Loading..!

ಕೊಪ್ಪಳದಲ್ಲಿ ಸೈನಿಕ ಹುದ್ದೆಗಳ ನೇಮಕಾತಿ ರ್ಯಾಲಿ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ನಿಮಗಾಗಿ
| Date:18 ಸೆಪ್ಟೆಂಬರ್ 2019
not found
ಭಾರತೀಯ ಸೇನೆ ಸೇರಲು ಕಾಯುತ್ತಿರುವ ಯುವ ಜನರಿಗೆ ಸಿಹಿ ಸುದ್ದಿ ಇಲ್ಲಿದೆ. ಸೇನೆಯು ಮುಂದಿನ ನವೆಂಬರ್ ನಲ್ಲಿ ಕೊಪ್ಪಳದಲ್ಲಿ ನೇಮಕಾತಿ ರ್ಯಾಲಿ ನಡೆಸಲಿದೆ. ಅಲ್ಲಿಯ ಯುವಜನ ಮತ್ತು ಕ್ರೀಡಾ ಇಲಾಖೆಯ ಕ್ರೀಡಾಂಗಣದಲ್ಲಿ ನವೆಂಬರ್ 2 ರಿಂದ 15 ರವರೆಗೆ ರ್ಯಾಲಿ ನಡೆಯಲಿದೆ.
ಈ ಕುರಿತು ಸೇನಾ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಲಾಗಿದ್ದು, ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಯ ಅಭ್ಯರ್ಥಿಗಳು ಮಾತ್ರ ರ್ಯಾಲಿಯಲ್ಲಿ ಭಾಗವಹಿಸಬಹುದಾಗಿದೆ. ಈ ರ್ಯಾಲಿಯಲ್ಲಿ ಭಾಗವಹಿಸಲು ಮೊದಲೇ ಆನ್ಲೈನ್ ನಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕಾಗಿರುವುದು ಅವಶ್ಯಕವಾಗಿದ್ದು, ಅಕ್ಟೋಬರ್ 24 ರ ತನಕ ಅವಕಾಶ ನೀಡಲಾಗಿದೆ.
Application Start Date:  10 ಸೆಪ್ಟೆಂಬರ್ 2019
Application End Date:  24 ಅಕ್ಟೋಬರ್ 2019
Qualification: * ಸೊಲ್ಜೆರ್ ಹುದ್ದೆಗೆ ಈ ರ್ಯಾಲಿ ನಲ್ಲಿ ನೇಮಕ ನಡೆಯಲಿದ್ದು, ಸೊಲ್ಜೆರ್ (ಜನರಲ್ ಡ್ಯೂಟಿ) ಹುದ್ದೆಗೆ sslc ಯಲ್ಲಿ ಕನಿಷ್ಠ ಶೇ.45 ಅಂಕ ಪಡೆದು (ಪ್ರತಿ ವಿಷಯದಲ್ಲಿ ಶೇ.33 ಅಂಕ) ತೇರ್ಗಡೆಯಾಗಿರುವ ಅಭ್ಯರ್ಥಿಗಳು ಈ ರ್ಯಾಲಿ ಯಲ್ಲಿ ಭಾಗವಹಿಸಬಹುದು.
* ಅದೇ ರೀತಿ ಸೊಲ್ಜೆರ್ (ಟೆಕ್ನಿಕಲ್) ಹುದ್ದೆಗಳಿಗೆ ವಿಜ್ಞಾನ ವಿಷಯದಲ್ಲಿ (ಪಿಸಿಕ್ಸ್,ಕೆಮಿಸ್ಟ್ರಿ,ಮಾಥ್ಸ್ ಮತ್ತು ಇಂಗ್ಲಿಷ್) ಕನಿಷ್ಠ ಶೇ.50 ಅಂಕಗಳೊಂದಿಗೆ ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾಗಿರುವ ಅಭ್ಯರ್ಥಿಗಳು ಪಾಲ್ಗೊಳ್ಳಬಹುದಾಗಿದೆ.
* ಸೊಲ್ಜೆರ್ (ಟೆಕ್ನಿಕಲ್ ನರ್ಸಿಂಗ್ ಅಸಿಸ್ಟಂಟ್) ಹುದ್ದೆಗೆ ನಡೆಯುವ ನೇಮಕದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಕನಿಷ್ಠ ಶೇ.50 ಅಂಕಗಳೊಂದಿಗೆ ದ್ವಿತೀಯ ಪಿಯುಸಿಯಲ್ಲಿ (ವಿಜ್ಞಾನ) ತೇರ್ಗಡೆಯಾಗಿರಬೇಕು.
Age Limit: ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೂ ಕನಿಷ್ಠ 17 ವರ್ಷ 6 ತಿಂಗಳು ತುಂಬಿರಬೇಕು. ಸೋಲ್ಜರ್ (ಜನರಲ್ ಡ್ಯೂಟಿ) ಗರಿಷ್ಠ ವಯೋಮಿತಿ 21 ವರ್ಷ ಹಾಗು ಉಳಿದೆಲ್ಲಾ ಹುದ್ದೆಗಳಿಗೆ ಗರಿಷ್ಠ 23 ವರ್ಷ ನಿಗದಿಪಡಿಸಲಾಗಿದೆ.
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಸಾಮಾನ್ಯ ಜ್ಞಾನ (General Knowledge) ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments