Loading..!

ಎಲ್ಐಸಿಯ(LIC) ಅಂಗ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ
| Date:16 ಆಗಸ್ಟ್ 2019
not found
ದೇಶದ ಅತಿ ದೊಡ್ಡ ಹೌಸಿಂಗ್ ಫೈನಾನ್ಸ್ ಕಂಪನಿಯಾಗಿರುವ 'ಎಲ್ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್' ಅಸಿಸ್ಟೆಂಟ್, ಅಸೋಸಿಯೇಟ್ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ. ಆಸಕ್ತ ಅಭ್ಯರ್ಥಿ ಆಗಸ್ಟ್ 26 ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ :
ದೇಶಾದ್ಯಂತ ಒಟ್ಟು300 ಹುದ್ದೆಗಳಿಗೆ ನೇಮಕ ನಡೆಯಲಾಗಿದೆ. ಇವುಗಳಲ್ಲಿ
* ಅಸಿಸ್ಟೆಂಟ್ - 125
* ಅಸೋಸಿಯೇಟ್ - 75
* ಅಸಿಸ್ಟೆಂಟ್ ಮ್ಯಾನೇಜರ್ - 100

ಕರ್ನಾಟಕ ರಾಜ್ಯದಲ್ಲಿ :
* ಅಸಿಸ್ಟೆಂಟ್ - 11
* ಅಸೋಸಿಯೇಟ್ - 7
* ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳ ರಾಜ್ಯವಾರು ಹಂಚಿಕೆ ವಿವರಗಳನ್ನು ನೀಡಲಾಗಿಲ್ಲ. ನೇಮಕಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 9 ಮತ್ತು 10ರಂದು ಪರೀಕ್ಷೆ ನಡೆಯಲಿದೆ.
*ರಾಜ್ಯದಲ್ಲಿ ಬೆಂಗಳೂರು ಮತ್ತು ಮೈಸೂರು ಮೈಸೂರಿನಲ್ಲಿ ಪರೀಕ್ಷಾ ಕೇಂದ್ರಗಳಿರಲಿವೆ.
No. of posts:  300
Application Start Date:  10 ಆಗಸ್ಟ್ 2019
Application End Date:  26 ಆಗಸ್ಟ್ 2019
Qualification: - ಪದವೀಧರರು ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಕನಿಷ್ಠ ಶೇ 55 ಅಂಕಗಳೊಂದಿಗೆ ಪದವಿ ಪಡೆದಿರಬೇಕಾದದ್ದು ಕಡ್ಡಾಯ.
- ಅಸಿಸ್ಟೆಂಟ್ ಮತ್ತು ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ಶೇ 60 ಅಂಕಗಳೊಂದಿಗೆ ಪದವಿ ಪಡೆದಿರಬೇಕು.
- ಅಸೋಸಿಯೇಟ್ ಹುದ್ದೆಗೆ ಸಿಎ - ಇಂಟರ್ ಪೂರ್ಣಗೊಳಿಸಿರಬೇಕು.
- ಹಾಗೂ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಎರಡು ವರ್ಷ ಪೂರ್ಣಾವಧಿಯ MBA /MMS / PGDBA /PGDBM /PGPM /PGDM ಕೋರ್ಸ್ ಪೂರ್ಣಗೊಳಿಸಿರಬೇಕು.
- ಈ ಮೂರು ಹುದ್ದೆಗಳಿಗೂ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಂಪ್ಯೂಟರ್ ಜ್ಞಾನ ಹೊಂದಿರಬೇಕಾಗಿರುವುದು ಕಡ್ಡಾಯ.
Fee: ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೂ 500 /-ರೂ. ಅರ್ಜಿ ಶುಲ್ಕ ಪಾವತಿಸಬೇಕು. ಅಭ್ಯರ್ಥಿಗಳು ಶೇ. 18 ರಷ್ಟು ಜಿಎಸ್ಟಿ(GST) ಸೇರಿಸಿ ಶುಲ್ಕ ಪಾವತಿಸುವಂತೆ ಸೂಚಿಸಲಾಗಿದೆ.
Age Limit: ವಯೋಮಿತಿ ಅಭ್ಯರ್ಥಿಗಳ ಕನಿಷ್ಠ ವಯಸ್ಸು 21 ವರ್ಷ ಹಾಗೂ ಗರಿಷ್ಠ 28 ವರ್ಷ. ಅಂದರೆ ಅಭ್ಯರ್ಥಿಗಳು 1991ರ ಜನವರಿ 2ರ ನಂತರ ಹಾಗೂ 1998ರ ಮೊದಲು ಜನಿಸಿರಬೇಕು.
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಸಾಮಾನ್ಯ ಜ್ಞಾನ (General Knowledge) ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments