Loading..!

ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Mallappa Myageri | Date:4 ಅಕ್ಟೋಬರ್ 2021
not found

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಧಿನಕ್ಕೊಳಪಡುವ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯ, ಬೆಳಗಾವಿಯ ಸ್ನಾತಕ (UG) ವಿಷಯಗಳಿಗೆ 2021-22 ನೇ ಶೈಕ್ಷಣಿಕ ಸಾಲಿನ ಹೆಚ್ಚುವರಿ ಬೋಧನಾ ಕಾರ್ಯಭಾರದ ನಿರ್ವಹಣೆಗಾಗಿ ಯುಜಿಸಿ ಮತ್ತು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ ನಿಯಮಾನುಸಾರ ಪೂರ್ಣಕಾಲಿಕ / ಅರೆಕಾಲಿಕ ತಾತ್ಕಾಲಿಕ ಅತಿಥಿ ಉಪನ್ಯಾಸಕರ ಸೇವೆಯನ್ನು ಪಡೆಯಲು ವಿಷಯಗಳ ಬೋಧನಾ ಕಾರ್ಯಭಾರಕ್ಕೆ ಅನುಗುಣವಾಗಿ ಅರ್ಹ ಅಭ್ಯರ್ಥಿಗಳಿಂದ ದಿನಾಂಕ: 11.10.2021, 12.10.2021 ಮತ್ತು 13.10.2021  ರಂದು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ. 


ಅಭ್ಯರ್ಥಿಗಳು ವೆಬ್ ಸೈಟ್ ನಲ್ಲಿ ಲಭ್ಯವಿರುವ ಗೂಗಲ್ ಸೀಟ್ ಲಿಂಕ್ ಅನ್ನು ಬಳಸಿ ವಿವರಗಳನ್ನು ಭರ್ತಿ ಮಾಡಬೇಕು ಹಾಗೂ ಅರ್ಜಿ ನಮೂನೆಯನ್ನು ವಿಶ್ವವಿದ್ಯಾಲಯದ ವೆಬ್ ಸೈಟ್ ಜಾಲತಾಣನಿಂದ ಡೌನ್ ಲೋಡ್ ಮಾಡಿಕೊಂಡು ದ್ವಿ ಪ್ರತಿಯೊಂದಿಗೆ ಸಂದರ್ಶನಕ್ಕೆ ಹಾಜರಾಗುವುದು.

ಈ ನೇಮಕಾತಿಯ ಕುರಿತು ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ಪತ್ರಿಕಾ ಪ್ರಕಟಣೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದಾಗಿದೆ.
Application Start Date:  2 ಅಕ್ಟೋಬರ್ 2021
Application End Date:  11 ಅಕ್ಟೋಬರ್ 2021
Work Location:  Karnataka
To Download the News Paper notification

Comments