ಇಂಧನ ಇಲಾಖೆ ಯಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗದ ಅಧ್ಯಕ್ಷರ ಹುದ್ದೆಗೆ ನೇಮಕಾತಿ ಮಾಡಲು ಅರ್ಜಿ ಆಹ್ವಾನ | ಕೂಡಲೆ ಅರ್ಜಿ ಸಲ್ಲಿಸಿ.

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗವು (KERC) ಒಂದು ಸ್ವತಂತ್ರ ನಿಯಂತ್ರಣ ಸಂಸ್ಥೆಯಾಗಿದ್ದು , ಇಲ್ಲಿ ಅಧ್ಯಕ್ಷರ ಹುದ್ದೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಇಲಾಖೆಯು ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಗಳನ್ನು ದಿನಾಂಕ : 07.03.2022 ರ ಸಂಜೆ 5:30 ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿಯನ್ನು ಸಲ್ಲಿಸಲು ಅರ್ಜಿದಾರರು ಅರ್ಜಿಗಳನ್ನು ಪ್ರಮಾಣ ಪತ್ರ ಮತ್ತು ಘೋಷಣಾ ಪತ್ರಗಳೊಂದಿಗೆ ನೊಂದಾಯಿತ ಅಂಚೆ / ಕೊರಿಯರ್ ಮೂಲಕ / ಖುದ್ದಾಗಿ ಅಥವಾ E-mail (prs.energy@gmail.com) ಮೂಲಕ (ಸ್ಕ್ಯಾನ್ ಮಾಡಿದ ದಾಖಲೆಗಳ ಪ್ರತಿಗಳೊಂದಿಗೆ) ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ, ಕೊಠಡಿ ಸಂಖ್ಯೆ : 236, 2 ನೇ ಮಹಡಿ, ವಿಕಾಸ ಸೌಧ, ಡಾ . ಬಿ.ಆರ್.ಅಂಬೇಡ್ಕರ್ ವೀದಿ , ಬೆಂಗಳೂರು 560 001 ಇವರಿಗೆ ದಿನಾಂಕ : 07.03.2022 ರ ಸಂಜೆ 5.30 ರೊಳಗಾಗಿ ಅಥವಾ ಮುಂಚಿತವಾಗಿ ಕಛೇರಿ ಕೆಲಸದ ಸಮಯದಲ್ಲಿ ಸಲ್ಲಿಸುವುದು.
ಆಯೋಗದ ಅಧ್ಯಕ್ಷರ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅರ್ಜಿದಾರರುಗಳು ಇಂಜಿನಿಯರಿಂಗ್ , ಆರ್ಥಿಕ , ಅರ್ಥಶಾಸ್ತ್ರ , ವಾಣಿಜ್ಯ ಶಾಸ್ತ್ರ ಕಾನೂನು ಅಥವಾ ಆಡಳಿತ ವಿಷಯಗಳಲ್ಲಿ ಪರಿಪೂರ್ಣ ಜ್ಞಾನ , ನಿಷ್ಠೆ ಮತ್ತು ಅನುಭವವುಳ್ಳವರಾಗಿರುವುದಲ್ಲದೆ ಈ ವಿಷಯಗಳನ್ನು ವ್ಯವಹರಿಸುವಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದವರಾಗಿರಬೇಕು .
* ಈ ನೇಮಕಾತಿಯ ಕುರಿತು ಇನ್ನೂ ಹೆಚ್ಚಿನ ಸವಿವರವಾದ ಮಾಹಿತಿಗಾಗಿ ಅಭ್ಯರ್ಥಿಗಳು ಕೆಳಗೆ ನೀಡಿರುವ ಲಿಂಕ್ ನ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿಯನ್ನು ಪಡೆಯಬಹುದಾಗಿದೆ.





Comments