Loading..!

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ (NABARD) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟ
Published by: Rukmini Krushna Ganiger | Date:20 ಜುಲೈ 2021
not found
- ಗ್ರಾಮೀಣ ಕೃಷಿಯ ಸಮೃದ್ಧಿಯ ಏಳಿಗೆಗೆ ಹಣಕಾಸಿನ ನೆರವಿನ ಮೂಲಕ ರೈತಾಪಿ ವರ್ಗದ ಹಾಗೂ RBI ಅಧೀನದ ಬ್ಯಾಂಕ್ ಆಗಿರುವ 'ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ (NABARD)' ನಲ್ಲಿ ಖಾಲಿ ಇರುವ ಅಸಿಸ್ಟಂಟ್‌ ಮ್ಯಾನೇಜರ್‌ (Assistant Manager) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ: 7/08/2021 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

- ಹುದ್ದೆಗಳ ವಿವರ : 

* ಅಸಿಸ್ಟಂಟ್ ಮ್ಯಾನೇಜರ್ ಇನ್‌ ಗ್ರೇಡ್‌ ಎ (RDBS) - 148

* ಅಸಿಸ್ಟಂಟ್ ಮ್ಯಾನೇಜರ್ ಇನ್‌ ಗ್ರೇಡ್‌ ಎ  (ರಾಜ್‌ಭಾಷಾ) - 05

* ಅಸಿಸ್ಟಂಟ್ ಮ್ಯಾನೇಜರ್ ಇನ್‌ ಗ್ರೇಡ್‌ ಎ (ಪ್ರೋಟೋಕಾಲ್‌ ಮತ್ತು ಸೆಕ್ಯೂರಿಟಿ ಸರ್ವೀಸ್) - 02

* ಮ್ಯಾನೇಜರ್ ಇನ್‌ ಗ್ರೇಡ್‌ ಬಿ (DBS) - 07
No. of posts:  162
Application Start Date:  17 ಜುಲೈ 2021
Application End Date:  7 ಆಗಸ್ಟ್ 2021
Work Location:  India
Selection Procedure: - ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಲಾಗುತ್ತದೆ.
Qualification: - ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಬೋರ್ಡ್ ದಿಂದ ಹುದ್ದೆಗಳಿಗೆ ಅನುಗುಣವಾಗಿ ಸಂಬಂಧಿಸಿದ ವಿಷಯಗಳಲ್ಲಿ ಪದವಿ / ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಪಡೆದಿರಬೇಕು.
Age Limit:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 25 ಹಾಗೂ ಗರಿಷ್ಠ 32 ಆಗಿರುತ್ತದೆ .

- ಮೀಸಲಾತಿಗಳಿಗನುಗುಣವಾಗಿ ವಯೋಮಿತಿ ಸಡಿಲಿಕೆ ನಿಯಮವು ಅನ್ವಯವಾಗಲಿದೆ.

* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.

Comments