Loading..!

KPSC ಯಿಂದ ಕರ್ನಾ‍ಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಖಾಲಿ ಇರುವ 48 ಗ್ರೇಡ್ A ಹುದ್ದೆಗಳ ನೇಮಕಾತಿ
Tags: Degree
Published by: Basavaraj Halli | Date:6 ಮಾರ್ಚ್ 2020
not found
ಕರ್ನಾ‍ಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದದ 48 “ಸಹಾಯಕ ನಿಯಂತ್ರಕರು ಸಮೂಹ ‘ಎ’ (ವೇತನ ಶ್ರೇಣಿ 52650-97100) ಹುದ್ದೆಗಳನ್ನು ಭರ್ತಿ ಮಾಡಲು ಆಯೋಗವು ನಡೆಸುವ ಪೂರ್ವಭಾವಿ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ಪ್ರಮುಖ ದಿನಾಂಕಗಳು :
* ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಪ್ರಾರಂಭಿಕ ದಿನಾಂಕ : 06-02-2020
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 06-03-2020
* ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ 07-03-2020
* ಪೂ‍ರ್ವಭಾವಿ ಪರೀಕ್ಷಾ ದಿನಾಂಕ : 24-05-2020
* ಮುಖ್ಯ ಪರೀಕ್ಷಾ ದಿನಾಂಕ : 2020 ರ ಆಗಸ್ಟ್ / ಸೆಪ್ಟೆಂಬರ್ ಮಾಹೆಯಲ್ಲಿ ನಡೆಸಲಾಗುವುದು
(ದಿನಾಂಕವನ್ನು ನಂತರದಲ್ಲಿ ತಿಳಿಸಲಾಗುವುದು)
No. of posts:  48
Application Start Date:  6 ಫೆಬ್ರುವರಿ 2020
Application End Date:  6 ಮಾರ್ಚ್ 2020
Last Date for Payment:  7 ಮಾರ್ಚ್ 2020
Work Location:  ಕರ್ನಾ‍ಟಕ
Selection Procedure: (1) ಪೂರ್ವಭಾವಿ ಪರೀಕ್ಷೆ(ವಸ್ತುನಿಷ್ಠ ಬಹು ಆಯ್ಕೆ ಮಾದರಿ)
(2) ಮುಖ್ಯ ಪರೀಕ್ಷೆ (ಲಿಖಿತ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆ)
Qualification: ಭಾರತ ಸರ್ಕಾರದ ಕಾನೂನು ರೀತ್ಯಾ ಸ್ಥಾಪಿಸಲ್ಪಟ್ಟಿರುವ ವಿಶ್ವವಿದ್ಯಾಲಯದಿಂದ ವಾಣಿಜ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ (ಎಂ.ಕಾಂ.) ಅಥವಾ ಎಂ.ಬಿ.ಎ. (ಆರ್ಥಿಕ) ಅಥವಾ ಎಂ.ಬಿ.ಎ. (ಆರ್ಥಿಕ ನಿರ್ವಾಹಣೆ) ಅಥವಾ ಎಂ.ಬಿ.ಎ./ ಎಂ.ಕಾಂ (ಅಂತರರಾಷ್ರ್ಟೀಯ ವ್ಯವಹಾರ) ಅಥವಾ ಎಂ.ಬಿ.ಎ./ ಎಂ.ಕಾಂ (ಆರ್ಥಿಕ ವಿಶ್ಲೇಷಣೆ) ಅಥವಾ ಯು.ಜಿ.ಸಿ ಯು ಮೇಲ್ಕಂಡ ಸ್ನಾತಕೋತ್ತರ ಪದವಿಗೆ ತತ್ಸಮಾನವೆಂದು ಪರಿಗಣಿಸಿ ಅಧಿಸೂಚಿಸಿರುವ ವಿದ್ಯಾರ್ಹತೆಯನ್ನು ಹೊಂದಿರತಕ್ಕದ್ದು ಅಥವಾ ಫೆಲೋ ಆಫ್ ಚಾರ್ಟಡ್ ಅಕೌಂಟೆಂಟ್ಸ್ ಅಥವಾ ಐ.ಸಿ.ಡಬ್ಲ್ಯೂ.ಎ. (I.C.W.A) ಹೊಂದಿರತಕ್ಕದ್ದು.
Fee: * ಸಾಮಾನ್ಯ ಅಭ್ಯರ್ಥಿಗಳಿಗೆ 600/-
* ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 300/-
* ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50/-
* ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ
- ಅರ್ಜಿ ಶುಲ್ಕದೊಂದಿಗೆ 35/- ರೂಪಾಯಿ ಪ್ರೊಸೆಸಿಂಗ್ ಫೀಯನ್ನು ಅಭ್ಯರ್ಥಿಗಳು ಪಾವತಿಸಬೇಕು.
Age Limit: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 21 ವರ್ಷ ವಯೋಮಿತಿ ಹೊಂದಿರಬೇಕು
ಮತ್ತು ಗರಿಷ್ಠ ವಯೋಮಿತಿ ಈ ಕೆಳಗಿನಂತಿರುತ್ತದೆ
* ಸಾಮಾನ್ಯ ಅಭ್ಯರ್ಥಿಗಳಿಗೆ : 35 ವರ್ಷ
* ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ : 38 ವರ್ಷ
* SC / ST / CAT-1 ಅಭ್ಯರ್ಥಿಗಳಿಗೆ : 40 ವರ್ಷ
Pay Scale: ವೇತನ ಶ್ರೇಣಿ 52650/- to 97100/-
to download official notification
KAS ಕನಸು ಹೊತ್ತ ಅಭ್ಯರ್ಥಿಗಳಿಗಾಗಿ ವಿವಿಧ ಪುಸ್ತಕಗಳನ್ನು ಸಂಗ್ರಹಿಸಿ ಇಲ್ಲಿ ನೀಡಲಾಗಿದೆ, ಇವುಗಳನ್ನು ಉತ್ತಮ ರಿಯಾಯಿತಿಯೊಂದಿಗೆ Amazon ನಿಂದ ಖರೀದಿಸಿ ಉತ್ತಮ ತಯಾರಿ ನಡೆಸಿ

Comments