Loading..!

ಕೆಪಿಸಿಎಲ್(KPCL) ನೇಮಕಾತಿ 2019 : 23 ಜ್ಯೂನಿಯರ್ ಪರ್ಸನಲ್ ಆಫೀಸರ್ ಮತ್ತು 5 ವೆಲ್‌ಫೇರ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
| Date:16 ಮಾರ್ಚ್ 2019
not found
ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (KPCL) ನೇಮಕಾತಿ 23 ಜ್ಯೂನಿಯರ್ ಪರ್ಸನಲ್ ಆಫೀಸರ್ (ನಾನ್ -ಹೈದರಾಬಾದ್ ಕರ್ನಾಟಕ) ಮತ್ತು 5 ವೆಲ್‌ಫೇರ್ ಆಫೀಸರ್ (ಹೈದರಾಬಾದ್ ಕರ್ನಾಟಕ) ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತರು ಅಧಿಸೂಚನೆಯನ್ನು ಓದಿದ ನಂತರ ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಗಳನ್ನು ಹೊಂದಿದ್ದಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾರ್ಚ್ 20, 2019 ರಿಂದ ಏಪ್ರಿಲ್ 22,2019 ರ ಸಂಜೆ 5 ಗಂಟೆಯೊಳಗೆ ಅರ್ಜಿಗಳನ್ನು ಸಲ್ಲಿಸಬಹುದು.
No. of posts:  28
Application Start Date:  20 ಮಾರ್ಚ್ 2019
Application End Date:  22 ಎಪ್ರಿಲ್ 2019
Work Location:  ಕರ್ನಾಟಕ ವಿದ್ಯುತ್ ನಿಗಮ ನಿಯಮಿತ
Selection Procedure: ಅಭ್ಯರ್ಥಿಗಳನ್ನು ಶೈಕ್ಷಣಿಕ ವಿದ್ಯಾಭ್ಯಾಸದ ಅಂಕಗಳ ಆಧಾರದ ಮೇಲೆ ಮತ್ತು ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು.
Qualification: ಜ್ಯೂನಿಯರ್ ಪರ್ಸನಲ್ ಆಫೀಸರ್ ಹುದ್ದೆಗಳಿಗೆ :
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಪದವಿಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಹೊಂದಿರಬೇಕು ಮತ್ತು ಸ್ನಾತಕೋತ್ತರ ಪದವಿ ಅಥವಾ ಡಿಪ್ಲೋಮಾ ವಿದ್ಯಾರ್ಹತೆಯನ್ನು ಹೊಂದಿರಬೇಕು.

ವೆಲ್‌ಫೇರ್ ಆಫೀಸರ್ ಹುದ್ದೆಗಳಿಗೆ :
-ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಪದವಿಯನ್ನು ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಹೊಂದಿರಬೇಕು. ಸೋಷಿಯಲ್ ವರ್ಕ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪಡೆದಿರಬೇಕು.
Fee: ಅಭ್ಯರ್ಥಿಗಳು ಅರ್ಜಿಯ ಜೊತೆಗೆ ಅರ್ಜಿ ಶುಲ್ಕವನ್ನು ಪಾವತಿಸಬೇಕಿರುತ್ತದೆ.
- ಸಾಮಾನ್ಯ ಅಭ್ಯರ್ಥಿಗಳು 500/- ರೂ
- ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡ / ಪ್ರವರ್ಗ-1 ರ ಅಭ್ಯರ್ಥಿಗಳು 250/-ರೂ ಶುಲ್ಕ
- ಮಾಜಿ ಸೈನಿಕ, ಅಂಗವಿಕಲ ಅಭ್ಯರ್ಥಿಗಳು ನಾಮಿನಲ್ ಶುಲ್ಕ 50/-ರೂ ಅನ್ನು ಪಾವತಿಸಬೇಕಿರುತ್ತದೆ.

ಅರ್ಜಿ ಶುಲ್ಕವನ್ನು ಪೋಸ್ಟ್ ಆಫೀಸ್ ನಲ್ಲಿ ಏಪ್ರಿಲ್ 26,2019 ರ ಮಧ್ಯಾಹ್ನ 3 ಗಂಟೆಯೊಳಗೆ ಪಾವತಿಸಬೇಕಿರುತ್ತದೆ.
Age Limit: ಅರ್ಜಿದಾರರು ಕನಿಷ್ಟ 18 ವರ್ಷ ವಯೋಮಿತಿಯನ್ನು ಹೊಂದಿರತಕ್ಕದ್ದು.
ಗರಿಷ್ಟ ವಯೋಮಿತಿ:
- ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ಪ್ರವರ್ಗ-1 : 40 ವರ್ಷಗಳು
- ಇತರೆ ಹಿಂದುಳಿದ ವರ್ಗಗಳು : 38 ವರ್ಷಗಳು
- ಜನರಲ್ ಮೆರಿಟ್ : 35 ವರ್ಷಗಳು
- ಮಾಜಿ ಸೈನಿಕ : 45 ವರ್ಷಗಳು
Pay Scale: - ವೆಲ್‌ಫೇರ್ ಆಫೀಸರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 19,055/- ರಿಂದ 43,995/-ರೂ ವೇತನವನ್ನು ನೀಡಲಾಗುವುದು.
- ಜ್ಯೂನಿಯರ್ ಪರ್ಸನಲ್ ಆಫೀಸರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 14,395/- ರಿಂದ 40,785/-ರೂ ವೇತನವನ್ನು ನೀಡಲಾಗುವುದು.
to download official notification for junior personal officer
to download official notification for welfare officer
KPSC ಯಿಂದ ಅದಿಸೂಚಿಸಲಾಗುವ FDA ಮತ್ತು SDA ಪರೀಕ್ಷೆಯಾ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments