Loading..!

ಕೊಡಗು ಜಿಲ್ಲಾ ಪಂಚಾಯತಿಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇರ ನೇಮಕಾತಿ | PUC ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Tags: Degree SSLC
Published by: Yallamma G | Date:7 ಫೆಬ್ರುವರಿ 2025
not found

ಕೊಡಗು ಜಿಲ್ಲಾ ಪಂಚಾಯತ್‌ ವ್ಯಾಪ್ತಿಯಲ್ಲಿನ 10 ಗ್ರಾಮ ಪಂಚಾಯತಿಯ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳಲ್ಲಿ ಖಾಲಿ ಇರುವ 10 ಮೇಲ್ವಿಚಾರಕರ ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ಭರ್ತಿಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 2025ರ ಫೆಬ್ರವರಿ 13ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.


ಹುದ್ದೆಯ ವಿವರ:
- ಹುದ್ದೆಯ ಹೆಸರು: ಮೇಲ್ವಿಚಾರಕರು
- ಹುದ್ದೆಗಳ ಸಂಖ್ಯೆ: 10
- ಉದ್ಯೋಗ ಸ್ಥಳ: ಕೊಡಗು, ಕರ್ನಾಟಕ


ಅರ್ಹತಾ ಮಾನದಂಡ:
ಅಭ್ಯರ್ಥಿಗಳು PUC ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಿಂದ ಪಡೆದಿರಬೇಕು ಮತ್ತು ಸರ್ಟಿಫಿಕೇಷನ್ ಕೋರ್ಸ್ ಇನ್ ಲೈಬ್ರರಿ ಸೈನ್ಸ್ ಪ್ರಮಾಣಪತ್ರವನ್ನು ಪಡೆದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಜೊತೆಗೆ ಕನಿಷ್ಠ 3 ತಿಂಗಳ ಮಾನ್ಯತೆ ಪಡೆದ ಸಂಸ್ಥೆಯಿಂದ ಕಂಪ್ಯೂಟರ ಕೋರ್ಸ್ ನಲ್ಲಿ ಉತ್ತೀರ್ಣರಾಗಿರಬೇಕು. ವೃತ್ತಿಯಲ್ಲಿ ಅನುಭವ ಹೊಂದಿದವರಿಗೆ ಮೊದಲ ಆದ್ಯತೆಯನ್ನು ನೀಡಲಾಗುವುದು. 


ವಯೋಮಿತಿ:
ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು ಹಾಗೂ ಗರಿಷ್ಠ ವಯೋಮಿತಿಯು ಈ ಕೆಳಕಂಡಂತೆ ಇರತಕ್ಕದ್ದು.
ಸಾಮಾನ್ಯ ವರ್ಗ : 35 ವರ್ಷ
OBC : 38 ವರ್ಷ
ಪ.ಜಾ/ಪ.ಪಂ/ಪ್ರ-1 : 40 ವರ್ಷ
ವಿಧವೆಯರು / ಮಾಜಿ ಸೈನಿಕರು ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.


ಅರ್ಜಿ ಶುಲ್ಕ:
- ಸಾಮಾನ್ಯ ಅಭ್ಯರ್ಥಿಗಳು: ₹500/-
- 2A, 2B, 3A, 3B ಅಭ್ಯರ್ಥಿಗಳು: ₹300/-
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಾಜಿ ಸೈನಿಕರು: ₹200/-
- ಎಲ್ಲ ವಿಧದ ವಿಕಲ ಚೇತನ/ ಅಂಗವಿಲಕ ಅಭ್ಯರ್ಥಿಗಳು: ₹100/-
- ಪಾವತಿ ವಿಧಾನ: ಆನ್‌ಲೈನ್ ಮೂಲಕ


ವೇತನ ಶ್ರೇಣಿ: ಮಾಸಿಕ ವೇತನ: ₹18,606/-


ಆಯ್ಕೆ ಪ್ರಕ್ರಿಯೆ:
ಮೆರಿಟ್ ಪಟ್ಟಿ ಆಧಾರಿತ ಆಯ್ಕೆ


ಅರ್ಜಿ ಸಲ್ಲಿಸುವ ವಿಧಾನ:
- ಅಧಿಕೃತ ವೆಬ್‌ಸೈಟ್ https://kodagu.nic.in/ ಗೆ ಭೇಟಿ ನೀಡಿ.
- ಮೇಲ್ವಿಚಾರಕರು ಹುದ್ದೆಗಳ ಅಧಿಸೂಚನೆಯನ್ನು ಓದಿ, ಅರ್ಹತೆಯನ್ನು ಪರಿಶೀಲಿಸಿ.
- ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ.
- 2025ರ ಫೆಬ್ರವರಿ 13ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.


ಪ್ರಮುಖ ದಿನಾಂಕಗಳು:
- ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 2025ರ ಜನವರಿ 27
- ಆನ್‌ಲೈನ್ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 2025ರ ಫೆಬ್ರವರಿ 13

Application End Date:  13 ಫೆಬ್ರುವರಿ 2025
To Download Official Notification

Comments