Loading..!

ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ನೇಮಕಾತಿ 2025 : ತಂತ್ರಜ್ಞರ ಹುದ್ದೆಗಳಿಗೆ ನೇರ ಸಂದರ್ಶನ/ No Exam
Tags: ITI
Published by: Yallamma G | Date:11 ಜುಲೈ 2025
not found

                 ಸರ್ಕಾರಿ ಹುದ್ದೆಯನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೀಗ ಸಿಹಿ ಸುದ್ದಿ ನಿಮಗಾಗಿಯೇ. ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (KRCL) 2025ರ ನೇಮಕಾತಿಯನ್ನು ಘೋಷಿಸಿದ್ದು, ವಿವಿಧ ತಂತ್ರಜ್ಞರು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿಯು ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕದ ಅರ್ಹ ಅಭ್ಯರ್ಥಿಗಳಿಗೆ ಮಹತ್ವದ ಉದ್ಯೋಗಾವಕಾಶವನ್ನು ಒದಗಿಸುತ್ತಿದೆ.  ITI ಪಾಸಾದ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶ.  


                ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿಒಟ್ಟು 50 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ, ಈ ನೇಮಕಾತಿ ಅಡಿಯಲ್ಲಿ25 ತಂತ್ರಜ್ಞರು (ವೆಲ್ಡರ್) ಮತ್ತು 25 ತಂತ್ರಜ್ಞರು (ಫಿಟ್ಟರ್) ಹುದ್ದೆಗಳ ನೇಮಕ ಪ್ರಕ್ರಿಯೆ ನಡೆಯಲಿದೆ. ಹುದ್ದೆಗಳಿಗೆ ವಾಕ್-ಇನ್ ಸಂದರ್ಶನವನ್ನು ಏರ್ಪಡಿಸಲಾಗಿದೆ. 14-ಜುಲೈ-2025ರಂದು ಬೆಳಿಗ್ಗೆ 10:30ಕ್ಕೆ ಎಕ್ಸಿಕ್ಯುಟಿವ್ ಕ್ಲಬ್, ಕೊಂಕಣ ರೈಲ್ ವಿಹಾರ್, ಕೊಂಕಣ ರೈಲ್ವೇ ಕಾರ್ಪೊರೇಷನ್ ಲಿಮಿಟೆಡ್, ಸೀವುಡ್ಸ್ ರೈಲ್ವೆ ನಿಲ್ದಾಣದ ಹತ್ತಿರ, ಸೆಕ್ಟರ್ -40, ಸೀವುಡ್ಸ್ (ಪಶ್ಚಿಮ), ನವಿ ಮುಂಬೈನಲ್ಲಿ ನಡೆಯಲಿರುವ ಈ ಸಂದರ್ಶನದಲ್ಲಿ ಭಾಗವಹಿಸಲು ಆಸಕ್ತರು ತಮ್ಮ ಅರ್ಜಿಗಳನ್ನು ಆಫ್‌ಲೈನ್ ಮೂಲಕ ಸಲ್ಲಿಸಬಹುದು. ಟೆಕ್ನಿಕಲ್ ಕ್ಷೇತ್ರದಲ್ಲಿ ಸರ್ಕಾರಿ ಉಸ್ತುವಾರಿ ಯೋಜನೆಗಳಲ್ಲಿ ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶ. ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬೇಕು.


                  ತಂತ್ರಜ್ಞರು ಅಧಿಕಾರಿಗಳಿಗೆ ನೇಮಕಾತಿ ನಿಯಮಾನುಸಾರ ವೇತನ ಶ್ರೇಣಿಯೊಂದಿಗೆ ಈ ಹುದ್ದೆಗಳು ಉತ್ತಮ ವೃತ್ತಿಪರ ಅವಕಾಶವನ್ನು ನೀಡುತ್ತವೆ. ಈ ಬ್ಲಾಗ್ ಪೋಸ್ಟ್‌ನಲ್ಲಿ, ನಾವು ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ 2025ರ ಪ್ರಮುಖ ವಿವರಗಳು, ಖಾಲಿ ಹುದ್ದೆಗಳ ವಿವರವಾದ ಮಾಹಿತಿ, ಅರ್ಹತಾ ಮಾನದಂಡಗಳು ಮತ್ತು ಅಧಿಕೃತ ಸಂಪರ್ಕ ಮಾಹಿತಿಯನ್ನು ವಿವರವಾಗಿ ಚರ್ಚಿಸಲಿದ್ದೇವೆ. ಆಸಕ್ತ ಅಭ್ಯರ್ಥಿಗಳು ಮುಂದೆ ಓದಿ ಈ ಅವಕಾಶವನ್ನು ಪಡೆಯಲು ಸಿದ್ಧರಾಗಿ! 


KRCL ನೇಮಕಾತಿ 2025 ಪ್ರಮುಖ ವಿವರಗಳು : 


KRCL ಹುದ್ದೆಯ ಅಧಿಸೂಚನೆ : 
ಸಂಸ್ಥೆಯ ಹೆಸರು : ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ( KRCL )
ಹುದ್ದೆಗಳ ಸಂಖ್ಯೆ: 50
ಉದ್ಯೋಗ ಸ್ಥಳ: ವಡೋದರಾ - ಗುಜರಾತ್
ಹುದ್ದೆಯ ಹೆಸರು: ತಂತ್ರಜ್ಞರು
ಸಂಬಳ: ತಿಂಗಳಿಗೆ ರೂ.35500-40500/-


🔹 ಹುದ್ದೆಗಳ ವಿವರ : 50
ತಂತ್ರಜ್ಞರು (ವೆಲ್ಡರ್) : 25
ತಂತ್ರಜ್ಞರು (ಫಿಟ್ಟರ್) : 25 


🎓 ಶೈಕ್ಷಣಿಕ ಅರ್ಹತೆ : KRCL ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಹುದ್ದೆಗಳಿಗೆ ಅನುಗುಣವಾಗಿ ಈ ಕೆಳಗಿನಂತೆ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು.
# ತಂತ್ರಜ್ಞರು (ವೆಲ್ಡರ್) :  ಐಟಿಐ ಜೊತೆಗೆ ವೆಲ್ಡಿಂಗ್ ಟ್ರೇಡ್ ಹೊಂದಿರಬೇಕು.
# ತಂತ್ರಜ್ಞರು (ವೆಲ್ಡರ್) : ಐಟಿಐ ಜೊತೆಗೆ ಫಿಟ್ಟರ್ ಟ್ರೇಡ್ ಹೊಂದಿರಬೇಕು.


🎂 ವಯೋಮಿತಿ:ದಿನಾಂಕ 01/06/2025ಕ್ಕೆ ಅನುಗುಣವಾಗುವಂತೆ ಗರಿಷ್ಠ 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ವಯೋಮಿತಿ ಸಡಿಲಿಕೆ :
• ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ – 5 ವರ್ಷ
• ಒಬಿಸಿ ಅಭ್ಯರ್ಥಿಗಳಿಗೆ – 3 ವರ್ಷಗಳ ವಯೋಮಿತಿ ಸಡಿಲಿಕೆ ಇರಲಿದೆ.


📝 ಆಯ್ಕೆ ವಿಧಾನ : ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.


🎯 ಅರ್ಜಿ ಸಲ್ಲಿಕೆಯ ವಿಧಾನ : ಸಂದರ್ಶನ ಮೂಲಕ ಹುದ್ದೆಗಳಿಗೆ ನೇಮಕ ಮಾಡಲಾಗುವುದು.
ಹಂತ 1 : ಅಭ್ಯರ್ಥಿಯು ಸಂದರ್ಶನಕ್ಕೆ ಹಾಜರಾಗುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ನೇರ ಸಂದರ್ಶನಕ್ಕೆ ಹಾಜರಾಗಬೇಕು.
ಹಂತ 2 : ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ತಮ್ಮ ಮೂಲ ದಾಖಲೆಗಳ ಪ್ರತಿಗಳೊಂದಿಗೆ ಈ ಕೆಳಗಡೆ ನೀಡಲಾಗಿರುವ ಕಛೇರಿಯ ವಿಳಾಸಕ್ಕೆ ಹಾಜರಾಗಬೇಕು. 

ವಾಕ್-ಇನ್ ಸಂದರ್ಶನದ ವಿವರಗಳು:
📅 ದಿನಾಂಕ: ಜುಲೈ 14 ಜುಲೈ 2025 
📍 ಸ್ಥಳ: ಎಕ್ಸಿಕ್ಯುಟಿವ್ ಕ್ಲಬ್, ಕೊಂಕಣ ರೈಲ್ ವಿಹಾರ್, ಕೊಂಕಣ ರೈಲ್ವೇ ಕಾರ್ಪೊರೇಷನ್ ಲಿಮಿಟೆಡ್, ಸೀವುಡ್ಸ್ ರೈಲ್ವೆ ನಿಲ್ದಾಣದ ಹತ್ತಿರ, ಸೆಕ್ಟರ್ -40, ಸೀವುಡ್ಸ್ (ಪಶ್ಚಿಮ), ನವಿ ಮುಂಬೈ.
🕘 ಸಮಯ: ಬೆಳಿಗ್ಗೆ 10:30 ಗಂಟೆ


📄 ಅಗತ್ಯ ದಾಖಲಾತಿಗಳು:
1. ವಿದ್ಯಾರ್ಹತಾ ಪ್ರಮಾಣಪತ್ರಗಳು (ಅಸಲು + ನಕಲು)
2. ಅನುಭವ ಪತ್ರಗಳು
3. ಪಾಸ್‌ಪೋರ್ಟ್ ಅಳತೆ 2 ಫೋಟೋ
4. ಗುರುತಿನ ಚೀಟಿ (ಆಧಾರ್/ಪ್ಯಾನ್/ವೋಟರ್ ಐಡಿ)
5. ನಿಕಾಸಾ ಪ್ರಮಾಣಪತ್ರ (NOC) – ಸರ್ಕಾರಿ ನೌಕರರು


ಪ್ರಮುಖ ದಿನಾಂಕಗಳು:
📅 ಅಧಿಸೂಚನೆ ಬಿಡುಗಡೆ ದಿನಾಂಕ: 27-06-2025
📅 ವಾಕ್-ಇನ್ ದಿನಾಂಕ: 14-ಜುಲೈ-2025

Comments