ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಶಸ್ತ್ರ ಪೊಲೀಸ್ ಕಾನ್ಸ್ ಟೇಬಲ್ ಒಟ್ಟು 3484 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟ

ಕರ್ನಾಟಕ ರಾಜ್ಯ ಪೊಲೀಸ್ (KSP) ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 3064 ಸಶಸ್ತ್ರ ಪೊಲೀಸ್ ಕಾನ್ಸ್ ಟೇಬಲ್ (ಸಿಎಆರ್ / ಡಿಎಆರ್) ಹುದ್ದೆಗಳ ನೇಮಕಾತಿಗಾಗಿ ಇದೀಗ ಅಧಿಸೂಚನೆ ಪ್ರಕಟಗೊಂಡಿದ್ದು, ಅರ್ಜಿ ಸಲ್ಲಿಕೆಯ ದಿನಾಂಕ 19 ಸೆಪ್ಟಂಬರ್ 2022 ರಿಂದ ಆರಂಭಗೊಂಡು ದಿನಾಂಕ 31 ಅಕ್ಟೋಬರ್ 2022 ವರೆಗೆ ಅವಕಾಶ ನೀಡಲಾಗಿದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ವೃಂದ ಹುದ್ದೆಗಳ ಸಂಖ್ಯೆ :
* ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ (ಸಾಮಾನ್ಯ ಪುರುಷ) (ಸಿಎಆರ್ / ಡಿಎಆರ್) 2996
* ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ (ಪುರುಷ ತೃತೀಯ ಲಿಂಗ) (ಸಿಎಆರ್ / ಡಿಎಆರ್) 68
* ಒಟ್ಟು 3064
ಕಲ್ಯಾಣ ಕರ್ನಾಟಕದ ಹುದ್ದೆಗಳ ವಿವರ :
* ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ (ಸಿಎಆರ್ / ಡಿಎಆರ್) (ಸಾಮಾನ್ಯ ಪುರುಷ) (ಸ್ಥಳೀಯವೃಂದ) (80%) : 279
* ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ (ಸಿಎಆರ್ / ಡಿಎಆರ್) (ಪುರುಷ ತೃತೀಯ ಲಿಂಗ) (ಸ್ಥಳೀಯವೃಂದ) (80%) : 08
* ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ (ಸಿಎಆರ್ / ಡಿಎಆರ್) (ಸಾಮಾನ್ಯ ಪುರುಷ) ಬೆಂಗಳೂರು ನಗರ (ಸ್ಥಳೀಯವೃಂದ) (8%) : 79
* ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ (ಸಿಎಆರ್ / ಡಿಎಆರ್) (ಪುರುಷ ತೃತೀಯ ಲಿಂಗ) ಬೆಂಗಳೂರು ನಗರ (ಸ್ಥಳೀಯವೃಂದ) (8%) : 03
* ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ (ಸಿಎಆರ್ / ಡಿಎಆರ್) (ಸಾಮಾನ್ಯ ಪುರುಷ) (ಮಿಕ್ಕುಳಿದ ವೃಂದ) (20%) : 51
* ಒಟ್ಟು 420
ಒಟ್ಟು ಖಾಲಿ ಇರುವ ಹುದ್ದೆಗಳು : 3064 + 420 = 3484
* ಸಾಮಾನ್ಯ ಅರ್ಹತೆ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ₹400
* ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ ₹200 ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
ದಿನಾಂಕ 31 ಅಕ್ಟೋಬರ್ 2022ಕ್ಕೆ ಅನ್ವಯಿಸುವಂತೆ ಅಭ್ಯರ್ಥಿಗಳಿಗೆ ಕನಿಷ್ಠ 18 ವಯಸ್ಸಾಗಿರಬೇಕು ಹಾಗೂ ಗರಿಷ್ಠ 25+2 ವರ್ಷಗಳಾಗಿರಬೇಕು.
* ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 27+2 ವರ್ಷಗಳು.
* ಕರ್ನಾಟಕ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಭ್ಯರ್ಥಿಗಳಿಗೆ ಗರಿಷ್ಠ 30+2 ವರ್ಷಗಳ ವಯೋಮಿತಿ ನಿಗದಿಪಡಿಸಲಾಗಿದೆ.
- ಅಭ್ಯರ್ಥಿಗಳಿಗೆ ಈ ಒಂದು ಬಾರಿ ನೇಮಕಾತಿಗೆ ಮಾತ್ರ 2 ವರ್ಷಗಳ ವಯೋಮಿತಿಯನ್ನು ಹೆಚ್ಚಿಸಲು ಸರಕಾರ ಆದೇಶಿಸಲಾಗಿರುತ್ತದೆ.
ಭರ್ಜರಿ ರಿಯಾಯಿತಿಯೊಂದಿಗೆ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ತಯಾರಿಗಾಗಿ ಪುಸ್ತಕಗಳನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮನೆಗೆ ಪುಸ್ತಕಗಳನ್ನು ತಲುಪಿಸಲಾಗುವದು.

Comments