Loading..!

ಮಹಾತ್ಮಾ ಗಾಂಧಿ ನರೇಗಾ ಸಾಮಾಜಿಕ ಪರಿಶೋಧನಾ ಸಂಘದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
| Date:17 ಜೂನ್ 2019
not found
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಂ ಜಿ ನರೇಗಾ ಸಾಮಾಜಿಕ ಪರಿಶೋಧನಾ ಸಂಘಕ್ಕೆ (ಮಹಾತ್ಮ ಗಾಂಧಿ ನರೇಗಾ ಯೋಜನೆ) ಅಗತ್ಯವಿರುವ ಈ ಕೆಳಕಂಡ ಹುದ್ದೆಯ ಸೇವೆಗಾಗಿ ಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ನೇಮಕ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ

ಹುದ್ದೆಗಳ ವಿವರಗಳು:
-ಜಿಲ್ಲಾ ಸಾಮಾಜಿಕ ಪರಿಶೋಧನಾ ಸಂಯೋಜಕರು ಒಟ್ಟು 4 ಹುದ್ದೆಗಳು
-ತಾಲ್ಲೂಕು ಸಾಮಾಜಿಕ ಪರಿಶೋಧನಾ ಸಂಯೋಜಕರು 11 ಹುದ್ದೆಗಳು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29 06 2019 ರ ಸಂಜೆ 5:30 ಗಂಟೆಯೊಳಗೆ
ಹೆಚ್ಚಿನ ವಿವರಗಳನ್ನು ಜಾಲತಾಣದಲ್ಲಿ ಪಡೆಯಬಹುದು ಮತ್ತು ನಿಗದಿತ ಅರ್ಜಿ ನಮೂನೆಗಳನ್ನು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಂಡು ಆ ನಮೂನೆಯಲ್ಲಿ ಮಾತ್ರವೇ ಸಲ್ಲಿಸಬೇಕಾಗುತ್ತದೆ.

ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿಗಳನ್ನು ಈಗಿನ ವಿಳಾಸಕ್ಕೆ ಕೊನೆಯ ದಿನಾಂಕದೊಳಗಾಗಿ ಸಲ್ಲಿಸಬೇಕು.
ವಿಳಾಸ :
ನಿರ್ದೇಶಕರು,
ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯ,
ಮೊದಲನೇ ಮಹಡಿ, ಅಭಯ ಕಾಂಪ್ಲೆಕ್ಸ್
ಕೊಳಗೇರಿ ಅಭಿವೃದ್ಧಿ ಮಂಡಳಿ ಕಟ್ಟಡ, ನಂಬರ್
ರಿಸಾಲ್ದಾರ್ ರಸ್ತೆ, ಶೇಷಾದ್ರಿಪುರಂ ಬೆಂಗಳೂರು-560020
ದೂರವಾಣಿ ಸಂಖ್ಯೆ -080-23460650
No. of posts:  15
Application Start Date:  15 ಜೂನ್ 2019
Application End Date:  29 ಜೂನ್ 2019
Qualification: ಜಿಲ್ಲಾ ಸಾಮಾಜಿಕ ಪರಿಶೋಧನಾ ಸಂಯೋಜಕರು ಹುದ್ದೆಗೆ :
- ಅಂಗೀಕೃತ ವಿಶ್ವವಿದ್ಯಾಲಯದ ಪದವಿ ಮತ್ತು ಕಂಪ್ಯೂಟರ್ ಬಳಕೆಯ ಜ್ಞಾನವನ್ನು ಹೊಂದಿರಬೇಕು
- ಸಾಮಾಜಿಕ ಪರಿಶೋಧನೆ ನಿರ್ವಹಿಸಿದ ಅನುಭವ 3 ವರ್ಷ
- ಸ್ವಯಂ ಸೇವಾ ಸಂಘ ಸಂಸ್ಥೆಗಳಲ್ಲಿ ಗ್ರಾಮೀಣಾಭಿವೃದ್ಧಿ ಚಟುವಟಿಕೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ 5 ವರ್ಷ - ನರೇಗಾ ಕಾರ್ಯಕ್ರಮದ ಅನುಭವ 2 ವರ್ಷ

ತಾಲ್ಲೂಕು ಸಾಮಾಜಿಕ ಪರಿಶೋಧನಾ ಸಂಯೋಜಕರು ಹುದ್ದೆಗೆ :
- ಅಂಗೀಕೃತ ವಿಶ್ವವಿದ್ಯಾಲಯದ ಪದವಿ ಮತ್ತು ಕಂಪ್ಯೂಟರ್ ಬಳಕೆಯ ಜ್ಞಾನವನ್ನು ಹೊಂದಿರಬೇಕು
- ಸಾಮಾಜಿಕ ಪರಿಶೋಧನೆ ನಿರ್ವಹಿಸಿದ ಅನುಭವ 2 ವರ್ಷ
- ಸ್ವಯಂ ಸೇವಾ ಸಂಘ ಸಂಸ್ಥೆಗಳಲ್ಲಿ ಗ್ರಾಮೀಣಾಭಿವೃದ್ಧಿ ಚಟುವಟಿಕೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ 3 ವರ್ಷ
- ನರೇಗಾ ಕಾರ್ಯಕ್ರಮದ ಅನುಭವ 2 ವರ್ಷ
Age Limit: * ಜಿಲ್ಲಾ ಸಾಮಾಜಿಕ ಪರಿಶೋಧನಾ ಸಂಯೋಜಕರು:
ಗರಿಷ್ಠ 40 ವರ್ಷ (ಕರ್ತವ್ಯ ನಿರತ ತಾಲ್ಲೂಕು ಸಂಯೋಜಕರು / ತಾಲೂಕು ಸಂಯೋಜಕರ ಸಹಾಯಕರಿಗೆ ೨ ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ)

* ತಾಲ್ಲೂಕು ಸಾಮಾಜಿಕ ಪರಿಶೋಧನಾ ಸಂಯೋಜಕರು
ಗರಿಷ್ಠ 35 ವರ್ಷ (ಕರ್ತವ್ಯ ನಿರತ ತಾಲ್ಲೂಕು ಸಂಯೋಜಕರು / ತಾಲೂಕು ಸಂಯೋಜಕರ ಸಹಾಯಕರಿಗೆ ೨ ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ)
Pay Scale: -ಜಿಲ್ಲಾ ಸಾಮಾಜಿಕ ಪರಿಶೋಧನಾ ಸಂಯೋಜಕರು : ರೂಪಾಯಿ 20000 ಪ್ರತಿ ತಿಂಗಳು
-ತಾಲ್ಲೂಕು ಸಾಮಾಜಿಕ ಪರಿಶೋಧನಾ ಸಂಯೋಜಕರು : ರೂಪಾಯಿ 15000 ಪ್ರತಿ ತಿಂಗಳು
PDO ಮತ್ತು GPS ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments