K-Tech ನೇಮಕಾತಿ 2026: ಕರ್ನಾಟಕ ಐಟಿ-ಬಿಟಿ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ! ತಿಂಗಳಿಗೆ ₹80,000 ವರೆಗೆ ಸಂಬಳ!
ಕರ್ನಾಟಕ ಸರ್ಕಾರದ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಒಂದು ಸುವರ್ಣಾವಕಾಶ. ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಧೀನದಲ್ಲಿರುವ ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ (KITS - ಕಿಟ್ಸ್) ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಅಧಿಕೃತ ಪ್ರಕಟಣೆಯ ಪ್ರಕಾರ, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಒಟ್ಟು 11 ತಿಂಗಳ ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿಯ ಸಂಪೂರ್ಣ ವಿವರಗಳು, ಹುದ್ದೆಗಳ ಸಂಖ್ಯೆ, ಅರ್ಹತೆ, ವೇತನ ಮತ್ತು ಅರ್ಜಿ ಸಲ್ಲಿಸುವ ವಿಧಾನವನ್ನು ಕೆಳಗೆ ವಿವರವಾಗಿ ನೀಡಲಾಗಿದೆ.
ಹುದ್ದೆಗಳ ವಿವರ ಮತ್ತು ವಿಭಾಗಗಳು
ಈ ನೇಮಕಾತಿಯನ್ನು ಮುಖ್ಯವಾಗಿ ಎರಡು ಪ್ರಮುಖ ಯೋಜನೆಗಳ ಅಡಿಯಲ್ಲಿ ಮಾಡಲಾಗುತ್ತಿದೆ:
- ಸ್ಥಳೀಯ ಆರ್ಥಿಕತೆ ವೇಗೋತ್ಕರ್ಷ ಕಾರ್ಯಕ್ರಮ (LEAP - Local Economy Accelerator Program)
- ಕರ್ನಾಟಕ ಸ್ಟಾರ್ಟ್‌ಅಪ್ ಕೋಶ (Start-Up Cell)
.jpg)
I. ಸ್ಥಳೀಯ ಆರ್ಥಿಕತೆ ವೇಗೋತ್ಕರ್ಷ ಕಾರ್ಯಕ್ರಮ (LEAP) ಅಡಿಯ ಹುದ್ದೆಗಳು
1. ಯೋಜನಾ ವ್ಯವಸ್ಥಾಪಕರು (Program Manager)
- ಹುದ್ದೆಗಳ ಸಂಖ್ಯೆ: 01
- ಮಾಸಿಕ ವೇತನ: ₹80,000/- (ಕ್ರೋಡೀಕರಿಸಿದ)
- ಗರಿಷ್ಠ ವಯೋಮಿತಿ: 40 ವರ್ಷಗಳು
- ವಿದ್ಯಾಹರ್ಹತೆ ಮತ್ತು ಅನುಭವ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಸಿನೆಸ್ ಮ್ಯಾನೇಜ್‌ಮೆಂಟ್, ಪಬ್ಲಿಕ್ ಪಾಲಿಸಿ, ಫೈನಾನ್ಸ್ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ (MBA/PGDM) ಹೊಂದಿರಬೇಕು. ಇನ್ಕ್ಯುಬೇಟರ್ ಮ್ಯಾನೇಜ್‌ಮೆಂಟ್, ಇನ್ನೋವೇಶನ್/ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆ ಅಭಿವೃದ್ಧಿ ಅಥವಾ ವೆಂಚರ್ ಕ್ಯಾಪಿಟಲ್‌ಗಳಲ್ಲಿ ಕನಿಷ್ಠ 5 ವರ್ಷಗಳ ಅನುಭವ ಕಡ್ಡಾಯ. ಕನ್ನಡದಲ್ಲಿ ಓದುವ ಮತ್ತು ಬರೆಯುವ ಸಾಮರ್ಥ್ಯ ಹೊಂದಿರಬೇಕು.
- ಹುದ್ದೆಗಳ ಸಂಖ್ಯೆ: 01
- ಮಾಸಿಕ ವೇತನ: ₹45,000/- (ಕ್ರೋಡೀಕರಿಸಿದ)
- ಗರಿಷ್ಠ ವಯೋಮಿತಿ: 35 ವರ್ಷಗಳು
- ವಿದ್ಯಾಹರ್ಹತೆ ಮತ್ತು ಅನುಭವ: MBA/PGDM ಅಥವಾ ಬಿ.ಇ/ಬಿ.ಟೆಕ್, ಬಿಬಿಎ, ಬಿಕಾಂ, ಬಿಎ ಇತ್ಯಾದಿ ಪದವಿ ಹೊಂದಿರಬೇಕು. ಪ್ರೋಗ್ರಾಂ ಕೋ-ಆರ್ಡಿನೇಷನ್, ಡೇಟಾ ಅನಾಲಿಟಿಕ್ಸ್ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷಗಳ ಅನುಭವ ಇರಬೇಕು. MS Office ಪರಿಣತಿ ಮತ್ತು ಕನ್ನಡ ಭಾಷೆಯ ಜ್ಞಾನ ಅತ್ಯಗತ್ಯ.
- ಹುದ್ದೆಗಳ ಸಂಖ್ಯೆ: 01
- ಮಾಸಿಕ ವೇತನ: ₹40,000/- (ಕ್ರೋಡೀಕರಿಸಿದ)
- ಗರಿಷ್ಠ ವಯೋಮಿತಿ: 35 ವರ್ಷಗಳು
- ವಿದ್ಯಾಹರ್ಹತೆ ಮತ್ತು ಅನುಭವ: ಯಾವುದೇ ವಿಷಯದಲ್ಲಿ ಪದವಿ (B.E/B.Tech, BBA, B.Com, BA, ಇತ್ಯಾದಿ). ಪದವಿ ಮುಗಿದ ನಂತರ ಕನಿಷ್ಠ 2 ವರ್ಷಗಳ ಸಮನ್ವಯ ಅಥವಾ ಆಡಳಿತಾತ್ಮಕ ಅನುಭವ ಹೊಂದಿರಬೇಕು.
- ಹುದ್ದೆಗಳ ಸಂಖ್ಯೆ: 01
- ಮಾಸಿಕ ವೇತನ: ₹45,000/- (ಕ್ರೋಡೀಕರಿಸಿದ)
- ಗರಿಷ್ಠ ವಯೋಮಿತಿ: 35 ವರ್ಷಗಳು
- ವಿದ್ಯಾಹರ್ಹತೆ ಮತ್ತು ಅನುಭವ: ಕಂಪ್ಯೂಟರ್ ಸೈನ್ಸ್/ಇನ್ಫಾರ್ಮೇಶನ್ ಟೆಕ್ನಾಲಜಿ ವಿಷಯದಲ್ಲಿ ಎಂ.ಟೆಕ್, ಎಂಸಿಎ ಅಥವಾ ಬಿ.ಇ/ಬಿ.ಟೆಕ್/ಬಿಸಿಎ ಪದವಿ. ಕನಿಷ್ಠ 4 ವರ್ಷಗಳ ಒಟ್ಟಾರೆ ಅನುಭವದೊಂದಿಗೆ ಸರ್ಕಾರಿ ಸಂಸ್ಥೆಯಲ್ಲಿ ಕನಿಷ್ಠ 1 ವರ್ಷ ಕೆಲಸ ಮಾಡಿದ ಅನುಭವವಿರಬೇಕು. DBMS (MongoDB, AWS, Django) ಹಾಗೂ WordPress, JavaScript, TypeScript, Python, React, PHP, Node.js ಇತ್ಯಾದಿಗಳ ಜ್ಞಾನ ಮತ್ತು ಇ-ಟೆಂಡರ್ (E-tender) ಪ್ರಕ್ರಿಯೆಯ ಪರಿಚಯವಿರಬೇಕು.
- ಹುದ್ದೆಗಳ ಸಂಖ್ಯೆ: 01
- ಮಾಸಿಕ ವೇತನ: ₹45,000/- (ಕ್ರೋಡೀಕರಿಸಿದ)
- ಗರಿಷ್ಠ ವಯೋಮಿತಿ: 35 ವರ್ಷಗಳು
- ವಿದ್ಯಾಹರ್ಹತೆ ಮತ್ತು ಅನುಭವ: ಮಾರ್ಕೆಟಿಂಗ್‌ನಲ್ಲಿ MBA ಅಥವಾ ಮಾರ್ಕೆಟಿಂಗ್, ಕಮ್ಯುನಿಕೇಷನ್, ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (BBA/BBM) ಪದವಿ. ಮಾರ್ಕೆಟಿಂಗ್ ಅಥವಾ ಸಾರ್ವಜನಿಕ ಸಂಪರ್ಕದಲ್ಲಿ (PR) ಕನಿಷ್ಠ 3 ವರ್ಷಗಳ ಅನುಭವ ಹೊಂದಿರಬೇಕು.
II. ಕರ್ನಾಟಕ ಸ್ಟಾರ್ಟ್‌ಅಪ್ ಕೋಶ (Start-Up Cell) ಅಡಿಯ ಹುದ್ದೆಗಳು
(ಕರ್ನಾಟಕ ಸ್ಟಾರ್ಟ್‌ಅಪ್ ನೀತಿ 2025-30 ರ ಅಡಿಯಲ್ಲಿ ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ)
1. ವ್ಯವಸ್ಥಾಪಕರು - ಮಾರ್ಕೆಟಿಂಗ್ ಮತ್ತು ಔಟ್‌ರೀಚ್ (Manager - Marketing & Outreach)
- ಹುದ್ದೆಗಳ ಸಂಖ್ಯೆ: 01
- ಮಾಸಿಕ ವೇತನ: ₹80,000/- (ಕ್ರೋಡೀಕರಿಸಿದ)
- ಗರಿಷ್ಠ ವಯೋಮಿತಿ: 40 ವರ್ಷಗಳು
- ವಿದ್ಯಾಹರ್ಹತೆ ಮತ್ತು ಅನುಭವ: ಮಾರ್ಕೆಟಿಂಗ್ ಸ್ಪೆಷಲೈಸೇಶನ್‌ನೊಂದಿಗೆ ಪೂರ್ಣ ಅವಧಿಯ MBA/PGDM/PGDBA (2 ವರ್ಷಗಳ ಅವಧಿ) ಮುಗಿಸಿರಬೇಕು. ಸ್ಟಾರ್ಟ್‌ಅಪ್ ಸೆಲ್ ಕಾರ್ಯಕ್ರಮಗಳಿಗಾಗಿ ಮಾರ್ಕೆಟಿಂಗ್, ಬ್ರ್ಯಾಂಡಿಂಗ್ ಮತ್ತು ಕಮ್ಯುನಿಕೇಷನ್ ವಿಭಾಗದಲ್ಲಿ ಕನಿಷ್ಠ 5 ವರ್ಷಗಳ ವೃತ್ತಿಪರ ಅನುಭವ ಹೊಂದಿರಬೇಕು.
- ಹುದ್ದೆಗಳ ಸಂಖ್ಯೆ: 01
- ಮಾಸಿಕ ವೇತನ: ₹80,000/- (ಕ್ರೋಡೀಕರಿಸಿದ)
- ಗರಿಷ್ಠ ವಯೋಮಿತಿ: 40 ವರ್ಷಗಳು
- ವಿದ್ಯಾಹರ್ಹತೆ ಮತ್ತು ಅನುಭವ: ಪೂರ್ಣ ಅವಧಿಯ MBA/PGDBM/PGDBA ಪದವಿ. ಫಂಡಿಂಗ್ ಕಾರ್ಯಕ್ರಮಗಳಲ್ಲಿ, ಡೇಟಾ ನಿರ್ವಹಣೆ (Data Handling & Management) ಮತ್ತು ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯ ಬಲವಾದ ಜ್ಞಾನದೊಂದಿಗೆ ಕನಿಷ್ಠ 5 ವರ್ಷಗಳ ಅನುಭವ ಹೊಂದಿರಬೇಕು. ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಅತ್ಯುತ್ತಮ ಸಂವಹನ ಕೌಶಲ್ಯವಿರಬೇಕು.
- ಹುದ್ದೆಗಳ ಸಂಖ್ಯೆ: 03
- ಮಾಸಿಕ ವೇತನ: ₹45,000/- (ಕ್ರೋಡೀಕರಿಸಿದ)
- ಗರಿಷ್ಠ ವಯೋಮಿತಿ: 35 ವರ್ಷಗಳು
- ವಿದ್ಯಾಹರ್ಹತೆ ಮತ್ತು ಅನುಭವ: ಯಾವುದೇ ವಿಷಯದಲ್ಲಿ ಪದವಿ (B.E/B.Tech, BBA, B.Com, BA, ಇತ್ಯಾದಿ). ಇನ್ಕ್ಯುಬೇಟರ್‌ಗಳು/ಆಕ್ಸಿಲರೇಟರ್‌ಗಳು ಅಥವಾ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯಲ್ಲಿ ಕನಿಷ್ಠ 2 ವರ್ಷಗಳ ಅನುಭವ ಹೊಂದಿರಬೇಕು.
ಅರ್ಹ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ ಭೇಟಿ ನೀಡುವ ಮೂಲಕ ಅಥವಾ ಪ್ರಕಟಣೆಯಲ್ಲಿ ನೀಡಿರುವ QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15/07/2026 (ಸಂಜೆ 5:00 ಗಂಟೆಯೊಳಗೆ)
- ಅಧಿಕೃತ ವೆಬ್‌ಸೈಟ್ ಲಿಂಕ್: https://eitbt.karnataka.gov.in/217/recruitment/en
- ಸೂಚನೆ: ಹೆಚ್ಚಿನ ವಿವರಗಳಿಗಾಗಿ ಮತ್ತು ಅಧಿಕೃತ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಲು ಅಭ್ಯರ್ಥಿಗಳು ಮೇಲೆ ನೀಡಿರುವ ವೆಬ್‌ಸೈಟ್‌ಗೆ ಭೇಟಿ ನೀಡಲು ಕೋರಲಾಗಿದೆ.
- ವಿಳಾಸ: ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ (ಕಿಟ್ಸ್), ಬಿಎಂಡಬ್ಲ್ಯೂ ಕಟ್ಟಡ, #59, 3ನೇ ಮಹಡಿ, ರೈಲ್ವೆ ಪ್ಯಾರಲಲ್ ರೋಡ್, ಕುಮಾರ ಪಾರ್ಕ್ ವೆಸ್ಟ್, ಶೇಷಾದ್ರಿಪುರಂ, ಬೆಂಗಳೂರು - 560020.
- ದೂರವಾಣಿ ಸಂಖ್ಯೆ: 080-2223-1006 / 8
- ಇಮೇಲ್: itbt.kitshr@gmail.com
Job Overview
- End Date
- 15 ಜುಲೈ 2026
- Pay Scale
- 45000 - 80000 INR
- Employment Type
- FULL_TIME
- Organization
- KITS (Website)
- Location
- BKG Sapphire, #59, Railway Parallel Road Kumara Park West, Sheshadripuram, ಬೆಂಗಳೂರು, KA, 560020
Related Tags:
Degree
Comments