ಬೆಳಗಾವಿ ಜಿಲ್ಲಾ ಆರೋಗ್ಯಾ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಅಹ್ವಾನ

ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ ಜಿಲ್ಲೆಯಲ್ಲಿ ಖಾಲಿ ಇರುವ 178 ವೈದ್ಯಾಧಿಕಾರಿಗಳು, ಹಿರಿಯ ಆರೋಗ್ಯ ಸುರಕ್ಷಣಾಧಿಕಾರಿಗಳು, ಶುಶ್ರೋಷಕರು, ತಾಲೂಕಾ ಆಶಾ ಮೇಲ್ವಿಚಾರಕರು, ಕಾಯ ಚಿಕಿತ್ಸಾ ತಜ್ಞ ವೈದ್ಯರು, ಕಿರಿಯ ಆರೋಗ್ಯ ಸಹಾಯಕರು, ಮನೋರೋಗ ತಜ್ಞರು ಮತ್ತು ಸ್ತ್ರೀರೋಗ ತಜ್ಞರು ಸೇರಿದಂತೆ ವಿವಿಧ ಹುದ್ದೆಯನ್ನು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ.
ಈ ನೇಮಕಾತಿಯ ಕುರಿತ ಸವಿವರವಾದ ಮಾಹಿತಿ, ಅಧಿಕೃತ ಅಧಿಸೂಚನೆಯನ್ನು ಈ ಕೆಳೆಗೆ ನೀಡಲಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ರೋಸ್ಟರ್ ಕಂ ಮೆರಿಟ್ ಆಧಾರದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಆಸಕ್ತ ಅಭ್ಯರ್ಥಿಗಳು ದಿನಾಂಕ: 27.09.2024 ರಿಂದ ದಿನಾಂಕ: 10.10.2024 ರ ಸಂಜೆ 5:30 PM ಘಂಟೆಯೊಳಗಾಗಿ ಅರ್ಜಿ ನಮೂನೆಯನ್ನು ಪಡೆಯಬಹುದು, ಹಾಗೂ ಭರ್ತಿ ಮಾಡಿದ ಅರ್ಜಿಗಳನ್ನು ಸ್ವೀಕರಿಸುವ ಕೊನೆಯದಿನಾಂಕ :14.10.2024 ಮದ್ಯಾಹ್ನ 3.00 ಘಂ ಒಳಗಾಗಿ (ಕಛೇರಿ ವೇಳೆಯಲ್ಲಿ ರಜಾ ದಿನಗಳನ್ನು ಹೊರತು ಪಡಿಸಿ) ಅರ್ಜಿಯನ್ನು ಅಂಚೆ ಮೂಲಕ ಅಥವಾ ಖುದ್ದಾಗಿ ಸಲ್ಲಿಸಬಹುದಾಗಿರುತ್ತದೆ. ಅರ್ಜಿಯ ಜೊತೆಗೆ ಅವಶ್ಯವಿರುವ ಎಲ್ಲ ದಾಖಲಾತಿಗಳ ನಕಲು ಒಂದು ಸೇಟ್ ಸ್ವಯಂ ದೃಢೀಕೃತ ಪ್ರತಿಗಳನ್ನು ಲಗತ್ತಿಸಬೇಕು. ಅವಧಿ ಮೀರಿದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಅರ್ಜಿ ಸಲ್ಲಿಸವ ವಿಳಾಸ :
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ,ಲಸಿಕೆ ಸಂಸ್ಥೆ ಆವರಣ,
2ನೇ ರೇಲ್ವೆಗೇಟ್ ಹತ್ತಿರ ಬೆಳಕವಾಡಿ, ಬೆಳಗಾವಿ - 590006
ಹುದ್ದೆಗಳ ವಿವರ : 178
ತಜ್ಞ ವೈದ್ಯರು : 23
ವೈದ್ಯಾಧಿಕಾರಿಗಳು : 54
ಹಿರಿಯ ಆರೋಗ್ಯ ಸುರಕ್ಷಣಾಧಿಕಾರೀಗಳು : 1
ಶುಶ್ರೋಷಕರು: 55
ಜಿಲ್ಲಾ ಮತ್ತು ತಾಲೂಕಾ ಆಶಾ ಮೇಲ್ವಿಚಾರಕರು : 2
ಪಂಚಕರ್ಮ/ ಕಾರ್ಯ ಚಿಕಿಸ್ತಾತಜ್ಞ ವೈದ್ಯರು : 1
ಪಂಚಕರ್ಮ ಚಿಕಿಸ್ತಾತಜ್ಞ ಸಹಾಯಕರು : 1
ನೇತ್ರ ಸಹಾಯಕರು/ ಔಷದ ವಿತರಕರು : 4
ಕಿರಿಯ ಆರೋಗ್ಯ ಸಹಾಯಕರು : 36
ಕಿ.ವೈ.ಪ್ರಯೋಗ ಶಾಲಾ ತಂತ್ರಜ್ಞರು : 1
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗನುಗುಣವಾಗಿ ಮಾಸಿಕ ವೇತನವನ್ನು ನಿಗದಿಪಡಿಸಲಾಗುತ್ತದೆ.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.




Comments