ಭಾರತ ಸರ್ಕಾರದ ಭಾಗವಾಗಿರುವ ನೀತಿ ಆಯೋಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ
Published by: Hanamant Katteppanavar | Date:3 ಎಪ್ರಿಲ್ 2021

ಭಾರತದ ಸರ್ಕಾರದ ಸುಸ್ಥಿರ ಅಭಿವೃದಿ ಯೋಜನೆಗಳ ರೂಪಿಸುವ ನೀತಿ ಆಯೋಗದಲ್ಲಿ ಖಾಲಿ ಇರುವ ಒಟ್ಟು 08 ಹಿರಿಯ ತಜ್ಞ ಮತ್ತು ತಜ್ಞ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಪ್ರಕ್ರಿಯೆಯು ಮೇ 22, 2021ರಂದು ಕೊನೆಗೊಳ್ಳುಲಿದೆ.
No. of posts: 8
Application Start Date: 22 ಮಾರ್ಚ್ 2021
Application End Date: 22 ಮೇ 2021
Qualification: ಹುದ್ದೆಗೆ ಅನುಗುಣವಾಗಿ Degree PG / Engineering / MBBS / PG Diploma in Management ನಲ್ಲಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
Age Limit:
- ಹಿರಿಯ ತಜ್ಞ (ಸೀನಿಯರ್ ಸ್ಪೆಷಲಿಸ್ಟ್) ಹುದ್ದೆಗೆ ಕನಿಷ್ಠ- 33 ವರ್ಷಗಳು ಮತ್ತು ಗರಿಷ್ಠ - 50 ವರ್ಷಗಳು ಮತ್ತು
- ತಜ್ಞ (ಸ್ಪೆಷಲಿಸ್ಟ್) ಹುದ್ದೆಗೆ ಕನಿಷ್ಠ - 30 ವರ್ಷಗಳು ಮತ್ತು ಗರಿಷ್ಠ - 50 ವರ್ಷಗಳ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
Pay Scale:
- ಹಿರಿಯ ತಜ್ಞ (ಸೀನಿಯರ್ ಸ್ಪೆಷಲಿಸ್ಟ್) ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 2,20,000/- ರೂ ಮತ್ತು
- ತಜ್ಞ (ಸ್ಪೆಷಲಿಸ್ಟ್) ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ : 1,45,000 /- ರೂ ಗಳವರೆಗೆ ವೇತನವನ್ನು ನಿಗದಿಪಡಿಸಲಾಗಿದೆ.





Comments