Loading..!

ರಾಷ್ಟ್ರೀಯ ಪಾರಂಪರಿಕ ಚಿಕಿತ್ಸಾ ವಿಜ್ಞಾನ ಸಂಸ್ಥೆ(NITM) ಇಲ್ಲಿ ಖಾಲಿ ಇರುವ ಡಾಟಾ ಎಂಟ್ರಿ ಆಪರೇಟರ್ ಮತ್ತು ಪ್ರಾಜೆಕ್ಟ್ ಟೆಕ್ನೀಷಿಯನ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
| Date:30 ನವೆಂಬರ್ 2019
not found
ಐಸಿಎಂಆರ್‌ - ರಾಷ್ಟ್ರೀಯ ಪಾರಂಪರಿಕ ಚಿಕಿತ್ಸಾ ವಿಜ್ಞಾನ ಸಂಸ್ಥೆ ಯು (ಎನ್‌ಐಟಿಎಂ) 4 ಡಾಟಾ ಎಂಟ್ರಿ ಆಪರೇಟರ್ ಮತ್ತು ಪ್ರಾಜೆಕ್ಟ್ ಟೆಕ್ನೀಷಿಯನ್ ಹುದ್ದೆಗಳನ್ನು ಭರ್ತಿ ಮಾಡಲು ನೇರ ಸಂದರ್ಶನ ನಡೆಸುತ್ತಿದೆ. ಆಸಕ್ತರು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಧಿಸೂಚನೆಯನ್ನು ಓದಬಹುದು. ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ 11ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಅಭ್ಯರ್ಥಿಗಳು ಹುದ್ದೆಗಳ ಬಗೆಗೆ ಇನ್ನಷ್ಟು ತಿಳಿಯಲು ಕೆಳಗೆ ನೀಡಿರುವ ಲಿಂಕ್ ಅಧಿಸೂಚನನ್ನು ಡೌನ್ಲೋಡ್ ಮಾಡಿಕೊಂಡು ಓದಿ.

ಸಂದರ್ಶನ ನಡೆಯುವ ದಿನಾಂಕ: ಡಿಸೆಂಬರ್ 11,2019

ಸಂದರ್ಶನ ನಡೆಯುವ ಸ್ಥಳ: ಐಸಿಎಂಆರ್‌ - ರಾಷ್ಟ್ರೀಯ ಪಾರಂಪರಿಕ ಚಿಕಿತ್ಸಾ ವಿಜ್ಞಾನ ಸಂಸ್ಥೆ (ಎನ್‌ಐಟಿಎಂ), ನೆಹರು ನಗರ, ಬೆಳಗಾವಿ, ಕರ್ನಾಟಕ590010. ಅಭ್ಯರ್ಥಿಗಳು ಎನ್‌ಐಟಿಎಂ ನ ಅಧಿಕೃತ ವೆಬ್‌ಸೈಟ್‌ಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಮುಂದೆ ನೋಡಿ.
No. of posts:  4
Application Start Date:  29 ನವೆಂಬರ್ 2019
Application End Date:  11 ಡಿಸೆಂಬರ್ 2019
Selection Procedure: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಅಥವಾ ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
Qualification: ಇಂಟರ್‌ಮೀಡಿಯೇಟ್ ಅಥವಾ ದ್ವಿತೀಯ ಪಿಯುಸಿ ಮತ್ತು ಮೆಟ್ರಿಕ್ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದಿರುವ ಬೋರ್ಡ್ ಅಥವಾ ಸಂಸ್ಥೆಯಿಂದ ಹೊಂದಿರುವ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಳ್ಳಲು ಅರ್ಹರು. ಬಿ.ಎಸ್ಸಿ ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
Fee: ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ. ಸಂದರ್ಶನದ ವಿವರ: ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.
Age Limit: ಹುದ್ದೆಗಳಿಗನುಸಾರ ಗರಿಷ್ಟ 28 ಮತ್ತು 30 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ವಯೋಮಿತಿ ಸಡಿಲಿಕೆಯ ವಿವರವನ್ನು ತಿಳಿಯಲು ಅಧಿಸೂಚನೆಯನ್ನು ಓದಬಹುದು.
Pay Scale: ಡಾಟಾ ಎಂಟ್ರಿ ಆಪರೇಟರ್-ಬಿ ಹುದ್ದೆಗಳಿಗೆ ನೇಮಕ ಆದ ಅಭ್ಯರ್ಥಿಗಳಿಗೆ ತಿಂಗಳಿಗೆ 18,000/-ರೂ ಮತ್ತು ಪ್ರಾಜೆಕ್ಟ್ ಟೆಕ್ನೀಷಿಯನ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 17,000/-ರೂ ವೇತನವನ್ನು ನೀಡಲಾಗುವುದು.

Comments