Loading..!

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Tags: Degree PG
Published by: Hanamant Katteppanavar | Date:29 ನವೆಂಬರ್ 2020
not found
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಲ ಜೀವನ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಕೇಂದ್ರ ಕಚೇರಿ ಹಾಗೂ ವಿವಿಧ ಜಿಲ್ಲೆಯಲ್ಲಿ ಖಾಲಿಯಿರುವ 25 ಸಮಾಲೋಚಕ ಮತ್ತು ವ್ಯವಸ್ಥಾಪಕ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನವೆಂಬರ್ 30,2020ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಮೇಲಿನ ಎಲ್ಲಾ ಹುದ್ದೆಗಳು ಗುತ್ತಿಗೆ ಆಧಾರದ ಒಂದು ವರ್ಷದ ತಾತ್ಕಾಲಿಕ ಹುದ್ದೆಗಳಾಗಿವೆ. ಹಾಗೂ ಅಭ್ಯರ್ಥಿಗಳ ಕಾರ್ಯ ವೈಖರಿಯನ್ನಾಧರಿಸಿ ಮುಂದೆ ಕೆಲಸದ ಅವಧಿಯನ್ನು ವಿಸ್ತರಿಸುವ ಸಾಧ್ಯತೆಯಿರುತ್ತದೆ.
No. of posts:  25
Application End Date:  30 ನವೆಂಬರ್ 2020
Work Location:  ಕರ್ನಾಟಕ
Selection Procedure:
ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆಪಟ್ಟಿ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
Qualification:

- ಹುದ್ದೆಗಳಿಗೆ ಅನುಸಾರವಾಗಿ ಪದವಿ, ಸ್ನಾತಕೋತ್ತರ ಪದವಿ, ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್/ಸಿವಿಲ್ ಇಂಜಿನಿಯರಿಂಗ್, ಎಂಸಿಎ/ಎಂ.ಎಸ್ಸಿ/ಬಿ.ಇ, ಎಂ.ಎಸ್.ಡಬ್ಲ್ಯೂ/ಎಂಎ  

ವಿದ್ಯಾರ್ಹತೆಯನ್ನು ಹೊಂದಿರುವ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
- ಹುದ್ದೆಗಳಿಗೆ ತಕ್ಕಂತೆ 3 ರಿಂದ 8 ವರ್ಷದ ಕೆಲಸದ ಅನುಭವವನ್ನು ಹೊಂದಿರಬೇಕು.

Age Limit:
- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಗರಿಷ್ಠ- 45 ವರ್ಷ ವಯೋಮಿತಿಯನ್ನು ಮೀರಿರಬಾರದು
Pay Scale:
* ಹುದ್ದೆಗಳಿಗೆ ಅನುಸಾರವಾಗಿ :

- ಜೆಜೆಎಂ ಸಮಾಲೋಚಕರು ಹುದ್ದೆಗಳಿಗೆ ತಿಂಗಳಿಗೆ 75,000/- ರಿಂದ 1,00,000/-ರೂ ವೇತನವನ್ನು ನೀಡಲಾಗುವುದು. 

- ಘನ ಮತ್ತು ದ್ರವತ್ಯಾಜ್ಯ ನಿರ್ವಹಣೆ ಸಮಾಲೋಚಕರು ಮತ್ತು ಜಿಲ್ಲಾ ಯೋಜನಾ ವ್ಯವಸ್ಥಾಪಕ ಹುದ್ದೆಗಳಿಗೆ ತಿಂಗಳಿಗೆ 35,000/- ರಿಂದ 45,000/-ರೂ ವೇತನವನ್ನು ನೀಡಲಾಗುವುದು. 

- ಜಿಲ್ಲಾ ಎಂಐಎಸ್ ಸಮಾಲೋಚಕರು ಹುದ್ದೆಗಳಿಗೆ ತಿಂಗಳಿಗೆ 22,000/ -ರಿಂದ 25,000/-ರೂ ವೇತನವನ್ನು ನೀಡಲಾಗುವುದು.

- ಮಾಹಿತಿ ಶಿಕ್ಷಣ ಹಾಗೂ ಸಂವಹನ ಸಮಾಲೋಚಕರು, ನೈರ್ಮಲ್ಯ ಹಾಗೂ ಶುಚಿತ್ವ ಸಮಾಲೋಚಕರು, ಘನ ಮತ್ತು ದ್ರವತ್ಯಾಜ್ಯ ನಿರ್ವಹಣೆ ಸಮಾಲೋಚಕರು, ಮೇಲ್ವಿಚಾರಣೆ ಹಾಗೂ ಮೌಲ್ಯಮಾಪನ ಸಮಾಲೋಚಕರು ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 22,000/-ರೂ ವೇತನವನ್ನು ನೀಡಲಾಗುವುದು.
To Buy : ನಿಮ್ಮ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಹಲವು ಉತ್ತಮ ಪುಸ್ತಕಗಳನ್ನು ಈ ಲಿಂಕ್ ಮೂಲಕ ಕೂಡಲೇ ಖರೀದಿ ಮಾಡಿ


- ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯಲ್ಲಿ ಕೇಳಿದ ಮಾಹಿತಿಯನ್ನು ಸರಿಯಾದ ರೀತಿಯಲ್ಲಿ ತುಂಬಿ ಜೊತೆಗೆ ಮೂಲ ದಾಖಲೆಗಳನ್ನು ಲಗತ್ತಿಸಿ ಅರ್ಜಿಯನ್ನು 

ಗೆ, 

"ಆಯುಕ್ತರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, 2ನೇ ಮಹಡಿ, ಕೆ.ಎಚ್.ಬಿ ಕಟ್ಟಡ, ಕಾವೇರಿ ಭವನ, ಕೆ.ಜಿ. ರಸ್ತೆ, ಬೆಂಗಳೂರು -560009" ಈ ವಿಳಾಸಕ್ಕೆ ನವೆಂಬರ್ 30,2020ರ ಒಳಗೆ ಅರ್ಜಿಯನ್ನು ಸಲ್ಲಿಸಬೇಕು. ನಂತರ ಬಂದಂತಹ ಯಾವುದೇ ಅರ್ಜಿಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.

To Download the official notification

Comments