Loading..!

KPSCಯಿಂದ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಲ್ಲಿನ Group-C ಹುದ್ದೆಗಳ ಅಧಿಸೂಚನೆ ಇದೀಗ ಪ್ರಕಟ
Published by: Basavaraj Halli | Date:24 ಎಪ್ರಿಲ್ 2022
not found
ಕರ್ನಾಟಕ ಲೋಕಸೇವಾ ಆಯೋಗದಿಂದ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಲ್ಲಿನ ಸಹಾಯಕ ನಗರ ಯೋಜಕರು ಗ್ರೂಪ್ ಸಿ ವೃಂದದ ಒಟ್ಟು 60 ಸಹಾಯಕ ನಗರ ಯೋಜಕರು ಗ್ರೇಡ್ ಸಿ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆಯನ್ನು ಪ್ರಕಟಿಸಲಾಗಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆಯೂ ದಿನಾಂಕ 30/04/2022 ರಿಂದ ಆರಂಭಗೊಳ್ಳಲಿದ್ದು, ಅರ್ಜಿ ಸಲ್ಲಿಸಲು ದಿನಾಂಕ 30/05/2022 ಕೊನೆಯ ದಿನವಾಗಿರುತ್ತದೆ.
No. of posts:  60
Application Start Date:  30 ಎಪ್ರಿಲ್ 2022
Application End Date:  30 ಮೇ 2022
Last Date for Payment:  31 ಮೇ 2022
Work Location:  ಕರ್ನಾಟಕ
Selection Procedure: ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವದು.
Qualification: Must possess a Diploma in Civil Engineering/ Diploma in Civil Engineering(General) / Diploma in Civil Engineering(Civil Draughtsman ship) from a Recognized Polytechnic
Fee:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ರೂ 600/- 

ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ರೂ 300/- 

ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ 50/- ಶುಲ್ಕ ನಿಗದಿಪಡಿಸಲಾಗಿದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿರುತ್ತದೆ.
Age Limit:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಕನಿಷ್ಠ 18 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಗರಿಷ್ಠ 35 ವರ್ಷಗಳ ವಯೋಮಿತಿಯನ್ನು ಮೀರಿರಬಾರದು 

- ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಗರಿಷ್ಠ 38 ವರ್ಷಗಳು ಹಾಗೂ 

- SC ST ಪ್ರವರ್ಗ-1 ರ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
Pay Scale: ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಮಾಸಿಕ 33,450 ರಿಂದ 62,600 ರವರೆಗೆ ವೇತನ ಪಡೆಯಲಿದ್ದಾರೆ.
To Download the Official Notification : KPSC Group-C New Notification Published 2022

Comments

S M Patel ಏಪ್ರಿಲ್ 29, 2022, 8:42 ಪೂರ್ವಾಹ್ನ