ನೆಹರು ಯುವಕೇಂದ್ರ ಸಂಘಟನೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಕಳೆದ ಮೇ 31 ರಂದು ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಪ್ರಕಟಿಸಿರುವ ನೆಹರು ಯುವಕೇಂದ್ರ ಸಂಘಟನೆಯು ಇದೀಗ ಆನ್ಲೈನ್ ಅರ್ಜಿ ಸಲ್ಲಿಕೆಗೆ ಚಾಲನೆ ನೀಡಿದೆ. ದೇಶದ ಯುವಜನರ ಅಭಿವೃದ್ಧಿ ದೃಷ್ಟಿಯಿಂದ ಸ್ಥಾಪಿಸಲಾಗಿರುವ ನೆಹರು ಯುವ ಕೇಂದ್ರ ಕರ್ನಾಟಕ ಸೇರಿದಂತೆ ದೇಶಾದ್ಯಂತ 337 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ. ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು.
No. of posts: 337
Application Start Date: 22 ಜುಲೈ 2019
Application End Date: 7 ಆಗಸ್ಟ್ 2019
Qualification: * ಡಿಸ್ಟಿಕ್ ಯೂಥ್ ಕೋ -ಆರ್ಡಿನೇಟರ್ ಹುದ್ದೆಗೆ: ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಯುವಜನರಿಗೆ ಸಂಬಂಧಿಸಿದ ವಿವಿಧ ಕ್ಷೇತ್ರಗಳು, ಗ್ರಾಮೀಣ ಅಭಿವೃದ್ಧಿ ಅಥವಾ ಇತರೆ ಸಾಮಾಜಿಕ ಕ್ಷೇತ್ರಗಳಲ್ಲಿ ಕನಿಷ್ಠ ಮೂರು ವರ್ಷ ಕೆಲಸಮಾಡಿದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
* ಜೂನಿಯರ್ ಕಂಪ್ಯೂಟರ್ ಪ್ರೋಗ್ರಾಮರ್ ಹುದ್ದೆಗೆ: ಕಂಪ್ಯೂಟರ್ ಸೈನ್ಸ್ ನಲ್ಲಿ ಸ್ನಾತಕೋತ್ತರ ಅಥವಾ ಬಿ.ಇ/ಎಂ.ಸಿ.ಎ ವಿದ್ಯಾರ್ಹತೆ ಇರುವವರು ಅರ್ಜಿ ಸಲ್ಲಿಸಬಹುವುದು.
ಡೆವೆಲಪಮೆಂಟ್ ಗೆ ಮತ್ತು ಡಿಸೈನಿಂಗ್ ಸಾಫ್ಟ್ ವೆರ್ ಪ್ರೋಗ್ರಾಮ್ ಗೆ ಸಂಬದ್ದಪಟ್ಟಂತೆ ಸೇವಾನುಭವ ಇರುವವರು ಅರ್ಜಿ ಸಲ್ಲಿಸಲು ಅವಕಾಶವಿದೆ.
* ಸೀನಿಯರ್ ಹಿಂದಿ ಟ್ರಾನ್ಸ್ಲೇಟರ್ ಹುದ್ದೆ : ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದವರು ( ಈ ಅಭ್ಯರ್ಥಿಗಳು ಪದವಿಯಲ್ಲಿ ಹಿಂದಿ ಅಥವಾ ಇಂಗ್ಲಿಷ್ ವಿಷಯವನ್ನು ಕಡ್ಡಾಯ ಭಾಷೆಯನ್ನಾಗಿ ಕಲಿಯಬೇಕು)
*ಅಸಿಸ್ಟಂಟ್ ಮತ್ತು ಲೈಬ್ರರಿಯನ್ ಹುದ್ದೆ : ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ. ಅಸಿಸ್ಟಂಟ್ ಹುದ್ದೆಯ ಅಭ್ಯರ್ಥಿಗಳು ಅಡ್ಮಿನಿಸ್ಟ್ರೇಟರ್ ಮತ್ತು ಅಕೌಂಟ್ಸ್ ನಲ್ಲಿ 3 ವರ್ಷ ಗಳ ಸೇವಾನುಭವ ಹೊಂದಿರಬೇಕು. ಲೈಬ್ರರಿಯನ್ ಹುದ್ದೆಗೆ ಲೈಬ್ರರಿ ಲೈನ್ಸ್ ನಲ್ಲಿ ಡಿಪ್ಲೋಮ ಮಾಡಿರಬೇಕು.
* ಕಂಪ್ಯೂಟರ್ ಆಪ್ರೇಟರ್ ಹುದ್ದೆಗೆ ಪದವಿ ಜೊತೆಗೆ ಒಂದು ವರ್ಷದ ಸೆರ್ಟಿಫಿಕೇಟ್ ಕೋರ್ಸ್ ಪಡೆದವರು ಅರ್ಜಿ ಸಲ್ಲಿಸಬಹುದು.
* ಅಕೌಂಟ್ ಕ್ಲರ್ಕ್ ಕಂ ಟೈಪಿಸ್ಟ್ ಹುದ್ದೆಯ ಅಭ್ಯರ್ಥಿಗಳು ಬಿಕಾಂ ಅಥವಾ ಪದವಿ ಬಳಿಕ 2 ವರ್ಷ ಅಕೌಂಟ್ಸ್ ವಿಭಾಗದಲ್ಲಿ ಕೆಲಸ ಮಾಡಿರಬೇಕು
* ಸ್ಟೆನೊ ಗ್ರಾಪರ್ ಮತ್ತು ಲೋವರ್ ಡಿವಿಷನ್ ಕ್ಲರ್ಕ್ ಹುದ್ದೆಗೆ ದ್ವಿತೀಯ ಪಿಯುಸಿ ಮತ್ತು
* ಎಂಟಿಎಸ್ ಹುದ್ದೆಗೆ : SSLC ತೇರ್ಗಡೆಯಾಗಿರುವವರು ಅರ್ಜಿ ಸಲ್ಲಿಸಬಹುದಾಗಿದೆ.
Fee: ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 700/- ರೂ. ಹಾಗೂ ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 350/- ರೂ. ನಿಗದಿಪಡಿಸಲಾಗಿದೆ.
Age Limit: * ಸ್ಟೆನೊಗ್ರಾಫರ್ ಹುದ್ದೆಗೆ 18ರಿಂದ 27 ವರ್ಷದೊಳಗಿನವರು,
* ಎಂಟಿಎಸ್ ಹುದ್ದೆಗೆ 18 ರಿಂದ 25 ವರ್ಷದೊಳಗಿನವರು ಅರ್ಜಿಸಲ್ಲಿಸಬಹುದು.
* ಇನ್ನುಳಿದ ಎಲ್ಲಾ ಹುದ್ದೆಗಳಿಗೂ ಗರಿಷ್ಠ ವಯೋಮಿತಿ 28 ವರ್ಷ.
Pay Scale: * District Youth Coordinator (Level 10: 56100-177500)
* Junior Comp. Programmer (Level 7: 44900-142400)
* Senior Hindi Translator (Level 7: 44900-142400)
* Assistant (Level 6: 35400-112400)
* Librarian (Level 6: 35400-112400)
* Stenographer Grade-II (Level 6: 35400-112400)