NLC ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ | ಪದವಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ನೈವೇಲಿ ಲಿಗ್ನೈಟ್ ಕಾರ್ಪೊರೇಷನ್ ( NLC ) ಇಂಡಿಯಾ ಲಿಮಿಟೆಡ್ ಭಾರತ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನವರತ್ನ ಕಂಪನಿಯಾಗಿದ್ದು, ಪ್ರಸ್ತುತ ಉದ್ಯಮದಲ್ಲಿ ಖಾಲಿ ಇರುವ 190 ಜೂನಿಯರ್ ಓವರ್‌ಮ್ಯಾನ್ ಮತ್ತು ಮೈನಿಂಗ್ ಸಿರ್ದಾರ್ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಭಾರತೀಯ ಪ್ರಜೆ ಯಾಗಿರಬೇಕು.
ಹುದ್ದೆಗಳ ವಿವರ : 190
- ಜೂನಿಯರ್ ಓವರ್‌ಮ್ಯಾನ್ (ಟ್ರೇಯ್ನಿ) (ನೇಯ್ವೆಲಿ): 69 ಹುದ್ದೆಗಳು
- ಮೈನಿಂಗ್ ಸಿರ್ದಾರ್ (ನೇಯ್ವೆಲಿ): 102 ಹುದ್ದೆಗಳು
- ಜೂನಿಯರ್ ಓವರ್‌ಮ್ಯಾನ್ (ಟ್ರೇಯ್ನಿ) (ಒಡಿಶಾ & ಜಾರ್ಖಂಡ್): 4 ಹುದ್ದೆಗಳು
- ಮೈನಿಂಗ್ ಸಿರ್ದಾರ್ (ಒಡಿಶಾ & ಜಾರ್ಖಂಡ್): 15 ಹುದ್ದೆಗಳು
ವಿದ್ಯಾರ್ಹತೆ :
# ಜೂನಿಯರ್ ಓವರ್‌ಮ್ಯಾನ್ (ಟ್ರೇಯ್ನಿ): ಮೈನಿಂಗ್ ಅಥವಾ ಮೈನಿಂಗ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ
# ಮೈನಿಂಗ್ ಸಿರ್ದಾರ್: ಡಿಪ್ಲೊಮಾ ಅಥವಾ ಪದವಿ
# ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯಗಳಿಂದ ಪಡೆದಿರಬೇಕು.
ವಯೋಮಿತಿ :
ಗರಿಷ್ಠ ವಯಸ್ಸು : 30 ವರ್ಷಗಳು (2025 ಏಪ್ರಿಲ್ 1 ರಂತೆ)
ವಯೋಮಿತಿಯಲ್ಲಿ ಸಡಿಲಿಕೆ:
OBC ಅಭ್ಯರ್ಥಿಗಳಿಗೆ: 3 ವರ್ಷಗಳು
SC/ST ಅಭ್ಯರ್ಥಿಗಳಿಗೆ: 5 ವರ್ಷಗಳು
ವೇತನ ಶ್ರೇಣಿ :
- ಜೂನಿಯರ್ ಓವರ್‌ಮ್ಯಾನ್ (ಟ್ರೇಯ್ನಿ): ₹31,000/- ರಿಂದ ₹1,00,000/-
- ಮೈನಿಂಗ್ ಸಿರ್ದಾರ್: ₹26,000/- ರಿಂದ ₹1,10,000/-
ಅರ್ಜಿ ಶುಲ್ಕ :
* ಜೂನಿಯರ್ ಓವರ್‌ಮ್ಯಾನ್ ಹುದ್ದೆಗೆ:
UR/EWS/OBC (NCL) ಅಭ್ಯರ್ಥಿಗಳು: ₹595/-
SC/ST/ಎಕ್ಸ್-ಸರ್ವಿಸ್ಮನ್ ಅಭ್ಯರ್ಥಿಗಳು: ₹295/-
* ಮೈನಿಂಗ್ ಸಿರ್ದಾರ್ ಹುದ್ದೆಗೆ:
UR/EWS/OBC (NCL) ಅಭ್ಯರ್ಥಿಗಳು: ₹486/-\
SC/ST/ಎಕ್ಸ್-ಸರ್ವಿಸ್ಮನ್ ಅಭ್ಯರ್ಥಿಗಳು: ₹236/-
ಪಾವತಿ ವಿಧಾನ : ಆನ್‌ಲೈನ್
ಅರ್ಜಿ ಸಲ್ಲಿಸುವ ವಿಧಾನ :
1. ಅಭ್ಯರ್ಥಿಗಳು NLC ಅಧಿಕೃತ ವೆಬ್‌ಸೈಟ್ nlcindia.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.
2. ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕಗಳು ಹುದ್ದೆಗಳ ಪ್ರಕಾರ ವಿಭಿನ್ನವಾಗಿವೆ:
3. ಜೂನಿಯರ್ ಓವರ್‌ಮ್ಯಾನ್ (ಟ್ರೇಯ್ನಿ) (ನೇಯ್ವೆಲಿ) ಮತ್ತು ಮೈನಿಂಗ್ ಸಿರ್ದಾರ್ (ನೇಯ್ವೆಲಿ): 2025 ಏಪ್ರಿಲ್ 15 ರಿಂದ 2025 ಮೇ 14
4. ಜೂನಿಯರ್ ಓವರ್‌ಮ್ಯಾನ್ (ಟ್ರೇಯ್ನಿ) (ಒಡಿಶಾ & ಜಾರ್ಖಂಡ್) ಮತ್ತು ಮೈನಿಂಗ್ ಸಿರ್ದಾರ್ (ಒಡಿಶಾ & ಜಾರ್ಖಂಡ್): 2025 ಏಪ್ರಿಲ್ 9 ರಿಂದ 2025 ಮೇ 8
5. ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.
6. ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.
7. ಅರ್ಜಿ ಸಲ್ಲಿಸಿದ ನಂತರ, ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ಸಂಖ್ಯೆಯನ್ನು ಸಂಗ್ರಹಿಸಿ.
ಆಯ್ಕೆ ಪ್ರಕ್ರಿಯೆ :
ಅಭ್ಯರ್ಥಿಗಳ ಆಯ್ಕೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ನಡೆಯಲಿದೆ.
ಪ್ರಮುಖ ದಿನಾಂಕಗಳು (Important Dates) :
- ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭದ ದಿನಾಂಕ: 09-ಏಪ್ರಿಲ್-2025
- ಆನ್‌ಲೈನ್ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಮತ್ತು ಶುಲ್ಕ ಪಾವತಿಯ ಅಂತಿಮ ದಿನಾಂಕ: 14-ಮೇ-2025
- ಈಗಿನ ಅರ್ಜಿ ಸಲ್ಲಿಕೆಗೆ (ತಮಿಳುನಾಡು ಪ್ರದೇಶದ ಜೂನಿಯರ್ ಓವರ್‌ಮ್ಯಾನ್, ಮೈನಿಂಗ್ ಸಿರ್ದಾರ್ ಹುದ್ದೆಗಳು) ಶುಲ್ಕ ಪಾವತಿಸಿ ನೋಂದಣಿ ಮಾಡಿಕೊಂಡ ಅಭ್ಯರ್ಥಿಗಳ ಅಂತಿಮ ಅರ್ಜಿ ಸಲ್ಲಿಕೆಯ ದಿನಾಂಕ: 15-ಮೇ-2025
- ಈಗಿನ ಅರ್ಜಿ ಸಲ್ಲಿಕೆಗೆ (ಒಡಿಶಾ ಮತ್ತು ಜಾರ್ಖಂಡ್ ಪ್ರದೇಶದ ಜೂನಿಯರ್ ಓವರ್‌ಮ್ಯಾನ್, ಮೈನಿಂಗ್ ಸಿರ್ದಾರ್ ಹುದ್ದೆಗಳು) ಶುಲ್ಕ ಪಾವತಿಸಿ ನೋಂದಣಿ ಮಾಡಿಕೊಂಡ ಅಭ್ಯರ್ಥಿಗಳ ಅಂತಿಮ ಅರ್ಜಿ ಸಲ್ಲಿಕೆಯ ದಿನಾಂಕ: 09-ಮೇ-2025
ಸೂಚನೆ: ಹೆಚ್ಚಿನ ಮಾಹಿತಿಗಾಗಿ ಮತ್ತು ಅಧಿಕೃತ ಅಧಿಸೂಚನೆಯನ್ನು ಪಡೆಯಲು, ದಯವಿಟ್ಟು NLC ಅಧಿಕೃತ ವೆಬ್‌ಸೈಟ್ nlcindia.in ಅನ್ನು ಭೇಟಿ ಮಾಡಿ.
To Download Official Notification
Neyveli Lignite Corporation Jobs 2025
NLC India Limited Vacancy 2025
NLC Job Notification 2025
NLC Online Application 2025
NLC Careers 2025
NLC recruitment for freshers and experienced professionals
Neyveli Lignite Corporation exam date and syllabus 2025





Comments