ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಖಾಲಿ ಇರುವ ಸಮಾಲೋಚಕರ ಹುದ್ದೆಗೆ (Consulting Faculty (Bio Energy and Waste Management)) ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಸೆಪ್ಟೆಂಬರ್ 26, 2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಸೂಕ್ತ ವಿವರಗಳನ್ನು ಭರ್ತಿ ಮಾಡಿ, ಕೊನೆಯ ದಿನಾಂಕದೊಳಗಾಗಿ ಈ E-Mail
ವಿಳಾಸಕ್ಕೆ ಕಳುಹಿಸಿ ಕೊಡಬೇಕು.
ಈ ಮೇಲ್ ವಿಳಾಸ : MGIREDBLR@GMAIL.COM
ಅಥವಾ ಕೋರಿಯರ್ / ಸ್ಪೀಡ್ ಪೋಸ್ಟ್ ಮೂಲಕ ಈ ಕೆಳಗೆ ನೀಡಿರುವ ವಿಳಾಸಕ್ಕೆ ಅರ್ಜಿಯನ್ನು ತಲುಪಿಸಬೇಕು.
ಅರ್ಜಿ ಸಲ್ಲಿಸಬೇಕಾದ ವಿಳಾಸ :
Mahatma Gandhi Institute of Rural Energy & Development (MGIRED)
Srirampura Cross, Jakkur,
Bengaluru 560 064
Ph : +91-80-23626359 / 23626493
ಸಮಾಲೋಚಕ ಸಿಬ್ಬಂದಿ ಹುದ್ದೆಗೆ ಆಯ್ಕೆಯಾದ ಬಿಇ/ಬಿ.ಟೆಕ್ ಅಭ್ಯರ್ಥಿಗೆ ತಿಂಗಳಿಗೆ 30,000/- ರೂ ಮತ್ತು
ಎಂ.ಟೆಕ್ ಅಭ್ಯರ್ಥಿಗೆ ತಿಂಗಳಿಗೆ 35,000/-ರೂ ಮಾಸಿಕ ವೇತನ ನಿಗದಿಪಡಿಸಲಾಗಿದೆ.
* ಈ ನೇಮಕಾತಿಯ ಕುರಿತು ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದು.





Comments