ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (PGCIL) ಶಿಶುಕ್ಷು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
Published by: Rukmini Krushna Ganiger | Date:23 ಆಗಸ್ಟ್ 2021

- ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (PGCIL) 1110 ಶಿಶುಕ್ಷು (ಅಪ್ರೆಂಟಿಸ್) ಹುದ್ದೆಗಳ ನೇಮಕಾತಿಗೆ ಕಳೆದ ತಿಂಗಳು ಅಧಿಸೂಚನೆ ಹೊರಡಿಸಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಸದರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪ್ರಸ್ತುತ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ ಮಾಡಿದೆ. ಪರಿಷ್ಕೃತ ವೇಳಾಪಟ್ಟಿ ಪ್ರಕಾರ ದಿನಾಂಕ : 31 / ಆಗಸ್ಟ್ / 2021 ರವರೆಗೆ ಅರ್ಜಿ ಸಲ್ಲಿಸಬಹುದು. ಈ ಹಿಂದೆ ದಿನಾಂಕ : 20 / ಆಗಸ್ಟ್ / 2021 ರವರೆಗೆ ಅರ್ಜಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಈ ಹುದ್ದೆಗಳನ್ನು PGCIL ನ ವಿವಿಧ ರಾಜ್ಯದ ಪ್ರಾದೇಶಿಕ ಕೇಂದ್ರಗಳಲ್ಲಿ ನೇಮಕ ಮಾಡಲಿದೆ. ದಕ್ಷಿಣ ಪ್ರಾದೇಶಿಕ ಕಛೇರಿಗಳ ಪೈಕಿ ಬೆಂಗಳೂರು ಶಾಖೆಯಲ್ಲಿಯೂ ಶಿಶುಕ್ಷು (ಅಪ್ರೆಂಟಿಸ್) ಹುದ್ದೆಗಳನ್ನು ನೇಮಕ ಮಾಡಲಿದ್ದು, 114 ಹುದ್ದೆಗಳು ಖಾಲಿ ಇವೆ.
No. of posts: 1110
Application Start Date: 23 ಆಗಸ್ಟ್ 2021
Application End Date: 31 ಆಗಸ್ಟ್ 2021
Work Location: India
Selection Procedure: - ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಆಯ್ಕೆಯನ್ನು ಲಿಖಿತ ಪರೀಕ್ಷೆ ತರುವಾಯ ಸಂದರ್ಶನದ ಮೂಲಕ ಶಾರ್ಟ್ ಲಿಸ್ಟ್ ಮಾಡಿ ಆಯ್ಕೆ ಮಾಡಲಾಗುವುದು.
Qualification:
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಹೊಂದಿರುವ ವಿಶ್ವವಿದ್ಯಾಲಯ / ಬೋರ್ಡ್ ಯಿಂದ ಹುದ್ದೆಗಳಿಗೆ ಸಂಬಂಧಿಸಿದಂತೆ
* ITI ಅಪ್ರೆಂಟಿಸ್‌ಗಾಗಿ: ITI (ಎಲೆಕ್ಟ್ರಿಕಲ್)
* ಡಿಪ್ಲೊಮಾ ಅಪ್ರೆಂಟಿಸ್‌ಗಾಗಿ: ಡಿಪ್ಲೊಮಾ (ಸಿವಿಲ್/ ಎಲೆಕ್ಟ್ರಿಕಲ್ ಎಂಜಿನಿಯರಿಂಗ್)
* ಪದವಿ ಅಪ್ರೆಂಟಿಸ್‌ಗಾಗಿ: B.E./B.Tech./B.Sc.(Engg.)
* ಮಾನವ ಸಂಪನ್ಮೂಲ ಕಾರ್ಯನಿರ್ವಾಹಕರಿಗೆ: MBA (HR) / MSW / PG ಡಿಪ್ಲೊಮಾ (ಸಿಬ್ಬಂದಿ ನಿರ್ವಹಣೆ / ಸಿಬ್ಬಂದಿ ನಿರ್ವಹಣೆ ಮತ್ತು ಕೈಗಾರಿಕಾ ಸಂಬಂಧ) ವಿದ್ಯಾರ್ಹತೆಯನ್ನು ಹೊಂದಿರಬೇಕು.
Age Limit:
- ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು PGCIL ನಿಯಮಗಳ ಪ್ರಕಾರ ಕನಿಷ್ಠ 18 ವರ್ಷ ವಯೋಮಿತಿಯನ್ನು ಹೊಂದಿರಬೇಕು.
* ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.





Comments