಟ್ಟು 37 ಹುದ್ದೆಗಳಿವೆ, ಮತ್ತು ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನದ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
🔹 ಹುದ್ದೆಯ ಹೆಸರು :
ಪ್ರಾಥಮಿಕ ಶಿಕ್ಷಕರು
ಪ್ರಯೋಗಾಲಯ ಸಹಾಯಕರು
🔹 ಒಟ್ಟು ಹುದ್ದೆಗಳ ಸಂಖ್ಯೆ : 37
🔹 ಉದ್ಯೋಗ ಸ್ಥಳ : ಮೈಸೂರು, ಕರ್ನಾಟಕ
🔹 ವಿದ್ಯಾರ್ಹತೆ :
ಅಭ್ಯರ್ಥಿಗಳು 10ನೇ, 12ನೇ ತರಗತಿ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ (D.Ed, B.Sc, BCA, B.Lib.Sc, B.LI. Sc, BE/ B.Tech, M.Lib.Sc, M.LI. Sc, B.Sc.Ed, BAEd, MA, M.Sc) ಮುಂತಾದ ವಿದ್ಯಾರ್ಹತೆಗಳನ್ನು ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪೂರೈಸಿರಬೇಕು.
🔹 ವಯೋಮಿತಿ :
ಅಭ್ಯರ್ಥಿಗಳು ಗರಿಷ್ಠ 40 ವರ್ಷ (ಅಧಿಕೃತ ಅಧಿಸೂಚನೆಯ ಪ್ರಕಾರ) ವಯೋಮಿತಿಯನ್ನು ಹೊಂದಿರಬೇಕು.
🔹 ಅರ್ಜಿಶುಲ್ಕ :
ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
🔹 ವೇತನ ಶ್ರೇಣಿ :
ಅಭ್ಯರ್ಥಿಗಳು ಮಾಸಿಕವಾಗಿ ₹21,250 ರಿಂದ ₹54,000 ವರೆಗೆ ವೇತನವನ್ನು ನೀಡಲಾಗುತ್ತದೆ.
🔹 ಆಯ್ಕೆ ವಿಧಾನ :
ನೇರ ಸಂದರ್ಶನ
🔹 ಅರ್ಜಿಸುವ ವಿಧಾನ :
1. ಅಧಿಕೃತ ವೆಬ್‌ಸೈಟ್ [https://riemysore.ac.in/](https://riemysore.ac.in/) ಗೆ ಭೇಟಿ ನೀಡಿ
2. ಸಂಬಂಧಿತ ಹುದ್ದೆಯ ಅಧಿಸೂಚನೆಯನ್ನು ಓದಿ
3. ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ
4. ಅಗತ್ಯ ದಾಖಲೆಗಳೊಂದಿಗೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ
5. ನೇರ ಸಂದರ್ಶನಕ್ಕೆ ಹಾಜರಾಗಿರಿ
🔹 ಸಂದರ್ಶನದ ವಿಳಾಸ:
The Conference Room, RIE Mysore
🔹 ಪ್ರಮುಖ ದಿನಾಂಕಗಳು :
ಅಧಿಸೂಚನೆ ಬಿಡುಗಡೆಯ ದಿನಾಂಕ : 25-04-2025
ವಾಕ್-ಇನ್ ಸಂದರ್ಶನ ದಿನಾಂಕ : 08-05-2025
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಸರಿಯಾದ ದಾಖಲೆಗಳೊಂದಿಗೆ ಸಮಯಕ್ಕೆ ನೇರವಾಗಿ ಹಾಜರಾಗುವಂತೆ ವಿನಂತಿಸಿಕೊಳ್ಳಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿರಿ.
Comments