Loading..!

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಿಂದ 1492 ಹುದ್ದೆಗಳ ಭರ್ಜರಿ ನೇಮಕಾತಿಗಾಗಿ ಅಧಿಸೂಚನೆ ಪ್ರಕಟ | ಈ ಕುರಿತ ವಿವರ ನಿಮಗಾಗಿ
Published by: Basavaraj Halli | Date:7 ಫೆಬ್ರುವರಿ 2022
not found

ಕರ್ನಾಟಕ ರಾಜ್ಯದಲ್ಲಿ ವಿದ್ಯುತ್ ಪೂರೈಸುತ್ತಿರುವ ಸರ್ಕಾರಿ ಅಧೀನ ಸಂಸ್ಥೆಯಾಗಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಖಾಲಿ ಇರುವ ಈ ಕೆಳಕಂಡ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ನಿಗದಿತ ನಮೂನೆಯಲ್ಲಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.


ಹುದ್ದೆಗಳ ವಿವರ : 
ಸಹಾಯಕ ಎಂಜಿನಿಯರ್ (ವಿದ್ಯುತ್) : 505
ಸಹಾಯಕ ಇಂಜಿನಿಯರ್ (ಸಿವಿಲ್) : 28 
ಕಿರಿಯ ಇಂಜಿನಿಯರ್ (ವಿದ್ಯುತ್) : 570 
ಕಿರಿಯ ಇಂಜಿನಿಯರ್ (ಸಿವಿಲ್) : 29 
ಕಿರಿಯ ಸಹಾಯಕ : 360 
ಒಟ್ಟು ಹುದ್ದೆಗಳು : 1498

No. of posts:  1498
Application Start Date:  7 ಫೆಬ್ರುವರಿ 2022
Application End Date:  7 ಮಾರ್ಚ್ 2022
Last Date for Payment:  9 ಮಾರ್ಚ್ 2022
Work Location:  ಕರ್ನಾಟಕ
Selection Procedure: ಅಭ್ಯರ್ಥಿಗಳನ್ನು ಹುದ್ದೆಗಳಿಗನುಗುಣವಾಗಿ ಲಿಖಿತ ಪರೀಕ್ಷೆ ನಡೆಸಿ ಅದರಲ್ಲಿ ಪಡೆದ ಅಂಕಗಳು ಹಾಗು ಅರ್ಹತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುವದು.
Qualification:

1 ) ಸಹಾಯಕ ಇಂಜಿನಿಯರ್ ( ವಿ ) : ಮನ್ನಣೆ ಪಡೆದ ಯಾವುದೇ ವಿಶ್ವವಿದ್ಯಾಲಯ / ಸಂಸ್ಥೆಯ ( ಎ.ಐ.ಸಿ.ಟಿ.ಇ ಇಂದ ಮಾನ್ಯತೆ ಪಡೆದಿರುವ ) ಎಲೆಕ್ಟಿಕಲ್ ಅಥವಾ ಎಲೆಸ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್‌ನಲ್ಲಿ ಬಿ.ಇ. / ಬಿ.ಟೆಕ್ ಪದವಿ ಹೊಂದಿರತಕ್ಕದ್ದು ಅಥವಾ ಎ.ಎಂ.ಐ.ಇ. ( ಭಾಗ - ಎ ಮತ್ತು ಬಿ ಎಲೆಕ್ಟಿಕಲ್‌ ) ಪರೀಕ್ಷೆಯಲ್ಲಿ ಉತ್ತೀರ್ಣತೆ . 
2 ) ಸಹಾಯಕ ಇಂಜಿನಿಯರ್ ( ಸಿವಿಲ್ ) : ಮನ್ನಣೆ ಪಡೆದ ಯಾವುದೇ ವಿಶ್ವವಿದ್ಯಾಲಯ / ಸಂಸ್ಥೆಯ ( ಎ.ಐ.ಸಿ.ಟಿ.ಇ ಇಂದ ಮಾನ್ಯತೆ ಪಡೆದಿರುವ) ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಬಿ.ಇ. / ಬಿ.ಟೆಕ್ ಪದವಿ ಹೊಂದಿರತಕ್ಕದ್ದು ಅಥವಾ ಎ.ಎಂ.ಐ.ಇ. ( ಭಾಗ - ಎ ಮತ್ತು ಬಿ ಸಿವಿಲ್ ) ಪರೀಕ್ಷೆಯಲ್ಲಿ ಉತ್ತೀರ್ಣತೆ. 
3 ) ಕಿರಿಯ ಇಂಜಿನಿಯರ್ ( ವಿ ) : ಕರ್ನಾಟಕ ರಾಜ್ಯದ ಪಾಲಿಟೆಕ್ನಿಕ್‌ನಿಂದ ವ್ಯಾಸಂಗ ಮಾಡಿ ಕರ್ನಾಟಕ ತಾಂತ್ರಿಕ ಶಿಕ್ಷಣ ಮಂಡಳಿಯಿಂದ ಎಲೆಕ್ಟಿಕಲ್ ಅಥವಾ ಎಲೆಕ್ಟಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರತಕ್ಕದ್ದು.
4) ಕಿರಿಯ ಇಂಜಿನಿಯರ್ (ಸಿವಿಲ್) : ಕರ್ನಾಟಕ ರಾಜ್ಯದ ಪಾಲಿಟೆಕ್ನಿಕ್‌ನಿಂದ ವ್ಯಾಸಂಗ ಮಾಡಿ ಕರ್ನಾಟಕ ತಾಂತ್ರಿಕ ಶಿಕ್ಷಣ ಮಂಡಳಿಯಿಂದ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರತಕ್ಕದ್ದು.
5) ಕಿರಿಯ ಸಹಾಯಕ : ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ನಡೆಸಲಾಗುವ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ಸಿ.ಬಿ.ಎಸ್.ಇ. ಮತ್ತು ಐ.ಎಸ್.ಸಿ. ಪರೀಕ್ಷಾ ಮಂಡಳಿಗಳಿಂದ ನಡೆಸಲಾಗುವ 12 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣತೆ.

Fee:

* ಸಾಮಾನ್ಯ ವರ್ಗದ ಅಭ್ಯರ್ಥಿಗಳು : 600/- (ಸರಕು ಮತ್ತು ಸೇವಾ ತೆರಿಗೆ ಹಾಗೂ ಅಂಚೆ ಸೇವಾ ಶುಲ್ಕ ಒಳಗೊಂಡಂತೆ).
* ಪ್ರವರ್ಗ-1, 2(ಎ), 2(ಬಿ), 3(ಎ) ಮತ್ತು 3(ಬಿ) ಗೆ ಸೇರಿದ ಅಭ್ಯರ್ಥಿಗಳು : 600/- (ಸರಕು ಮತ್ತು ಸೇವಾ ತೆರಿಗೆ ಹಾಗೂ ಅಂಚೆ ಸೇವಾ ಶುಲ್ಕ ಒಳಗೊಂಡಂತೆ).
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಅಭ್ಯರ್ಥಿಗಳು : 350/- (ಸರಕು ಮತ್ತು ಸೇವಾ ತೆರಿಗೆ ಹಾಗೂ ಅಂಚೆ ಸೇವಾ ಶುಲ್ಕ ಒಳಗೊಂಡಂತೆ).
* ವಿಕಲಚೇತನ ಅಭ್ಯರ್ಥಿಗಳು : ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ .

Age Limit:

* ಕನಿಷ್ಠ ವಯೋಮಿತಿ (ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ): 18 ವರ್ಷಗಳು


ಗರಿಷ್ಠ ವಯೋಮಿತಿ :
- ಸಾಮಾನ್ಯ ವರ್ಗದ ಅಭ್ಯರ್ಥಿಗಳು : 35 ವರ್ಷಗಳು 
- ಪ್ರವರ್ಗ-1, 2(ಎ), 2(ಬಿ), 3(ಎ) ಮತ್ತು 3(ಬಿ) ಗೆ ಸೇರಿದ ಅಭ್ಯರ್ಥಿಗಳು : 38 ವರ್ಷಗಳು 
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಹಾಗೂ ಪ್ರವರ್ಗ -1 ಕ್ಕೆ ಸೇರಿದ 40 ವರ್ಷಗಳ ಅಭ್ಯರ್ಥಿಗಳು

Pay Scale:

ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳು ಮಾಸಿಕ ಈ ಕೆಳಗಿನಂತೆ ವೇತನ ಪಡೆಯಲಿದ್ದಾರೆ.
* ಸಹಾಯಕ ಎಂಜಿನಿಯರ್ (ವಿದ್ಯುತ್) : ಮಾಸಿಕ 41130/- ರಿಂದ 72920/-
* ಸಹಾಯಕ ಇಂಜಿನಿಯರ್ (ಸಿವಿಲ್) :  ಮಾಸಿಕ 41130/- ರಿಂದ 72920/-
* ಕಿರಿಯ ಇಂಜಿನಿಯರ್ (ವಿದ್ಯುತ್) :  ಮಾಸಿಕ 26270 /- ರಿಂದ 65020/-
* ಕಿರಿಯ ಇಂಜಿನಿಯರ್ (ಸಿವಿಲ್) :  ಮಾಸಿಕ 26270 /- ರಿಂದ 65020/-
* ಕಿರಿಯ ಸಹಾಯಕ : ಮಾಸಿಕ 20220 /- ರಿಂದ 51640/- 
- ಈ ನೇಮಕಾತಿಯ ಕುರಿತು ಮತ್ತಷ್ಟು ಮಾಹಿತಿಯನ್ನು ಶೀಘ್ರದಲ್ಲೇ ಅಪ್ಡೇಟ್ ಮಾಡಲಾಗುವದು ನಿರೀಕ್ಷಿಸಿ....

To Download the Official Notification

Comments

Hanamesha Hugar ಜನ. 25, 2022, 9:18 ಪೂರ್ವಾಹ್ನ
Siddu Nidagundi ಜನ. 25, 2022, 9:22 ಪೂರ್ವಾಹ್ನ
Basavaraj Halli ಜನ. 25, 2022, 9:29 ಪೂರ್ವಾಹ್ನ
Vhirathimmappa Vhirathimmappa ಜನ. 25, 2022, 11:26 ಪೂರ್ವಾಹ್ನ
Kencha Hanumantha ಜನ. 27, 2022, 8:53 ಅಪರಾಹ್ನ
Naveen Naveen ಜನ. 30, 2022, 12:25 ಅಪರಾಹ್ನ
Shabila Banu Shabila ಫೆಬ್ರ. 2, 2022, 1:07 ಅಪರಾಹ್ನ
Harish A ಫೆಬ್ರ. 18, 2022, 10:10 ಪೂರ್ವಾಹ್ನ
Harish A ಫೆಬ್ರ. 18, 2022, 10:10 ಪೂರ್ವಾಹ್ನ