Loading..!

ಭಾರತೀಯ ರಿಸರ್ವ್ ಬ್ಯಾಂಕ್ (RBI) ನೇಮಕಾತಿ 2025: ಸಹಾಯಕ ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ
Tags: Degree
Published by: Bhagya R K | Date:11 ಜುಲೈ 2025
not found

ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ 2025 ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದ್ದು, 28 ಹುದ್ದೆಗಳಿಗಾಗಿ ಅರ್ಜಿ ಆಹ್ವಾನ ನೀಡಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿ ಕೊಳ್ಳಬೇಕು, ಉದ್ಯೋಗ ನಿರೀಕ್ಷೆ ಹೊಂದಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. 


🔹ಈ ನೇಮಕಾತಿಯಲ್ಲಿ ಕಾನೂನು ಅಧಿಕಾರಿ (ಗ್ರೇಡ್ ‘ಬಿ’), ಸಹಾಯಕ ವ್ಯವಸ್ಥಾಪಕ, ವ್ಯವಸ್ಥಾಪಕರು (ತಾಂತ್ರಿಕ - ಸಿವಿಲ್) ಗ್ರೇಡ್ ‘ಬಿ’, ಸಹಾಯಕ ವ್ಯವಸ್ಥಾಪಕರು (ರಾಜಭಾಷಾ) ಗ್ರೇಡ್ ‘ಎ’ ಮತ್ತು ವ್ಯವಸ್ಥಾಪಕರು (ತಾಂತ್ರಿಕ - ವಿದ್ಯುತ್) ಗ್ರೇಡ್ ‘ಬಿ’ ಸೇರಿದಂತೆ ಹಲವಾರು ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆನ್ ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.     


🔹ದೇಶದಾದ್ಯಂತ ಕೇಂದ್ರ ಸರ್ಕಾರದ ಉತ್ತಮ ಉದ್ಯೋಗವನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮುಖಾಂತರ 2025ರ ಜುಲೈ 31ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.


📢 ನೇಮಕಾತಿ ಮುಖ್ಯಾಂಶಗಳು :
ಸಂಸ್ಥೆ ಹೆಸರು : ಭಾರತೀಯ ರಿಸರ್ವ್ ಬ್ಯಾಂಕ್ (RBI)
ಒಟ್ಟು ಹುದ್ದೆಗಳ ಸಂಖ್ಯೆ : 28
ಹುದ್ದೆಯ ಹೆಸರು : ಸಹಾಯಕ ವ್ಯವಸ್ಥಾಪಕರು
ಉದ್ಯೋಗ ಸ್ಥಳ : ಅಖಿಲ ಭಾರತ
ಅರ್ಜಿಯ ವಿಧಾನ : ಆನ್‌ಲೈನ್‌ ಮೂಲಕ


📢ಹುದ್ದೆಗಳ ವಿವರ :
* ಕಾನೂನು ಅಧಿಕಾರಿ (ಗ್ರೇಡ್ ‘ಬಿ’)
* ವ್ಯವಸ್ಥಾಪಕರು (ತಾಂತ್ರಿಕ - ಸಿವಿಲ್) ಗ್ರೇಡ್ ‘ಬಿ’
* ವ್ಯವಸ್ಥಾಪಕರು (ತಾಂತ್ರಿಕ - ವಿದ್ಯುತ್) ಗ್ರೇಡ್ ‘ಬಿ’
* ಸಹಾಯಕ ವ್ಯವಸ್ಥಾಪಕರು (ರಾಜಭಾಷಾ) ಗ್ರೇಡ್ ‘ಎ’
* ಸಹಾಯಕ ವ್ಯವಸ್ಥಾಪಕರು (ಪ್ರೋಟೋಕಾಲ್ ಮತ್ತು ಭದ್ರತೆ) ಗ್ರೇಡ್ ‘ಎ’


📝ವಯೋಮಿತಿ :
* ಕನಿಷ್ಠ: 21 ವರ್ಷ
* ಗರಿಷ್ಠ: 35 ವರ್ಷ
  *(ವಯೋಮಿತಿಯಲ್ಲಿ ಷರತ್ತುಗಳ ಮೇರೆಗೆ ವಿನಾಯಿತಿ ಇರುವ ಸಾಧ್ಯತೆ ಇದೆ)*


🎓ಶೈಕ್ಷಣಿಕ ಅರ್ಹತೆ :
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರಬೇಕು. ಹುದ್ದೆಗಳ ಪ್ರಕಾರ ಆಯಾ ಶಾಖೆಗಳಿಗೆ ಸಂಬಂಧಪಟ್ಟ ಶೈಕ್ಷಣಿಕ ಅರ್ಹತೆ ಅಗತ್ಯವಿರಬಹುದು.


📝ಆಯ್ಕೆ ವಿಧಾನ :
1. ಆನ್‌ಲೈನ್ ಪರೀಕ್ಷೆ
2. ಗುಂಪು ಚರ್ಚೆ
3. ವೈಯಕ್ತಿಕ ಸಂದರ್ಶನ


💰 ಅರ್ಜಿಶುಲ್ಕ :
=> SC/ST/PWD/ESM  ಅಭ್ಯರ್ಥಿಗಳಿಗೆ : ₹100/- 
=> ಸಾಮಾನ್ಯ/OBC/EWS ಅಭ್ಯರ್ಥಿಗಳಿಗೆ : ₹600/- 


📌ಅರ್ಜಿಯನ್ನು ಸಲ್ಲಿಸುವ ವಿಧಾನ :
1. RBI ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
2. ನೇಮಕಾತಿ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ ಮತ್ತು ಓದಿ.
3. ಆನ್‌ಲೈನ್ ಲಿಂಕ್‌ ಮೂಲಕ ಅರ್ಜಿ ಭರ್ತಿ ಮಾಡಿ.
4. ಅಗತ್ಯ ದಾಖಲೆಗಳು, ಪೋಟೋ ಹಾಗೂ ಸಹಿಯನ್ನು ಅಪ್‌ಲೋಡ್ ಮಾಡಿ.
5. ಅರ್ಜಿ ಶುಲ್ಕ ಪಾವತಿಸಿ (ವರ್ಗಾನುಸಾರ)
6. ಸಲ್ಲಿಸಿದ ಅರ್ಜಿಯ ಪ್ರತಿಯನ್ನು ಮುದ್ರಿಸಿ ಕಾಪಿ ಇಡಿಕೊಳ್ಳಿ.


📅ಪ್ರಮುಖ ದಿನಾಂಕಗಳು :
ಅರ್ಜಿ ಪ್ರಾರಂಭ ದಿನಾಂಕ : 11-ಜುಲೈ-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-ಜುಲೈ-2025


- ಹೆಚ್ಚಿನ ಮಾಹಿತಿಗೆ RBI ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಪ್ರತಿ ಹಂತದಲ್ಲಿ ತಯಾರಿ ಮಾಡಿಕೊಂಡಿರಲಿ.

Comments