ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

ಮಿನಿ ರತ್ನ ಕೇಂದ್ರೀಯ ಸಾರ್ವಜನಿಕ ಕ್ಷೇತ್ರದ ಉದ್ದಿಮೆ ಮತ್ತು ಭಾರತದ ಅಗ್ರ ತೈಲ ಕಂಪನಿ ಒಎನ್ ಜಿಸಿಯಾ ಅಂಗ ಸಂಸ್ಥೆಯಾಗಿರುವ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ 96 ಕೆಮಿಕಲ್ ಇಂಜಿನಿಯರ್, ಸಿವಿಲ್ ಇಂಜಿನಿಯರ್, ಮಾರ್ಕೆಟಿಂಗ್, ಸೆಕ್ರೆಟರಿಯಲ್,ಇಂಟರ್ನಲ್ ಅಡಿಟ್ ಮತ್ತು ಇಲೆಕ್ಟ್ರಿಕಲ್ ಇಂಜಿನಿಯರ್ ಸೇರಿದಂತ್ತೆ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 15/01/2023 ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು
ಸಾಮಾನ್ಯ/OBC (NCL)/EWS ಅಭ್ಯರ್ಥಿಗಳು: ರೂ.118/-
SC/ST/PwBD/ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವದಿಲ್ಲ
ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸತಕ್ಕದ್ದು.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೊನೆಯಕಕ್ಕೆ ಅನ್ವಯವಾಗುವಂತ್ತೆ ಗರಿಷ್ಠ 27 ವರ್ಷ ವಯೋಮಿತಿಯನ್ನು ಮೀರಿರಬಾರದು.
OBC ಅಭ್ಯರ್ಥಿಗಳು: 03 ವರ್ಷಗಳು
SC/ST ಅಭ್ಯರ್ಥಿಗಳು: 05 ವರ್ಷಗಳು
PwBD ಅಭ್ಯರ್ಥಿಗಳು: 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 50,000/- ರಿಂದ 1,60,000/- ರೂ ಮಾಸಿಕ ವೇತನ ನಿಗದಿಪಡಿಸಿರಲಾಗುತ್ತದೆ.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.





Comments