ರಾಷ್ಟ್ರೀಯ ಏರೋಸ್ಪೇಸ್ ಪ್ರಯೋಗಾಲಯಗಳಲ್ಲಿ (NAL) ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ

ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರೀಸ್ (NAL) 2025ನೇ ಸಾಲಿನ ನೇಮಕಾತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಜೂನಿಯರ್ ಸೆಕ್ರಟೇರಿಯಟ್ ಅಸಿಸ್ಟಂಟ್ ಮತ್ತು ಜೂನಿಯರ್ ಸ್ಟೆನೋಗ್ರಾಫರ್ ಹುದ್ದೆಗಳಿಗೆ ಒಟ್ಟು 26 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಮೇ 20, 2025 ರ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
🔹 ಸಂಸ್ಥೆ ಹೆಸರು : ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರೀಸ್ (NAL)
🔹 ಒಟ್ಟು ಹುದ್ದೆಗಳು : 26
🔹 ಹುದ್ದೆಯ ಹೆಸರು :
- ಜೂನಿಯರ್ ಸೆಕ್ರಟೇರಿಯಟ್ ಅಸಿಸ್ಟಂಟ್ – 21 ಹುದ್ದೆಗಳು
- ಜೂನಿಯರ್ ಸ್ಟೆನೋಗ್ರಾಫರ್ – 5 ಹುದ್ದೆಗಳು
🔹 ಕೆಲಸದ ಸ್ಥಳ : ಆಲ್ ಇಂಡಿಯಾ
🔹 ವೇತನ ಶ್ರೇಣಿ :
- ಜೂನಿಯರ್ ಸೆಕ್ರಟೇರಿಯಟ್ ಅಸಿಸ್ಟಂಟ್: ₹19,900 - ₹63,200 ಪ್ರತಿಮಾಸ
- ಜೂನಿಯರ್ ಸ್ಟೆನೋಗ್ರಾಫರ್: ₹25,500 - ₹81,100 ಪ್ರತಿಮಾಸ
ಅರ್ಹತಾ ವಿವರಗಳು :
🔹 ಶೈಕ್ಷಣಿಕ ಅರ್ಹತೆ : ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ 12ನೇ ತರಗತಿ ಉತ್ತೀರ್ಣರಾಗಿರಬೇಕು.
🔹 ವಯೋಮಿತಿ :
- ಜೂನಿಯರ್ ಸೆಕ್ರಟೇರಿಯಟ್ ಅಸಿಸ್ಟಂಟ್ – ಗರಿಷ್ಠ 28 ವರ್ಷ
- ಜೂನಿಯರ್ ಸ್ಟೆನೋಗ್ರಾಫರ್ – ಗರಿಷ್ಠ 27 ವರ್ಷ
ವಯೋಮಿತಿ ಸಡಿಲಿಕೆ :
- OBC (NCL): 3 ವರ್ಷ
- SC/ST: 5 ವರ್ಷ
- PwBD (ಜನೆರಲ್): 10 ವರ್ಷ
- PwBD (OBC-NCL): 13 ವರ್ಷ
- PwBD (SC/ST): 15 ವರ್ಷ
ಅರ್ಜಿ ಶುಲ್ಕ :
- SC/ST/PwBD/ಮಹಿಳೆ/ಹಳೆಯ ಸೈನಿಕ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ.
- ಇತರ ಅಭ್ಯರ್ಥಿಗಳಿಗೆ: ₹500/-
- ಪಾವತಿ ವಿಧಾನ : ಆನ್‌ಲೈನ್
ಆಯ್ಕೆ ಪ್ರಕ್ರಿಯೆ :
- ಲಿಖಿತ ಪರೀಕ್ಷೆ
- ಕೌಶಲ್ಯ ಪರೀಕ್ಷೆ
- ಸಂದರ್ಶನ
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ :
1. ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
2. ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಸಿದ್ಧಪಡಿಸಿ.
3. ಅಗತ್ಯ ದಾಖಲೆಗಳು (ಹೆಸರು, ವಯಸ್ಸು, ವಿದ್ಯಾರ್ಹತೆ, ಅನುಭವ, ಪೋಟೋ) ಸಿದ್ದವಾಗಿರಲಿ.
4. ಕೆಳಗೆ ನೀಡಲಾದ ಲಿಂಕ್‌ನಲ್ಲಿ ಆನ್‌ಲೈನ್ ಅರ್ಜಿ ಭರ್ತಿ ಮಾಡಿ.
5. ಅರ್ಹವಾಗಿದ್ದರೆ, ಅರ್ಜಿ ಶುಲ್ಕ ಪಾವತಿಸಿ.
6. ಅರ್ಜಿ ಸಲ್ಲಿಸಿ ಹಾಗೂ ಅರ್ಜಿ ಸಂಖ್ಯೆವನ್ನು ನಕಲು ಮಾಡಿಟ್ಟುಕೊಳ್ಳಿ.
ಪ್ರಮುಖ ದಿನಾಂಕಗಳು :
- ಅರ್ಜಿಯನ್ನು ಸಲ್ಲಿಸಲು ಆರಂಭದ ದಿನ : 16 ಏಪ್ರಿಲ್ 2025
- ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನ : 20 ಮೇ 2025
📢 ಹೆಚ್ಚಿನ ಮಾಹಿತಿಗೆ ಅಥವಾ ಅರ್ಜಿ ಸಲ್ಲಿಸಲು [NAL ಅಧಿಕೃತ ವೆಬ್‌ಸೈಟ್](https://www.nal.res.in) ಭೇಟಿನೀಡಿ.
Comments