Loading..!

ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದಲ್ಲಿ ಖಾಲಿ ಇರುವ ಬೋಧಕೇತರ ಹುದ್ದೆಗಳಿಗೆ ಅಂಚೆ ಮೂಲಕ ಅರ್ಜಿ ಅಹ್ವಾನ .
| Date:9 ಅಕ್ಟೋಬರ್ 2019
not found
ಬೆಳಗಾವಿಯಲ್ಲಿರುವ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಸ್ಥಳೀಯ ವೃಂದದಲ್ಲಿ ಲಭ್ಯವಿರುವ ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತರು ಅಕ್ಟೋಬರ್ 12 ರೊಳಗೆ ರಿಜಿಸ್ಟರ್ಡ್ ಅಂಚೆ ಮೂಲಕ ಅಥವಾ ಖುದ್ದಾಗಿ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ. ನಿಗದಿತ ನಮೂನೆಯಲ್ಲಿಯೇ ಅರ್ಜಿ ಸಲ್ಲಿಸಬೇಕಾಗಿದ್ದು,ಅರ್ಜಿ ನಮೂನೆ ಮತ್ತು ಅಧಿಸೂಚನೆಯನ್ನು ವಿಶ್ವವಿದ್ಯಾಲಯದ ವೆಬ್ ಸೈಟ್ ನಲ್ಲಿ ಒದಗಿಸಲಾಗಿದೆ.

ಹುದ್ದೆಗಳ ವಿವರ:
* ಉಪಕುಲಸಚಿವರು - 01
* ಸಹಾಯಕ ಕುಲಸಚಿವರು - 01
* ಕಚೇರಿ ಅಧೀಕ್ಷಕರು - 01
* ವೈದ್ಯಾಧಿಕಾರಿಗಳು - 01
* ಸಿಸ್ಟಮ್ ಅಸಿಸ್ಟೆಂಟ್ - 01
* ಎಸ್ಟೇಟ್ ಆಫಿಸರ್ - 01
* ನರ್ಸ್ - 01
* ಕಂಪೌಂಡರ್ - 01
* ಫೀಲ್ಡ್ ಕೋಚ್ - 01
* ಡಿ ದರ್ಜೆ ನೌಕರರು - 06

ಅಂಚೆ ಕಳುಹಿಸುವ ವಿಳಾಸ :
ಕುಲಸಚಿವರು,ರಾಣಿ ಚನ್ನಮ್ಮ ವಿವಿ, ವಿದ್ಯಾಸಂಗಮ, ಬೆಳಗಾವಿ - 591156

ಹೆಚ್ಚಿನ ವಿವರಗಳಿಗೆ : www.rcub.ac.in
No. of posts:  15
Application Start Date:  9 ಅಕ್ಟೋಬರ್ 2019
Application End Date:  12 ಅಕ್ಟೋಬರ್ 2019
Work Location:  Belagavi
Qualification: ಹುದ್ದೆಗಳಿಗನುಸಾರವಾಗಿ ವಿವಿಧ ವಿದ್ಯಾರ್ಹತೆಯನ್ನು ಹೊಂದಿರುವ ಕಾರಣ ಅಭ್ಯರ್ಥಿಗಳು ಅಧಿಸೂಚನೆಯನ್ನು ವೆಬ್ ಸೈಟ್ ನಲ್ಲಿ ಡೌನ್ ಲೋಡ್ ಮಾಡಿಕೊಂಡು ಗಮನಿಸಬೇಕಾಗಿದೆ.
Fee: * ವಿಕಲಚೇತನ ಅಭ್ಯರ್ಥಿಗಳಿಗೆ ಸಂಪೂರ್ಣ ಶುಲ್ಕ ವಿನಾಯಿತಿ ನೀಡಲಾಗಿದೆ.
* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ. 500 /- ಹಾಗೂ ಇನ್ನುಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ರೂ. 1000 /- ಶುಲ್ಕ ನಿಗದಿಪಡಿಸಲಾಗಿದೆ.
* ಶುಲ್ಕವನ್ನು 'ಹಣಕಾಸು ಅಧಿಕಾರಿಗಳು' ಹೆಸರಿನಲ್ಲಿ ಡಿಡಿ ಪಡೆದು ಪಾವತಿಸಬೇಕಿರುತ್ತದೆ.
Age Limit: * ಅಭ್ಯರ್ಥಿಗಳ ವಯಸ್ಸು 18 ರಿಂದ 35 ವರ್ಷದೊಳಗಿರಬೇಕು.
* 2ಎ, 2ಬಿ, 3ಎ ಮತ್ತು 3ಬಿ ವರ್ಗದ ಅಭ್ಯರ್ಥಿಗಳು ಆಗಿದ್ದಲ್ಲಿ ಗರಿಷ್ಠ ವಯೋಮಿತಿ 38 ವರ್ಷ ಹಾಗೂ ಪರಿಶಿಷ್ಟ ಜಾತಿ / ಪಂಗಡ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 40 ವರ್ಷ.
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಸಾಮಾನ್ಯ ಜ್ಞಾನ (General Knowledge) ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments