MECON Limited ನೇಮಕಾತಿ 2026: ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ವೃತ್ತಿಪರರಿಗೆ ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಯಲ್ಲಿ ಉದ್ಯೋಗಾವಕಾಶ!
Published by: Yallamma G | Date:28 ಎಪ್ರಿಲ್ 2026

ಭಾರತ ಸರ್ಕಾರದ ಉಕ್ಕು ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಷ್ಠಿತ ಮಿನಿ-ರತ್ನ (Miniratna) ಸಾರ್ವಜನಿಕ ವಲಯದ ಉದ್ಯಮವಾಗಿರುವ ಮೆಕಾನ್ ಲಿಮಿಟೆಡ್ (MECON LIMITED), ದೇಶಾದ್ಯಂತ ನಡೆಯುತ್ತಿರುವ ವಿವಿಧ ಯೋಜನೆಗಳಿಗಾಗಿ ಗುತ್ತಿಗೆ ಆಧಾರದ ಮೇಲೆ (Full Time Fixed Tenure) ಅನುಭವಿ ವೃತ್ತಿಪರರನ್ನು ನೇಮಕ ಮಾಡಲು ಅಧಿಸೂಚನೆ ಹೊರಡಿಸಿದೆ.
ಮೆಕಾನ್ ಲಿಮಿಟೆಡ್ ನೇಮಕಾತಿ ಅಡಿಯಲ್ಲಿ ಒಟ್ಟು 103 ಉಪ ಎಂಜಿನಿಯರ್, ಹೆಚ್ಚುವರು ಎಂಜಿನಿಯರ್, ಸಹಾಯಕ ಎಂಜಿನಿಯರ್ , ಉಪ/ಸಹಾಯಕ ಎಂಜಿನಿಯರ್ (ಖನಿಜ ಸಂಸ್ಕರಣೆ) ಮತ್ತು ಸಹಾಯಕ ಕಾರ್ಯನಿರ್ವಾಹಕರು ಸೇರಿದಂತ್ತೆ ವಿವಿಧ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ರಾಜಸ್ಥಾನ, ಬೆಂಗಳೂರು - ಕರ್ನಾಟಕ, ಬಚೇಲಿ - ಛತ್ತೀಸ್‌ಗಢ, ರಾಂಚಿ - ಜಾರ್ಖಂಡ್, ಬಾಲಘಾಟ್ - ಮಧ್ಯಪ್ರದೇಶ, ಪಶ್ಚಿಮ ಬರ್ಧಮಾನ್ - ಪಶ್ಚಿಮ ಬಂಗಾಳ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 11-ಮೇ-2026 ರಂದು ಅಥವಾ ಮೊದಲು ಆನ್‌ಲೈನ್/ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ವಿಶೇಷವಾಗಿ ಕರ್ನಾಟಕದ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದ್ದು, ಕೆಲವು ಹುದ್ದೆಗಳ ಕೆಲಸದ ಸ್ಥಳ ಹಾಗೂ ಸಂದರ್ಶನ ಕೇಂದ್ರವನ್ನು ಬೆಂಗಳೂರು ಎಂದು ನಿಗದಿಪಡಿಸಲಾಗಿದೆ.
KPSCVaani ಓದುಗರಿಗಾಗಿ ಈ ನೇಮಕಾತಿಯ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ (Vacancy Details & Qualification)
ಸಿವಿಲ್, ಸ್ಟ್ರಕ್ಚರಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಸೇಫ್ಟಿ, ಕ್ವಾಲಿಟಿ, ಮೈನಿಂಗ್, ಆರ್ಕಿಟೆಕ್ಚರ್ ಮತ್ತು ಹೆಚ್.ಆರ್ (HR) ಸೇರಿದಂತೆ ಒಟ್ಟು 60 ವಿಭಿನ್ನ ಪೋಸ್ಟ್ ಕೋಡ್‌ಗಳಡಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ . ಪ್ರಮುಖ ಹುದ್ದೆಗಳ ವಿವರ ಹೀಗಿದೆ:
ಮಾಸಿಕ ವೇತನದ ಜೊತೆಗೆ ಹಲವು ಸೌಲಭ್ಯಗಳನ್ನು ಸಂಸ್ಥೆ ಒದಗಿಸುತ್ತದೆ:
ಕೆಲಸದ ಸ್ಥಳ ಮತ್ತು ವಯೋಮಿತಿ (Job Location & Age Limit)
ಪ್ರಮುಖ ದಿನಾಂಕಗಳು (Important Dates)

- MECON ಹುದ್ದೆಯ ಅಧಿಸೂಚನೆ
- ಸಂಸ್ಥೆಯ ಹೆಸರು : ಮೆಟಲರ್ಜಿಕಲ್ ಮತ್ತು ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಲಿಮಿಟೆಡ್ ( ಮೆಕಾನ್ )
- ಹುದ್ದೆಗಳ ಸಂಖ್ಯೆ: 103
- ಉದ್ಯೋಗ ಸ್ಥಳ: ರಾಜಸ್ಥಾನ , ಬೆಂಗಳೂರು - ಕರ್ನಾಟಕ , ಬಚೇಲಿ - ಛತ್ತೀಸ್‌ಗಢ , ರಾಂಚಿ - ಜಾರ್ಖಂಡ್ , ಬಾಲಾಘಾಟ್ - ಮಧ್ಯ ಪ್ರದೇಶ , ಪಶ್ಚಿಮ್ ಬರ್ಧಮಾನ್ - ಪಶ್ಚಿಮ ಬಂಗಾಳ
- ಪೋಸ್ಟ್ ಹೆಸರು: ಇಂಜಿನಿಯರ್
- ಹುದ್ದೆಯ ಹೆಸರು: ರೂ. 43,880 – 78,390/- ಪ್ರತಿ ತಿಂಗಳು
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ (Vacancy Details & Qualification)
ಸಿವಿಲ್, ಸ್ಟ್ರಕ್ಚರಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಸೇಫ್ಟಿ, ಕ್ವಾಲಿಟಿ, ಮೈನಿಂಗ್, ಆರ್ಕಿಟೆಕ್ಚರ್ ಮತ್ತು ಹೆಚ್.ಆರ್ (HR) ಸೇರಿದಂತೆ ಒಟ್ಟು 60 ವಿಭಿನ್ನ ಪೋಸ್ಟ್ ಕೋಡ್‌ಗಳಡಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ . ಪ್ರಮುಖ ಹುದ್ದೆಗಳ ವಿವರ ಹೀಗಿದೆ:
- ಅಡಿಷನಲ್ ಎಂಜಿನಿಯರ್ (Addl. Engineer): ಸಂಬಂಧಪಟ್ಟ ವಿಭಾಗದಲ್ಲಿ ಬಿ.ಇ / ಬಿ.ಟೆಕ್ (B.E/B.Tech) ಪದವಿ ಜೊತೆಗೆ ಕನಿಷ್ಠ 9 ರಿಂದ 10 ವರ್ಷಗಳ ಅನುಭವ ಹೊಂದಿರಬೇಕು .
- ಡೆಪ್ಯುಟಿ ಎಂಜಿನಿಯರ್ (Dy. Engineer): ಬಿ.ಇ / ಬಿ.ಟೆಕ್ ಪದವಿ ಮತ್ತು ಕನಿಷ್ಠ 5 ವರ್ಷಗಳ ಕೆಲಸದ ಅನುಭವ ಕಡ್ಡಾಯ.
- ಅಸಿಸ್ಟೆಂಟ್ ಎಂಜಿನಿಯರ್ / ಎಕ್ಸಿಕ್ಯೂಟಿವ್ (Asst. Engineer / Executive): ಬಿ.ಇ/ಬಿ.ಟೆಕ್ ಅಥವಾ ಎಂಬಿಎ (MBA) / ಪಿಜಿ ಡಿಪ್ಲೊಮಾ (PG Diploma) ಜೊತೆಗೆ ಕನಿಷ್ಠ 2 ವರ್ಷಗಳ ಅನುಭವ ಹೊಂದಿರಬೇಕು.
- ಸೇಫ್ಟಿ ಎಂಜಿನಿಯರ್ (Safety Engineer): ಡಿಪ್ಲೊಮಾ ಅಥವಾ ಇತರ ಪದವಿ ಜೊತೆಗೆ ಇಂಡಸ್ಟ್ರಿಯಲ್ ಸೇಫ್ಟಿಯಲ್ಲಿ ಪ್ರಮಾಣಪತ್ರ ಹಾಗೂ 5 ರಿಂದ 16 ವರ್ಷಗಳ ಅನುಭವವಿರಬೇಕು.
- ಸೂಚನೆ: ಎಂಜಿನಿಯರಿಂಗ್ ಪದವಿಯನ್ನು ರೆಗ್ಯುಲರ್/ಫುಲ್ ಟೈಮ್ (Regular/Full Time) ಮುಖಾಂತರವೇ ಪಡೆದಿರಬೇಕು.
ಮಾಸಿಕ ವೇತನದ ಜೊತೆಗೆ ಹಲವು ಸೌಲಭ್ಯಗಳನ್ನು ಸಂಸ್ಥೆ ಒದಗಿಸುತ್ತದೆ:
- ವೇತನ ಶ್ರೇಣಿ: ಹುದ್ದೆಯ ಅನುಭವದ ಆಧಾರದ ಮೇಲೆ ಮಾಸಿಕ ₹43,880 ರಿಂದ ಗರಿಷ್ಠ ₹78,390 ರವರೆಗೆ ನಿಗದಿತ (Consolidated) ವೇತನ ನೀಡಲಾಗುತ್ತದೆ .
- ಭತ್ಯೆಗಳು (Allowances): ಸೈಟ್ / ಪ್ರಾಜೆಕ್ಟ್ ಸ್ಥಳಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಶೇ. 7.5 ರಷ್ಟು ಸೈಟ್ ಭತ್ಯೆ (Site Allowance) ಮತ್ತು ಮೆಟ್ರೋ ನಗರಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಶೇ. 2.5 ರಷ್ಟು ಮೆಟ್ರೋ ಭತ್ಯೆ (Metro Allowance) ನೀಡಲಾಗುವುದು.
- ವಾರ್ಷಿಕ ಏರಿಕೆ: ನಿಗದಿತ ವೇತನದ ಶೇ. 3 ರಷ್ಟು ವಾರ್ಷಿಕ ವೇತನ ಏರಿಕೆ (Annual Increment) ಇರಲಿದೆ.
- ವಸತಿ ಮತ್ತು ಮನೆ ಬಾಡಿಗೆ ಭತ್ಯೆ (HRA): ಸಂಸ್ಥೆಯು ವಸತಿ ಒದಗಿಸಲು ಪ್ರಯತ್ನಿಸುತ್ತದೆ. ಒಂದು ವೇಳೆ ವಸತಿ ಲಭ್ಯವಿಲ್ಲದಿದ್ದರೆ, ವೇತನದ ಶೇ. 5 ರಷ್ಟು HRA ನೀಡಲಾಗುತ್ತದೆ.
- ವೈದ್ಯಕೀಯ ವಿಮೆ: ವಾರ್ಷಿಕ ಗರಿಷ್ಠ ₹15,000 ಪ್ರೀಮಿಯಂ ಮಿತಿಯೊಳಗೆ (₹4,00,000 ಫ್ಲೋಟರ್ ಪಾಲಿಸಿ) ಮೆಡಿಕ್ಲೈಮ್ ಸೌಲಭ್ಯ ಲಭ್ಯವಿರುತ್ತದೆ.
ಕೆಲಸದ ಸ್ಥಳ ಮತ್ತು ವಯೋಮಿತಿ (Job Location & Age Limit)
- ಕೆಲಸದ ಸ್ಥಳ: ಪೋಸ್ಟ್ ಕೋಡ್ 24 ಮತ್ತು 25ರ (Asst. Engineer Architecture & Dy. Executive HR) ಹುದ್ದೆಗಳಿಗೆ ಕರ್ನಾಟಕದ ಬೆಂಗಳೂರು ಕೆಲಸದ ಸ್ಥಳವಾಗಿದೆ. ಉಳಿದ ಹುದ್ದೆಗಳಿಗೆ ರಾಜಸ್ಥಾನ, ಛತ್ತೀಸ್‌ಗಢ, ರಾಂಚಿ, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಪೋಸ್ಟಿಂಗ್ ನೀಡಲಾಗುವುದು.
- ಗರಿಷ್ಠ ವಯೋಮಿತಿ: ಸಾಮಾನ್ಯ ಮತ್ತು EWS ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 50 ವರ್ಷಗಳು.
- ವಯೋಮಿತಿ ಸಡಿಲಿಕೆ: ಒಬಿಸಿ (OBC-NCL) ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ (SC/ST) ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಅಂಗವಿಕಲ (PwD) ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.
- ಅಭ್ಯರ್ಥಿಗಳನ್ನು ನೇರ ಸಂದರ್ಶನದ (Walk-In-Interview) ಮೂಲಕ ಆಯ್ಕೆ ಮಾಡಲಾಗುವುದು.
- ಸಂದರ್ಶನವು ದೆಹಲಿ, ರಾಂಚಿ, ಕೋಲ್ಕತ್ತಾ ಮತ್ತು ಬೆಂಗಳೂರು ನಗರಗಳಲ್ಲಿ ನಡೆಯಲಿದ್ದು, ನಿಖರವಾದ ದಿನಾಂಕವನ್ನು MECON ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.
- ಸಂದರ್ಶನಕ್ಕೆ ಹಾಜರಾಗುವ ಹೊರ-ರಾಜ್ಯದ ಅಥವಾ ದೂರದ ಅಭ್ಯರ್ಥಿಗಳಿಗೆ ರೈಲ್ವೆ ಪ್ರಯಾಣ ಭತ್ಯೆಯನ್ನು (Travelling Allowance - 3rd AC) ಸಂಸ್ಥೆಯ ನಿಯಮದಂತೆ ನೀಡಲಾಗುತ್ತದೆ.
- ಸಾಮಾನ್ಯ (UR) / ಒಬಿಸಿ (OBC) / EWS ಅಭ್ಯರ್ಥಿಗಳಿಗೆ: ₹ 500/- (ಮರುಪಾವತಿಸಲಾಗುವುದಿಲ್ಲ).
- ಪರಿಶಿಷ್ಟ ಜಾತಿ (SC) / ಪರಿಶಿಷ್ಟ ಪಂಗಡ (ST) / ಅಂಗವಿಕಲ (PWD) ಮತ್ತು ಮಾಜಿ ಸೈನಿಕರಿಗೆ: ಯಾವುದೇ ಶುಲ್ಕವಿಲ್ಲ (Exempted).
- ಶುಲ್ಕವನ್ನು ಕೇವಲ ಆನ್‌ಲೈನ್ ಪೇಮೆಂಟ್ ಗೇಟ್‌ವೇ (Payment Gateway) ಮೂಲಕವೇ ಪಾವತಿಸಬೇಕು.
- ಅರ್ಹ ಅಭ್ಯರ್ಥಿಗಳು MECON ನ ಅಧಿಕೃತ ವೆಬ್‌ಸೈಟ್ www.meconlimited.co.in ಗೆ ಭೇಟಿ ನೀಡಿ.
- ಅಲ್ಲಿ 'Careers' -> 'Career Opportunities' -> 'Apply Online' ವಿಭಾಗಕ್ಕೆ ಹೋಗಿ ಅರ್ಜಿಯನ್ನು ಭರ್ತಿ ಮಾಡಿ.
- ನಿಮ್ಮ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋ (40 KB ಗಿಂತ ಕಡಿಮೆ) ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ.
- ನಿಮ್ಮ ಎಸ್.ಎಸ್.ಎಲ್.ಸಿ (SSLC) ಮಾರ್ಕ್ಸ್ ಕಾರ್ಡ್, ಪದವಿ ಪ್ರಮಾಣಪತ್ರಗಳು, ಅನುಭವದ ಪ್ರಮಾಣಪತ್ರ (Experience Certificate), ಮತ್ತು ಪ್ಯಾನ್ ಕಾರ್ಡ್/ಆಧಾರ್ ಕಾರ್ಡ್‌ಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಒಂದೇ ಪಿಡಿಎಫ್ (Single PDF - 1 MB ಗಿಂತ ಕಡಿಮೆ) ಮಾಡಿ ಅಪ್‌ಲೋಡ್ ಮಾಡುವುದು ಕಡ್ಡಾಯ .
- ಕೊನೆಯದಾಗಿ ನಿಗದಿತ ಶುಲ್ಕವನ್ನು ಪಾವತಿಸಿ, ಅರ್ಜಿಯನ್ನು ಸಲ್ಲಿಸಿ.
ಪ್ರಮುಖ ದಿನಾಂಕಗಳು (Important Dates)
- ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 27.04.2026.
- ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 11.05.2026.
- ವಯಸ್ಸು ಮತ್ತು ಅನುಭವವನ್ನು ಲೆಕ್ಕಹಾಕುವ ನಿಗದಿತ ದಿನಾಂಕ (Cut-off Date): 23.03.2026.
Application End Date: 11 ಮೇ 2026
Employment Type: FULL_TIME
Hiring Organization: MECON https://meconlimited.co.in/
Job Location: KA,
To Download Official Notification
Related Tags: Degree

Comments