Loading..!

ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ಖಾಲಿ ಇರುವ ವಿವಿಧ 34 ಹುದ್ದೆಗಳನ್ನು ನೇಮಕಾತಿ
Published by: Basavaraj Halli | Date:18 ಜನವರಿ 2020
not found
KSHRC Recruitment for Various Posts 2020:

ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು ಖಾಲಿ ಇರುವ ವಿವಿಧ 34 ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇರೆಗೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಈ ನೇಮಕಾತಿಯು ಪ್ರಥಮತಃ ಆರು ತಿಂಗಳ ಅವಧಿಗೆ ಅಥವಾ ನೇಮಕಾತಿ ಆದವರ ಸೇವೆಯು ತೃಪ್ತಿಕರವೆಂದು ಕಂಡುಬಂದಲ್ಲಿ ಪುನಃ ಮುಂದುವರಿಸುವ ಆಯೋಗದ ವಿವೇಚನೆಗೆ ಒಳಪಟ್ಟಿದೆ.

ಖಾಲಿ ಹುದ್ದೆಗಳ ವಿವರ :
* ವಿಲೇಖನಾಧಿಕಾರಿ - ಒಂದು ಹುದ್ದೆ
* ಅಧ್ಯಕ್ಷರ ಆಪ್ತ ಕಾರ್ಯದರ್ಶಿ- ಒಂದು ಹುದ್ದೆ
* ಶಾಖಾಧಿಕಾರಿ- ಎರಡು ಹುದ್ದೆ
* ಸಹಾಯಕ ವಿಲೇಖನಾಧಿಕಾರಿ- ಒಂದು ಹುದ್ದೆ
* ಕೋರ್ಟ್ ಅಧಿಕಾರಿ- ಮೂವರು ಹುದ್ದೆ
* ಹಿರಿಯ ಸಹಾಯಕರು- ಒಂದು ಹುದ್ದೆ
* ತೀರ್ಪು ಬರಹಗಾರರು- ಒಂದು ಹುದ್ದೆ
* ಕಾನೂನು ಸಹಾಯಕರು- ಎರಡು ಹುದ್ದೆ
* ಸಹಾಯಕರು- ಎರಡು ಹುದ್ದೆ
* ಮಾನ್ಯ ಅಧ್ಯಕ್ಷರ ಆಪ್ತ ಸಹಾಯಕರು ಅಥವಾ ಶೀಘ್ರ ಲಿಪಿಕಾರರು- ನಾಲ್ಕು ಹುದ್ದೆ
* ರೆಕಾರ್ಡ್ ಕೀಪರ್- ಒಂದು ಹುದ್ದೆ
* ಶೀಘ್ರಲಿಪಿಕಾರರು- ಒಂದು ಹುದ್ದೆ
* ಕಿರಿಯ ಸಹಾಯಕರು- ಎರಡು ಹುದ್ದೆ
* ಬೆರಳಚ್ಚುಗಾರರು- ಎರಡು ಹುದ್ದೆ
* ವಾಹನ ಚಾಲಕರು- ಮೂರು ಹುದ್ದೆ
* ಸ್ವೀಪರ್ಸ್ / ವಾಚ್ ಮ್ಯಾನ್- ನಾಲ್ಕು ಹುದ್ದೆ
* ಗೃಹ ಪರಿಚಾರಕರು- ಮೂರು ಹುದ್ದೆ
ಒಟ್ಟು ಖಾಲಿ ಇರುವ ಹುದ್ದೆಗಳ ಸಂಖ್ಯೆ: 34
No. of posts:  34
Application Start Date:  18 ಜನವರಿ 2020
Application End Date:  31 ಜನವರಿ 2020
Work Location:  ಕರ್ನಾಟಕ
Qualification: ಹುದ್ದೆಗಳಿಗನುಗುಣವಾಗಿ ವಿವಿಧ ವಿದ್ಯಾರ್ಹತೆಯನ್ನು ನಿಗದಿಯಾಡಿಸಲಾಗಿದ್ದು, ಹುದ್ದೆಗಳಿಗೆ ಬೇಕಾದ ಅರ್ಹತೆಯ ಬಗ್ಗೆ ಸಂಪೂರ್ಣ ವಿವರವನ್ನು ಈ ಕೆಳಗೆ ನೀಡಿರುವ ಅಧಿಸೂಚನೆ ಮೂಲಕ ಡೌನ್ಲೋಡ್ ಮಾಡಿಕೊಂಡು ಓದಿ ಕೊಳ್ಳಬಹುದಾಗಿದೆ
Pay Scale: ಹುದ್ದೆಗೆ ಅನುಗುಣವಾದ ವೇತನ ಶ್ರೇಣಿಗಾಗಿ ಅಧಿಸೂಚನೆಯನ್ನು ಡೌನ್ ಲೋಡ್ ಮಾಡಿಕೊಂಡು ಗಮನಿಸಿ

ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿ ಈ ಕೆಳಗೆ ನೀಡಿರುವ ವಿಳಾಸಕ್ಕೆ ದಿನಾಂಕ 31 ಜನವರಿ 2020 ರೊಳಗಾಗಿ ತಲುಪುವಂತೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ವಿಳಾಸ:
ಕಾರ್ಯದರ್ಶಿಗಳು,
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ,
ಐದನೇ ಹಂತ, ಬಹುಮಹಡಿ ಕಟ್ಟಡ, ಮೂರನೇ ಮಹಡಿ
ಬೆಂಗಳೂರು-560001.

ಈ ನೇಮಕಾತಿ ಅಧಿಸೂಚನೆಯ ಕುರಿತು ಸಂಪೂರ್ಣ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದಾಗಿದೆ.

KSHRC Recruitment for Various Posts 2020:
to download official notification KSHRC Recruitment for Various Posts 2020
to download application form KSHRC Recruitment for Various Posts 2020
KAS ಕನಸು ಹೊತ್ತ ಅಭ್ಯರ್ಥಿಗಳಿಗಾಗಿ ವಿವಿಧ ಪುಸ್ತಕಗಳನ್ನು ಸಂಗ್ರಹಿಸಿ ಇಲ್ಲಿ ನೀಡಲಾಗಿದೆ, ಇವುಗಳನ್ನು ಉತ್ತಮ ರಿಯಾಯಿತಿಯೊಂದಿಗೆ Amazon ನಿಂದ ಖರೀದಿಸಿ ಉತ್ತಮ ತಯಾರಿ ನಡೆಸಿ

Comments