Loading..!

ಪದವಿ ಪಾಸಾದ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ: ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಮ್ಯಾನೇಜರ್ ಮತ್ತು ಸೀನಿಯರ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Tags: Degree
Published by: Bhagya R K | Date:16 ಆಗಸ್ಟ್ 2025
not found

ಇದು ಕೇವಲ ಉದ್ಯೋಗಾವಕಾಶವಲ್ಲ, ಭದ್ರ ಭವಿಷ್ಯಕ್ಕೆ ಒಂದು ದಾರಿ. ಅಖಿಲ ಭಾರತ ಮಟ್ಟದಲ್ಲಿ  ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (NTPC) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಉತ್ಸಾಹಿ ಮತ್ತು ಅರ್ಹ ಭಾರತದ ಅಭ್ಯರ್ಥಿಗಳಿಂದ ಮಾತ್ರ ಅರ್ಜಿಯನ್ನು ಆಹ್ವಾನಿಸಲಾಗಿದೆ, ಅಭ್ಯರ್ಥಿಗಳು ಆಗಸ್ಟ್ 26, 2025 ರ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. 


                          ಹೌದು ಬರೀ ಯಾವುದೇ ಪದವಿ ಪಾಸಾಗಿದ್ರೆ ಸಾಕು ಇಲ್ಲಿದೆ ಅವಕಾಶ,  2025-26ನೇ ಸಾಲಿಗಾಗಿ ವಿವಿಧ ವೇತನ ಶ್ರೇಣಿಯ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆಯನ್ನು ಹೊರಡಿಸಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಸಂಸ್ಥೆ ಒಟ್ಟು25 ಮ್ಯಾನೇಜರ್ ಮತ್ತು ಸೀನಿಯರ್ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಸರ್ಕಾರಿ ಉದ್ಯೋಗ ಎಂದರೆ ಸ್ಥಿರತೆ, ಭದ್ರತೆ ಮತ್ತು ಸಮಾಜದಲ್ಲಿ ಗೌರವ. 


                    ಪದವಿ ಪಾಸಾದ ಯುವಕ ಯುವತಿಯರಿಗೆ ಇದು ಉಜ್ವಲ ಅವಕಾಶವಾಗಿದ್ದು, ಇದು ನಿಮ್ಮ ಸರ್ಕಾರ ಉದ್ಯೋಗದ ಕನಸು ಸಾಕಾರಗೊಳಿಸಬಹುದಾದ ಸನ್ನಿವೇಶವಾಗಿದೆ. 


📌ಹುದ್ದೆಗಳ ವಿವರ : 
🏛ಹುದ್ದೆಗಳ ಹೆಸರು: ಮ್ಯಾನೇಜರ್, ಸೀನಿಯರ್ ಮ್ಯಾನೇಜರ್
🧾ಒಟ್ಟು ಹುದ್ದೆಗಳು: 25
📍ಉದ್ಯೋಗ ಸ್ಥಳ: ಅಖಿಲ ಭಾರತ
💸ಅರ್ಜಿಯ ವಿಧಾನ: ಆನ್‌ಲೈನ್


💰ವೇತನ ಶ್ರೇಣಿ : 
ಅಧಿಕೃತ ಅಧಿಸೂಚನೆಯ ಪ್ರಕಾರ, ಆಯ್ಕೆಯಾದ ಅಭ್ಯರ್ಥಿಗಳಿಗೆ ₹80,000 ರಿಂದ ₹2,80,000 ರೂಪಾಯಿ ಪ್ರತಿಮಾಸ ವೇತನ ನೀಡಲಾಗುತ್ತದೆ.


🎂ವಯೋಮಿತಿ :
ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 55 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು.


ವಯೋಮಿತಿ ಸಡಿಲಿಕೆ :
• OBC (NCL) ಅಭ್ಯರ್ಥಿಗಳಿಗೆ : 3 ವರ್ಷಗಳು
• SC, ST ಅಭ್ಯರ್ಥಿಗಳಿಗೆ: 5 ವರ್ಷಗಳು
• PWBD ಅಭ್ಯರ್ಥಿಗಳಿಗೆ: 10 ವರ್ಷಗಳು


🎓ಶೈಕ್ಷಣಿಕ ಅರ್ಹತೆ : 
NTPC ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಬಿ ಇ ಅಥವಾ ಬಿ ಟೆಕ್ ಪದವಿ ಪೂರ್ಣಗೊಳಿಸಿರಬೇಕು.


💰ಅರ್ಜಿ ಶುಲ್ಕ : 
- SC/ST/PwBD/XSM/ಮಹಿಳಾ ಅಭ್ಯರ್ಥಿಗಳು: ಶುಲ್ಕವಿಲ್ಲ
- ಸಾಮಾನ್ಯ/OBC/EWS ಅಭ್ಯರ್ಥಿಗಳು: ₹300


💼ಆಯ್ಕೆ ವಿಧಾನ
- ಆನ್‌ಲೈನ್ ಪರೀಕ್ಷೆ
- ಸಂದರ್ಶನ


📝ಅರ್ಜಿ ಸಲ್ಲಿಸುವ ವಿಧಾನ
1. ಕೆಳಗಿನ ಲಿಂಕ್/ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಸೂಚನೆಯನ್ನು ಡೌನ್‌ಲೋಡ್ ಮಾಡಿ.
2. ಅಧಿಕೃತ ಸೂಚನೆಯನ್ನು ಎಚ್ಚರಿಕೆಯಿಂದ ಓದಿ.
3. ಕೆಳಗಿನ ಆನ್‌ಲೈನ್/ಆಫ್‌ಲೈನ್ ಅಪ್ಲಿಕೇಶನ್‌ಗಳ ಲಿಂಕ್ ಅನ್ನು ಕ್ಲಿಕ್ ಮಾಡಿ.
4. ಕೊಟ್ಟಿರುವ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ.
5. ಅರ್ಜಿ ಶುಲ್ಕದ ಪಾವತಿ (ವಿನಂತಿಸಿದರೆ ಮಾತ್ರ)
6. ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಿ.
7. ಮತ್ತೊಮ್ಮೆ ಪರಿಶೀಲಿಸಿ ಮತ್ತು ಫಾರ್ಮ್ ಅನ್ನು ಸಲ್ಲಿಸಿ.
8. ಅಂತಿಮವಾಗಿ, ಅದನ್ನು ಮುದ್ರಿಸಲು ಮರೆಯಬೇಡಿ.


📅ಪ್ರಮುಖ ದಿನಾಂಕಗಳು :
ಅರ್ಜಿ ಪ್ರಾರಂಭ ದಿನಾಂಕ: 12-ಆಗಸ್ಟ್-2025
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 26-ಆಗಸ್ಟ್-2025


ಇದೊಂದು ಕೇಂದ್ರ ಸರ್ಕಾರಿ ಉನ್ನತ ಹುದ್ದೆಯ ಅವಕಾಶವಾಗಿದ್ದು, ಅರ್ಹ ಅಭ್ಯರ್ಥಿಗಳು ಸಮಯ ಮೀರದೇ ಅರ್ಜಿ ಸಲ್ಲಿಸಲು ಸಲಹೆ ನೀಡಲಾಗಿದೆ.

Comments