ಕರ್ನಾಟಕ ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ, ರಾಯಚೂರು ಇಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Basavaraj Halli | Date:6 ಜುಲೈ 2021

ಕರ್ನಾಟಕ ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ, ರಾಯಚೂರು ಜಿಲ್ಲಾ ವಿಭಾಗದಲ್ಲಿ ಖಾಲಿ ಇರುವ ಒಟ್ಟು 17 ಸಹಾಯಕ ವ್ಯವಸ್ಥಾಪಕರು / ಸಹಾಯಕರು ಸೇರಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಅಧಿಸೂಚನೆಯಲ್ಲಿ ನೀಡಲಾಗಿರುವ ಅರ್ಜಿ ನಮೂನೆಯಲ್ಲಿ ಅರ್ಜಿಯನ್ನು ಬೆರಳಚ್ಚು ಮಾಡಿಸಿ, ಅಗತ್ಯ ದಾಖಲೆಗಳೊಂದಿಗೆ ಕಚೇರಿಗೆ ಜುಲೈ 23,2021ರ ಸಂಜೆ 5:30ರೊಳಗೆ ತಲುಪುವಂತೆ ಸಲ್ಲಿಸಬೇಕು.
* ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
ಅರ್ಜಿ ಸಲ್ಲಿಸಬೇಕಾದ ವಿಳಾಸ :
ವ್ಯವಸ್ಥಾಪಕ ನಿರ್ದೇಶಕರು,
ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರ, ಸಂಘಗಳ ಒಕ್ಕೂಟ ನಿಯಮಿತ,
ಪೋಸ್ಟ್ ಬಾಕ್ಸ್ ಸಂಖ್ಯೆ : 328
ಇಂಡಸ್ಟ್ರಿಯಲ್ ಏರಿಯಾ, ಹೈದರಾಬಾದ್ ರೋಡ್,
ರಾಯಚೂರು-584102
ಹುದ್ದೆಗಳ ವಿವರ:
- ಸಹಾಯಕ ವ್ಯವಸ್ಥಾಪಕರು (ಬೀಜ) : 1 ಹುದ್ದೆ
- ಸಹಾಯಕ ವ್ಯವಸ್ಥಾಪಕರು (ವಿತ್ತ) 1 ಹುದ್ದೆ
- ಮಾರಾಟ ಸಹಾಯಕರು 12 ಹುದ್ದೆಗಳು
- ಟೆಕ್ನಿಕಲ್ ಅಸಿಸ್ಟೆಂಟ್ 1 ಹುದ್ದೆ
- ಬೆರಳಚ್ಚುಗಾರರು 1 ಹುದ್ದೆ
- ಚಾಲಕರು 1 ಹುದ್ದೆ
ಒಟ್ಟು 17 ಹುದ್ದೆಗಳು
No. of posts: 17
Application Start Date: 20 ಜೂನ್ 2021
Application End Date: 23 ಜುಲೈ 2021
Work Location: ರಾಯಚೂರು
Selection Procedure:
-ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
Qualification:
-ಅಭ್ಯರ್ಥಿಗಳು ಹುದ್ದೆಗಳಿಗನುಗುಣವಾಗಿ ಸ್ನಾತಕೋತ್ತರ ಪದವಿ, ಪದವಿ (ಬಿ.ಕಾಂ/ಬಿಬಿಎಂ), ಐಟಿಐ, ಡಿಪ್ಲೋಮಾ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆಯನ್ನು ಹೊಂದಿರಬೇಕು.
Fee: - ಪ.ಜಾ/ಪ.ಪಂ, ಪ್ರವರ್ಗ-1ರ ಹಾಗೂ ಅಂಗವಿಕಲ ಅಭ್ಯರ್ಥಿಗಳು 500/-ರೂ, ಹಾಗೂ ಇತರೆ ಎಲ್ಲ ಅಭ್ಯರ್ಥಿಗಳು 1000/-ರೂ ಅರ್ಜಿ ಶುಲ್ಕವನ್ನು ಪಾವತಿಸಬೇಕು.
Age Limit:
ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳು ಕನಿಷ್ಟ 18 ವರ್ಷ ಹಾಗೂ ಗರಿಷ್ಟ 35 ವರ್ಷ ವಯೋಮಿತಿ ಯೊಳಗಿನವರಾಗಿರಬೇಕು.
* ಮೀಸಲಾತಿ ಗಳಿಗನುಗುಣವಾಗಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ. ಈ ಕುರಿತ ಮಾಹಿತಿಗೆ ಅಧಿಸೂಚನೆಯನ್ನು ಗಮನಿಸಿ
Pay Scale:
- ಸಹಾಯಕ ವ್ಯವಸ್ಥಾಪಕರು (ಬೀಜ) : 40,900/- ರಿಂದ 78,200/-ರೂ,
- ಸಹಾಯಕ ವ್ಯವಸ್ಥಾಪಕರು (ವಿತ್ತ) : 40,900/- ರಿಂದ 78,200/-ರೂ,
- ಮಾರಾಟ ಸಹಾಯಕರು / ಟೆಕ್ನಿಕಲ್ ಅಸಿಸ್ಟೆಂಟ್ / ಬೆರಳಚ್ಚುಗಾರರು / ಚಾಲಕರು : 21,400/- ರಿಂದ 42,000/-ರೂ





Comments