ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ
ಕರ್ನಾಟಕ ಸರಕಾರದ ನಿರ್ದೇಶನದಂತೆ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ಕೆ-ಸೆಟ್-2025 ಪರೀಕ್ಷೆಗೆ ಸಂಬಂಧಿಸಿದಂತೆ ದಿನಾಂಕ 02 ನವೆಂಬರ್ 2025 ರಂದು ನಡೆಯಲಿರುವ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.ಬೆಂಗಳೂರು, ಬೆಳಗಾವಿ, ಬಳ್ಳಾರಿ, ವಿಜಯಪುರ, ದಾವಣಗೆರೆ, ಧಾರವಾಡ, ಕಲಬುರಗಿ, ಶಿವಮೊಗ್ಗ, ತುಮಕೂರು ಮತ್ತು ಮಂಗಳೂರು ಸೇರಿ ರಾಜ್ಯದಾದ್ಯಂತ 12 ಪರೀಕ್ಷಾ ಕೇಂದ್ರಗಳಿವೆ.
🎓 ವಿದ್ಯಾರ್ಹತೆ :
=> ಅಭ್ಯರ್ಥಿಗಳು ಯು.ಜಿ.ಸಿ.ಯಿಂದ ಮಾನ್ಯತೆ ಪಡೆದಿರುವ ವಿಶ್ವವಿದ್ಯಾನಿಲಯದಿಂದ ಉನ್ನತ ಶಿಕ್ಷಣ ಸಂಸ್ಥೆಯಿಂದ ಸ್ನಾತಕೋತ್ತರ ಪದವಿ ಅಥವಾ ಸಮಾನವಾದ ಪರೀಕ್ಷೆಗಳಲ್ಲಿ ನಿಗದಿತ ಶೇಕಡಾವಾರು 55% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು, ಹಾಗೂ ಪರಿಶಿಷ್ಟರು, ಹಿಂದುಳಿದ ವರ್ಗದವರು ಮತ್ತು ಅಂಗವಿಕಲ ಅಭ್ಯರ್ಥಿಗಳು 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
=> ಪ್ರಸ್ತುತ ಸ್ನಾತಕೋತ್ತರ ಪದವಿಯ ಪ್ರಥಮ ಅಥವಾ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಕೂಡ ಪರೀಕ್ಷೆ ತೆಗೆದುಕೊಳ್ಳಲು ಅರ್ಹರಿರುತ್ತಾರೆ. ಕೆಸೆಟ್ ಫಲಿತಾಂಶ ಪ್ರಕಟಿಸಿದ ಎರಡು ವರ್ಷದೊಳಗಾಗಿ ನಿಗದಿತ ಅಂಕಗಳೊಂದಿಗೆ ಉತ್ತೀರ್ಣರಾದ ಬಗ್ಗೆ ಸ್ನಾತಕೋತ್ತರ ಪದವಿ ಅಂಕಪಟ್ಟಿಗಳನ್ನು ಹಾಜರುಪಡಿಸಿದರೆ ಮಾತ್ರ ಅರ್ಹತಾ ಪ್ರಮಾಣಪತ್ರ ಪಡೆಯಬಹುದು.
=> ಸ್ನಾತಕೋತ್ತರ ಪದವಿ ಅಧ್ಯಯನ ಮಾಡಿದ ವಿಷಯದಲ್ಲಿಯೇ ಕೆಸೆಟ್ ಬರೆಯಬೇಕು. ಪ್ರಸ್ತುತ ಕೆಸೆಟ್‌ನಲ್ಲಿ ಇಲ್ಲದ ವಿಷಯಗಳಿಗೆ ಯುಜಿಸಿ ನೆಟ್ ಅಥವಾ ಸಿಎಸ್ ಐಆರ್-ನೆಟ್ ಬರೆಯಬಹುದು.
🎂ವಯಸ್ಸಿನ ಮಿತಿ : ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ 2025 ತೆಗೆದುಕೊಳ್ಳಲು ಗರಿಷ್ಠ ವಯೋಮಿತಿ ಇರುವುದಿಲ್ಲ.
💸 ಅರ್ಜಿ ಶುಲ್ಕ :
- ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಈ ಕೆಳಗಿನಂತೆ ಶುಲ್ಕವನ್ನು ಪಾವತಿಸಬೇಕು
- ಸಾಮಾನ್ಯ ವರ್ಗ, ಪ್ರವರ್ಗ- IIA, IIB, IIIA, IIIB ರೂ. 1000/-
- ಪ್ರವರ್ಗ- I, SC, ST, PWD ರೂ. 700/-
📋 ಪರೀಕ್ಷಾ ವಿಧಾನ :
ಒಟ್ಟು ಎರಡು ಪತ್ರಿಕೆಗಳಿದ್ದು,ಮೊದಲ ಪತ್ರಿಕೆಯಲ್ಲಿ 50 ಕಡ್ಡಾಯ ಪ್ರಶ್ನೆಗಳಿಗೆ 100 ಅಂಕಗಳಿರುತ್ತವೆ. ವಿಷಯಾಧಾರಿತ ಎರಡನೇ ಪತ್ರಿಕೆಯಲ್ಲಿ 100 ಕಡ್ಡಾಯ ಪ್ರಶ್ನೆಗಳಿಗೆ 200 ಅಂಕಗಳು ಇರಲಿವೆ. ಒಟ್ಟಾರೆ ಎರಡೂ ಪತ್ರಿಕೆಗಳಿಗೆ 3 ತಾಸಿನ ಅವಧಿ ಇರಲಿದೆ. ಸಾಮಾನ್ಯ ಪತ್ರಿಕೆಯಲ್ಲಿ ಅಭ್ಯರ್ಥಿಗಳ ಬೋಧನೆ, ಸಂಶೋಧನೆ ಹಾಗೂ ಬೌದ್ಧಿಕ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ. ಎರಡನೇ ಪತ್ರಿಕೆಯು ಆಯಾ ವಿಷಯಕ್ಕೆ ಸಂಬಂಧಿಸಿರುತ್ತದೆ. ಅರ್ಹತೆಗಾಗಿ ಯುಜಿಸಿ-ನೆಟ್ ಮಾನದಂಡದ ಅನುಸಾರವೇ ಕೆಸೆಟ್ ಮಾನದಂಡಗಳನ್ನು ರೂಪಿಸಲಾಗಿದ್ದು, ಸಾಮಾನ್ಯ ವರ್ಗದವರು ಎರಡೂ ಪತ್ರಿಕೆಗಳಲ್ಲಿ ಶೇ.40 ಹಾಗೂ ಉಳಿದವರು ಶೇ.35 ಅಂಕಗಳನ್ನು ಪಡೆಯಬೇಕಿದೆ.
📝 ಅರ್ಜಿಯನ್ನು ಸಲ್ಲಿಸುವ ವಿಧಾನ :
🔹 ಕೆ-ಸೆಟ್2025ಕ್ಕೆ ಪರೀಕ್ಷೆ ಬರೆಯಲು ಬಯಸುವ ಅಭ್ಯರ್ಥಿಗಳು ಪರೀಕ್ಷೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್ https://cetonline.karnataka.gov.in/kea/ ನಲ್ಲಿ ಆನ್ ಲೈನ್ ಅರ್ಜಿ ಸಲ್ಲಿಸಬೇಕು.
🔹ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಯಾವುದೇ ರೀತಿಯ ಅನಾನುಕೂಲತೆ ಅಥವಾ ಕೊನೆಯ ನಿಮಿಷದ ತೊಂದರೆಗಳು ಅಥವಾ ಅನಿರೀಕ್ಷಿತ ತೊಂದರೆಗಳನ್ನು ತಪ್ಪಿಸಲು, ಅಭ್ಯರ್ಥಿಗಳು ಕೊನೆಯ ದಿನಾಂಕಕ್ಕಾಗಿ ಕಾಯದೆ ಮುಂಚಿತವಾಗಿ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ. ಕೊನೆಯ ದಿನಾಂಕದಂದು ಉಂಟಾಗುವ ಯಾವುದೇ ರೀತಿಯ ತೊಂದರೆಗಳಿಗೆ ಕೆಇಎಯು ಜವಬ್ದಾರಿಯಾಗಿರುವುದಿಲ್ಲ.
🔹ಅಭ್ಯರ್ಥಿಗಳು ನಿಗದಿತ ವಿವರಗಳೊಂದಿಗೆ ಈ ಕೆಳಗಿನಂತೆ ನೋಂದಾಯಿಸತಕ್ಕದ್ದು (ಅಭ್ಯರ್ಥಿಯ ವಿವರಗಳು, ವಿದ್ಯಾಭ್ಯಾಸ ಮತ್ತು ಕೆಸೆಟ್-2025 ಪರೀಕ್ಷೆಯ ವಿವರಗಳು) ಮುಂದುವರೆಸುತ್ತಾ ಅಭ್ಯರ್ಥಿಗಳು ವಿದ್ಯಾರ್ಹತೆಯ ಕುರಿತಂತೆ ತಾವು ಪಿ.ಜಿ ಕೋರ್ಸ್ ಅನ್ನು ಉತ್ತೀರ್ಣರಾಗಿರುವ ಬಗ್ಗೆ ಅಥವಾ ಪ್ರಸ್ತುತ ವಿದ್ಯಾಭ್ಯಾಸ ಮಾಡುತ್ತಿರುವ ಬಗ್ಗೆ ಮಾಹಿತಿ ಸಲ್ಲಿಸುವುದು.
📅 ಪ್ರಮಖ ದಿನಾಂಕಗಳು :
1. ಅಧಿಸೂಚನೆಯ ದಿನಾಂಕ : 22ನೇ ಆಗಸ್ಟ್ 2025
2. Online ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ : 28ನೇ ಆಗಸ್ಟ್ 2025
3. Online ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 18ನೇ ಸೆಪ್ಟೆಂಬರ್ 2025
4. ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 19ನೇ ಸೆಪ್ಟೆಂಬರ್ 2025
5. ಪರೀಕ್ಷಾ ಪಾವೇಶ ಪಾತ್ರ ಬಿಡುಗಡೆ ದಿನಾಂಕ : 24/10/2025
6. ಪರೀಕ್ಷಾ ದಿನಾಂಕ : 02ನೇ ನವೆಂಬರ್ 2025
🔍ಗಮನಿಸಿ : ಒಟ್ಟು 33 ವಿಷಯಗಳಲ್ಲಿ ಕೆಸೆಟ್ ನಡೆಸಲಾಗುತ್ತಿದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದವರು ರಾಜ್ಯದ ಯಾವುದೇ ವಿಶ್ವವಿದ್ಯಾಲಯ, ಪ್ರಥಮ ದರ್ಜೆ ಕಾಲೇಜು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ( ಸರ್ಕಾರಿ, ಅನುದಾನಿತ ಮತ್ತು ಖಾಸಗಿ) ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕಗೊಳ್ಳಲು ಅರ್ಹರಾಗಿರುತ್ತಾರೆ. ಆದರೆ, ಆಯಾ ಸಂಸ್ಥೆಯ ನಿಯಮ ಮತ್ತು ಕಾಯ್ದೆಗಳಿಗೆ ಒಳಪಟ್ಟಿರುತ್ತಾರೆ ಎಂದು ತಿಳಿಸಲಾಗಿದೆ.
📋ಮತ್ತೆ ಪರೀಕ್ಷೆಗೆ ಅವಕಾಶವಿಲ್ಲ :
ಈಗಾಗಲೇ ಕೆಸೆಟ್ ಬರೆದ ಅಭ್ಯರ್ಥಿಗಳು ಮುಂಬರುವ ಕೆಸೆಟ್‌ನಲ್ಲಿ ಅದೇ ವಿಷಯದಲ್ಲಿ ಅರ್ಜಿ ಸಲ್ಲಿಸುವಂತಿಲ್ಲ. ಮತ್ತೆ ಅರ್ಜಿ ಸಲ್ಲಿಸಿದಲ್ಲಿ ಹಿಂದಿನ ಅರ್ಹತೆಯನ್ನೂ ರದ್ದುಪಡಿಸಲಾಗುತ್ತದೆ ಎಂದು ಎಚ್ಚರಿಸಲಾಗಿದೆ.
Comments