Loading..!

ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದಿಂದ 384 ಗೆಜೆಟೆಡ್ ಪ್ರೊಬೇಷನರ್ಸ್(KAS) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಇದೀಗ ಪ್ರಕಟ | ಈ ಕುರಿತು ಮಾಹಿತಿ ನಿಮಗಾಗಿ
Tags: KAS
Published by: Basavaraj Halli | Date:15 ಎಪ್ರಿಲ್ 2024
not found
ಕರ್ನಾ‍ಟಕ ರಾಜ್ಯದಲ್ಲಿ ಖಾಲಿ ಇರುವ 2024 ನೇ ಸಾಲಿನ ಗೆಜೆಟೆಡ್ ಪ್ರೊ ಬೇಷನರ್ಸ್(KAS) ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಲೋಕಸೇವಾ ಆಯೋಗವು ನಡೆಸುವ ಪೂರ್ವಭಾವಿ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ದಿನಾಂಕ 04 ಮಾರ್ಚ್ 2024 ರಿಂದ Online ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
* ಪೂರ್ವಭಾವಿ ಪರೀಕ್ಷಾ (Prelims) ದಿನಾಂಕ: 05-05-2024 (ತಾತ್ಕಾಲಿಕ)

- ಗೆಜೆಟೆಡ್ ಪ್ರೊಬೇಷನರಿ (KAS) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು 2024 ಏಪ್ರಿಲ್ 3 ರವರೆಗೆ ನಿಗದಿಪಡಿಸಲಾಗಿತ್ತು, ಆದರೆ ಇದೀಗ ಅರ್ಜಿ ಸಲ್ಲಿಕೆ ದಿನಾಂಕವನ್ನು ಏಪ್ರಿಲ್.15 ವರೆಗೆ ವಿಸ್ತರಣೆ ಮಾಡಲಾಗಿದೆ. ಪೂರ್ವಭಾವಿ ಪರೀಕ್ಷಾ (Prelims)ಯನ್ನು ದಿನಾಂಕ 05-05-2024 ರ ಬದಲು ಜುಲೈ 7 ರಂದು ನಡೆಸಲು ನಿರ್ಧರಿಸಲಾಗಿದೆ.
No. of posts:  384
Application Start Date:  4 ಮಾರ್ಚ್ 2024
Application End Date:  3 ಎಪ್ರಿಲ್ 2024
Work Location:  ಕರ್ನಾಟಕ
Selection Procedure: (1) ಪೂರ್ವಭಾವಿ ಪರೀಕ್ಷೆ(ವಸ್ತುನಿಷ್ಠ ಬಹು ಆಯ್ಕೆ ಮಾದರಿ)
(2) ಮುಖ್ಯ ಪರೀಕ್ಷೆ (ಲಿಖಿತ ಪರೀಕ್ಷೆ)
(3) ಸಂದರ್ಶನ
Qualification: ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಭಾರತದ ಕಾನೂನು ರೀತ್ಯ ಸ್ಥಾಪಿತವಾದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿಯನ್ನು ಹೊಂದಿರಬೇಕು.
Fee: * ಸಾಮಾನ್ಯ ಅಭ್ಯರ್ಥಿಗಳಿಗೆ 600/-
* ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 300/-
* ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50/-
* ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.
Age Limit: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 21 ವರ್ಷ ವಯೋಮಿತಿ ಹೊಂದಿರಬೇಕು ಮತ್ತು ಗರಿಷ್ಠ ವಯೋಮಿತಿ ಈ ಕೆಳಗಿನಂತಿರುತ್ತದೆ
* ಸಾಮಾನ್ಯ ಅಭ್ಯರ್ಥಿಗಳಿಗೆ : 38 ವರ್ಷ
* ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ : 41 ವರ್ಷ
* SC / ST / CAT-1 ಅಭ್ಯರ್ಥಿಗಳಿಗೆ : 43 ವರ್ಷ
To Download Official Notification : KAS Notification 2024

Comments