ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (KRCL) ನಲ್ಲಿ ಖಾಲಿ ಇರುವ ಜೂನಿಯರ್ ಎಲೆಕ್ಟ್ರಿಕಲ್ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Hanamant Katteppanavar | Date:23 ಡಿಸೆಂಬರ್ 2020

ಭಾರತೀಯ ರೈಲ್ವೆಯ ಅಧೀನದಲ್ಲಿರುವ ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (ಕೆಆರ್‌ಸಿಎಲ್) ಇಲ್ಲಿ ಖಾಲಿ ಇರುವ 10 ಜೂನಿಯರ್ ಎಲೆಕ್ಟ್ರಿಕಲ್ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಈ ಹುದ್ದೆಗಳಿಗೆ ಕೇವಲ ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್‌ನ ನಿಯಮಿತ ಸೇವೆ ಸಲ್ಲಿಸುತ್ತಿರುವ ನೌಕರರಿಂದ ಮಾತ್ರ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. (ಆರ್‌ಪಿಎಫ್ / ಆರ್‌ಪಿಎಸ್ಎಫ್ ಸಿಬ್ಬಂದಿ, ಗುತ್ತಿಗೆ ಸಿಬ್ಬಂದಿ, ಮರು-ತೊಡಗಿಸಿಕೊಂಡ ಸಿಬ್ಬಂದಿ ಮತ್ತು ಸಲಹೆಗಾರರನ್ನು ಹೊರತುಪಡಿಸಿ) ನೇರ ಆಯ್ಕೆಯ ಮೂಲಕ ಹುದ್ದೆಗೆ ಆಯ್ಕೆ ಮಾಡಲಾಗುವುದು.
ಆನ್ಲೈನ್ ಅರ್ಜಿ ಪ್ರಕ್ರಿಯೆಯು ಡಿಸೆಂಬರ್ 16, 2020 ರಂದು ಪ್ರಾರಂಭಗೊಂಡು ಮತ್ತು ಜನವರಿ 15, 2021 ರಂದು ಕೊನೆಗೊಳ್ಳುಲಿದೆ.
No. of posts: 10
Application Start Date: 16 ಡಿಸೆಂಬರ್ 2020
Application End Date: 15 ಜನವರಿ 2021
Selection Procedure:
- ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು.
Qualification:
- ಪೂರ್ಣ ಅವಧಿಯ ಪದವಿ ಅಥವಾ ಡಿಪ್ಲೊಮಾವನ್ನು ಎಲೆಕ್ಟ್ರಿಕಲ್ / ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ವಿಭಾಗದಲ್ಲಿ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಮತ್ತು 2 ವರ್ಷಗಳ ಕಾರ್ಯಾನುಭವವನ್ನು ಹೊಂದಿರಬೇಕು.
Fee:
- ಈ ಹುದ್ದೆಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕವಿರುವುದಿಲ್ಲ.
Age Limit:
- ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜನವರಿ 01, 2021 ರ ಅನ್ವಯ ಗರಿಷ್ಠ- 40 ವರ್ಷಗಳನ್ನೂ ಮೀರಬಾರದು. ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ - 43 ವರ್ಷಗಳು ಮತ್ತು ಪ.ಜಾ ಮತ್ತು ಪ.ಪಂ ದ ಅಭ್ಯರ್ಥಿಗಳಿಗೆ - 45 ವರ್ಷಗಳ ವಯೋಮಿತಿ ಸಡಲಿಕೆಯನ್ನು ನೀಡಲಾಗಿದೆ.





Comments