Loading..!

ಬಾಗಲಕೋಟೆ ಜಿಲ್ಲೆಯ ಲಕ್ಷ್ಮೀ ಸಹಕಾರಿ ಬ್ಯಾಂಕ್ ನಿಯಮಿತದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ l ಕೂಡಲೇ ಅರ್ಜಿ ಸಲ್ಲಿಸಿ
Tags: Degree
Published by: Tajabi Pathan | Date:17 ಜನವರಿ 2023
not found

ಲಕ್ಷ್ಮೀ ಸಹಕಾರಿ ಬ್ಯಾಂಕ್ ನಿಯಮಿತ ಗುಳೇದಗುಡ್ಡದಲ್ಲಿ ಖಾಲಿ ಇರುವ 17 ಅಕೌಂಟೆಂಟ್ ಮತ್ತು ಕಿರಿಯ ಸಹಾಯಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ದಿನಾಂಕ 30/01/2023 ರೊಳಗಾಗಿ ಖುದ್ದಾಗಿ ಬಂದು/ ಅಂಚೆ/ ಕೊರಿಯರ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ : 17 
ಅಕೌಂಟೆಂಟ್ ಹುದ್ದೆ (ಕಂಪ್ಯೂಟರ್ ಪ್ರೋಗ್ರಾಮರ್) - 01 
ಕಿರಿಯ ಸಹಾಯಕ ಹುದ್ದೆಗಳು - 16 
ಅರ್ಜಿ ಸಲ್ಲಿಸುವ ವಿಳಾಸ :
ಸದಸ್ಯ ಕಾರ್ಯದರ್ಶಿ, ಸಿಬ್ಬಂದಿ ನೇಮಕಾತಿ ಸಮಿತಿ, 

ಲಕ್ಷ್ಮೀ  ಸಹಕಾರಿ ಬ್ಯಾಂಕ್ ನಿಯಮಿತ, ಪುರಸಭೆ ಹತ್ತಿರ, ಗುಳೇದಗುಡ್ಡ - 587203, ಬಾಗಲಕೋಟೆ.

No. of posts:  17
Application Start Date:  16 ಜನವರಿ 2023
Application End Date:  30 ಜನವರಿ 2023
Work Location:  ಬಾಗಲಕೋಟೆ ಜಿಲ್ಲೆ
Selection Procedure:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಮೌಖಿಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. 

Qualification:

ಈ ಹುದ್ದೆಗಳಿಗೆ ಅರ್ಜಿಸಲ್ಲಿಸ ಬಯಸುವ ಅಭ್ಯರ್ಥಿಗಳು ಕಂಪ್ಯೂಟರ್ ಆಪರೇಷನ್ ಮತ್ತು ಅಪ್ಲಿಕೇಶನ್ ಪದವಿ / ಯಾವುದೇ ಪದವಿ ಜೊತೆಗೆ ಕಂಪ್ಯೂಟರ್ ಜ್ಞಾನ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯ /ಸಂಸ್ಥೆಯಿಂದ ಪಡೆದಿರಬೇಕು.

Fee:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು
ಸಾಮಾನ್ಯ ಅಭ್ಯರ್ಥಿಗಳು 1000 /- ರೂ ಅರ್ಜಿ ಶುಲ್ಕವನ್ನು
SC / ST ಅಭ್ಯರ್ಥಿಗಳು 500 /- ರೂ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

Age Limit:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯಸ್ಸು ಹಾಗೂ ಗರಿಷ್ಠ 35 ವರ್ಷ ವಯೋಮಿತಿಯನ್ನು ಹೊಂದಿರಬೇಕಾಗುತ್ತದೆ.
SC / ST ಅಭ್ಯರ್ಥಿಗಳಿಗೆ 5 ವರ್ಷಗಳು 
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷಗಳು ವಯೋಮಿತಿ ಸಡಿಲಿಕೆ ಇರಲಿದೆ.

Pay Scale:

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 
ಅಕೌಂಟಂಟ್ ಹುದ್ದೆಗೆ ಮಾಸಿಕ 21,600/- ರಿಂದ 40,050/- ವೇತನ 
ಸಹಾಯಕ ನಿರ್ದೇಶಕ ಹುದ್ದೆಗಳಿಗೆ 16000 /- ರಿಂದ 29600 /- ರೂ ವೇತನ ನಿಗದಿಪಡಿಸಿರಲಾಗುತ್ತದೆ.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.

To Download Official Notification

Comments