Loading..!

LIC ಇಂಡಿಯಾದಿಂದ 8500 ಅಸಿಸ್ಟಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ: ಕರ್ನಾಟಕದಲ್ಲಿ 365 ಹುದ್ದೆಗಳು ಖಾಲಿ ಈ ಕುರಿತು ಮಾಹಿತಿ ನಿಮಗಾಗಿ
| Date:18 ಸೆಪ್ಟೆಂಬರ್ 2019
not found
ಲೈಫ್ ಇನ್ಸುರೆನ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಭಾರತೀಯ ಪ್ರಜೆಗಳಿಂದ ಅಸಿಸ್ಟಂಟ್ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಇಂದಿನಿಂದಲೇ ಅರ್ಜಿ ಸಲ್ಲಿಸಬಹುದು.
ಅಸಿಸ್ಟಂಟ್ ಹುದ್ದೆಗಳಿಗೆ ನೇಮಕಗೊಳ್ಳುವವರು ವಿವಿಧ ಕರ್ತವ್ಯಗಳಾದ ಕ್ಲೆರಿಕಲ್ ಸ್ಟಾಫ್ ಕಾರ್ಯನಿರ್ವಹಣೆ ಕ್ಯಾಶಿಯರ್, ಸಿಂಗಲ್ ವಿಂಡೋ ಆಫರೇಟರ್, ಕಸ್ಟಮರ್ ಸರ್ವಿಸ್ ಎಕ್ಸಿಕ್ಯೂಟಿವ್, ಇತರೆ ಕರ್ತವ್ಯಗಳನ್ನು ಭಾರತದಾದ್ಯಂತದ ವಿವಿಧ ಬ್ರ್ಯಾಂಚ್‌ಗಳಲ್ಲಿ ಕಾರ್ಯ ನಿರ್ವಹಣೆ ಮಾಡಬೇಕಾಗುತ್ತದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಎಲ್‌ಐಸಿಯ ಅಸಿಸ್ಟಂಟ್ ಹುದ್ದೆಗಳಿಗೆ ಅಧಿಕೃತ ವೆಬ್‌ಸೈಟ್ ಗೆ ಭೇಟಿ ಅರ್ಜಿ ಸಲ್ಲಿಸಬಹುದು.

ಕರ್ನಾಟಕದಲ್ಲಿ ಖಾಲಿ ಇರುವ ಅಸಿಸ್ಟಂಟ್ ಹುದ್ದೆಗಳ ವಿವರ :
# ಬೆಂಗಳೂರು: 40
# ಮೈಸೂರು: 65
# ಉಡುಪಿ :28
# ಶಿವಮೊಗ್ಗ: 51
# ರಾಯಚೂರು:73
# ಧಾರವಾಡ: 35
# ಬೆಳಗಾಂ:73
ಒಟ್ಟು ಕರ್ನಾಟಕದ ಹುದ್ದೆಗಳು : 358

ಪ್ರಮುಖ ದಿನಾಂಕಗಳು :
# ಆನ್‌ಲೈನ್‌ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ :ಸೆಪ್ಟೆಂಬರ್ 17, 2019
# ಆನ್‌ಲೈನ್ ಅರ್ಜಿಗೆ ಮತ್ತು ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ : ಅಕ್ಟೋಬರ್ 01, 2019
# ಆನ್‌ಲೈನ್ ಪ್ರಿಲಿಮಿನರಿ ಪರೀಕ್ಷೆಗೆ ಪ್ರವೇಶ ಪತ್ರ ಪ್ರಕಟಿಸುವ ದಿನಾಂಕ: ಅಕ್ಟೋಬರ್ 15 ರಿಂದ 22, 2019 ವರೆಗೆ
# ಪ್ರಿಲಿಮಿನರಿ ಆನ್‌ಲೈನ್‌ ಪರೀಕ್ಷೆ ದಿನಾಂಕ: ಅಕ್ಟೋಬರ್ 21 ಮತ್ತು 22, 2019
# ಅಸಿಸ್ಟಂಟ್ ಹುದ್ದೆಗಳಿಗೆ ಆನ್‌ಲೈನ್‌ ಮುಖ್ಯ ಪರೀಕ್ಷೆ ದಿನಾಂಕ: ಪ್ರಿಲಿಮಿನರಿ ಪರೀಕ್ಷೆ ನಂತರ ಪ್ರಕಟಿಸಲಾಗುತ್ತದೆ.

ಪರೀಕ್ಷಾ ಕೇಂದ್ರಗಳು :
ದೇಶದಾದ್ಯಂತ ಒಟ್ಟು 191 ವಿವಿಧ ಕೇಂದ್ರಗಳಲ್ಲಿ ಪರೀಕ್ಷೆಯನ್ನು ಲೈಫ್‌ ಇನ್ಸುರೆನ್ಸ್ ಕಾರ್ಪೋರೇಷನ್ ನಡೆಸಲಿದೆ. ದಕ್ಷಿಣ ವಲಯವಾದ ಕರ್ನಾಟಕದಲ್ಲಿ ಅಸಿಸ್ಟಂಟ್ ಹುದ್ದೆಗಳಿಗೆ ಪರೀಕ್ಷೆಯನ್ನು ಉಡುಪಿ, ಶಿವಮೊಗ್ಗ, ರಾಯಚೂರು, ಮೈಸೂರು, ಧಾರವಾಡ, ಬೆಂಗಳೂರು, ಬೆಳಗಾಂ, ಪ್ರದೇಶಗಳಲ್ಲಿ ನಡೆಸಲಾಗುತ್ತದೆ.

ಅಸಿಸ್ಟಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವವರು ಯಾವುದಾದರೂ ಒಂದು ಡಿವಿಷನ್‌ಗೆ ಮಾತ್ರ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ಸೂಚಿಸಿದೆ. ಕರ್ನಾಟಕದಲ್ಲಿ ಉಡುಪಿ, ಶಿವಮೊಗ್ಗ, ರಾಯಚೂರು, ಮೈಸೂರು, ಧಾರವಾಡ, ಬೆಂಗಳೂರು, ಬೆಳಗಾಂ ಡಿವಿಷನ್‌ಗಳಿದ್ದು, ಯಾವುದಾದರೂ ಒಂದು ಡಿವಿಷನ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ. ಒಂದು ವೇಳೆ ಅಭ್ಯರ್ಥಿ ಒಂದೇ ಡಿವಿಷನ್‌ಗೆ ಎರಡು ಭಾರಿ ಅಥವಾ ಬೇರೆ ಬೇರೆ ಡಿವಿಷನ್‌ಗಳಿಗೆ ಅರ್ಜಿ ಸಲ್ಲಿಸಿದಲ್ಲಿ ಕೊನೆಯಲ್ಲಿ ಯಾವ ಡಿವಿಷನ್‌ಗೆ ಅರ್ಜಿ ಸಲ್ಲಿಸಲಾಗುತ್ತದೆಯೋ ಅದನ್ನು ಮಾತ್ರ ಪರಿಗಣಿಸಲಾಗುತ್ತದೆ ಎಂದು ತಿಳಿಸಲಾಗಿದೆ.
No. of posts:  8500
Application Start Date:  18 ಸೆಪ್ಟೆಂಬರ್ 2019
Application End Date:  1 ಅಕ್ಟೋಬರ್ 2019
Last Date for Payment:  1 ಅಕ್ಟೋಬರ್ 2019
Work Location:  Across India
Selection Procedure: ಅಸಿಸ್ಟಂಟ್ ಹುದ್ದೆಗಳನ್ನು ಎರಡು ಹಂತದ ಪರೀಕ್ಷೆ ಜೊತೆಗೆ ವೈದ್ಯಕೀಯ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ.

ಪ್ರಿಲಿಮಿನರಿ ಪರೀಕ್ಷೆ (ಮೊದಲನೇ ಹಂತದ ಪರೀಕ್ಷೆ) :
# ಪೂರ್ವ ಪರೀಕ್ಷೆಯನ್ನು ಆನ್‌ಲೈನ್‌ ಮೂಲಕ ನಡೆಸಲಿದ್ದು, 100 ಅಂಕಗಳ ಪರೀಕ್ಷೆ ಪತ್ರಿಕೆಯು ಮೂರು ಸೆಕ್ಷನ್‌ಗಳನ್ನು ಒಳಗೊಂಡಿರುತ್ತದೆ. ಇಂಗ್ಲಿಷ್ ಅಥವಾ ಹಿಂದಿ ಭಾಷೆಗೆ ಕುರಿತು 30, ಸಂಖ್ಯಾತ್ಮಕ ಸಾಮರ್ಥ್ಯ 35, ರೀಸನಿಂಗ್ ಎಬಿಲಿಟಿ 35 ಅಂಕಗಳಿಗೆ ಆಬ್ಜೆಕ್ಟಿವ್ ಪ್ರಶ್ನೆಗಳು ಇರುತ್ತವೆ.

👉 ಪಾಸಿಂಗ್ ಅಂಕಗಳು ಎಷ್ಟು ?
# ಎಸ್‌ಸಿ, ಎಸ್‌ಟಿ, PWD ಅಭ್ಯರ್ಥಿಗಳು ಪೂರ್ವ ಪರೀಕ್ಷೆಯಲ್ಲಿ ಪಾಸ್‌ ಆಗಲು ಇಂಗ್ಲಿಷ್ / ಹಿಂದಿ ಯಲ್ಲಿ 11 ಅಂಕಗಳನ್ನು, ಸಂಖ್ಯಾತ್ಮಕ / ರೀಸನಿಂಗ್ ಎಬಿಲಿಟಿಯಲ್ಲಿ ಪ್ರತ್ಯೇಕವಾಗಿ 13 ಅಂಕಗಳನ್ನು ಗಳಿಸಬೇಕು. ಇತರೆ ಅಭ್ಯರ್ಥಿಗಳು ಇಂಗ್ಲಿಷ್/ಹಿಂದಿಯಲ್ಲಿ 12 ಅಂಕಗಳನ್ನು ಮತ್ತು ಸಂಖ್ಯಾತ್ಮಕ / ರೀಸನಿಂಗ್ ಎಬಿಲಿಟಿಯಲ್ಲಿ ಪ್ರತ್ಯೇಕವಾಗಿ 14 ಅಂಕಗಳನ್ನು ಗಳಿಸಬೇಕು.

ಮುಖ್ಯ ಪರೀಕ್ಷೆ (2ನೇ ಹಂತದ ಪರೀಕ್ಷೆ) :
# ಮುಖ್ಯ ಪರೀಕ್ಷೆಯು 200 ಅಂಕಗಳಿಗೆ 200 ಆಬ್ಜೆಕ್ಟಿವ್ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. 4 ಸೆಕ್ಷನ್‌ಗಳು ಈ ಪರೀಕ್ಷೆಯಲ್ಲಿ ಇದ್ದು, 2-30 ಗಂಟೆಗಳ ಕಾಲ ಪರೀಕ್ಷೆ ನಡೆಯುತ್ತದೆ. ಜೆನೆರಲ್ /ಫೈನಾನ್ಸಿಯಲ್ ಕುರಿತು 50, ಜೆನೆರಲ್ ಇಂಗ್ಲಿಷ್ ಕುರಿತು 40, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ಕುರಿತು 50, ರೀಸನಿಂಗ್ ಎಬಿಲಿಟಿ ಮತ್ತು ಕಂಪ್ಯೂಟರ್ ಆಪ್ಟಿಟ್ಯೂಟ್ ಕುರಿತು 60 ಪ್ರಶ್ನೆಗಳು ಇರುತ್ತವೆ.

ಎರಡು ಹಂತಗಳಲ್ಲಿ ಪಾಸ್‌ ಮಾಡಿದ ಅಭ್ಯರ್ಥಿಗಳನ್ನು ವೈದ್ಯಕೀಯ ಪರೀಕ್ಷೆಗೆ ಆಯ್ಕೆ ಮಾಡಿ ನಂತರ ನೇಮಕಾತಿಗೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ.
Qualification: ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯಗಳು, ಶಿಕ್ಷಣ ಸಂಸ್ಥೆಗಳಲ್ಲಿ ಪದವಿ (10+2+3) ವಿದ್ಯಾರ್ಹತೆ ಪಡೆದಿರಬೇಕು.
Fee: # ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.600
# ಎಸ್‌ಸಿ, ಎಸ್‌ಟಿ, ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ. 100
# ಅರ್ಜಿ ಶುಲ್ಕದ ಜೊತೆಗೆ ಆನ್‌ಲೈನ್‌ ಅಥವಾ ಆಫ್‌ಲೈನ್‌ ಹಣ ಪಾವತಿ ವಿಧಾನದ ಬ್ಯಾಂಕ್‌ ಚಾರ್ಜ್‌ ಅನ್ನು ಅಭ್ಯರ್ಥಿಗಳು ಪಾವತಿಸಬೇಕಾಗಿರುತ್ತದೆ.
Age Limit: # ಅರ್ಜಿ ಸಲ್ಲಿಸಲು ಕನಿಷ್ಟ 18 ವರ್ಷ ವಯಸ್ಸಾಗಿರಬೇಕು. ಗರಿಷ್ಟ 30 ವರ್ಷ ವಯೋಮಿತಿ ಮೀರಿರಬಾರದು.
# ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, PWD ಸಾಮಾನ್ಯ ಅಭ್ಯರ್ಥಿಗಳಿಗೆ 10 ವರ್ಷ, PWD ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 15 ವರ್ಷ, PWD ಒಬಿಸಿ ಅಭ್ಯರ್ಥಿಗಳಿಗೆ 13 ವರ್ಷ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಮೀಸಲಾತಿಯನ್ನು ಅರ್ಜಿ ಸಲ್ಲಿಕೆಗೆ ನೀಡಲಾಗಿದೆ.
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ವಿವಿಧ ವಿಜ್ಞಾನ ಮತ್ತು ಭೂಗೋಳಶಾಸ್ತ್ರದ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments