ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (KEA) ವಿವಿಧ ಇಲಾಖೆಗಳಲ್ಲಿನ 708 ಹುದ್ದೆಗಳ ನೇಮಕಾತಿ | ಕೂಡಲೇ ಅರ್ಜಿ ಸಲ್ಲಿಸಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಬರುತ್ತಿರುವ ಈ 708 ಹುದ್ದೆಗಳು ಅನೇಕ ಯುವಕ-ಯುವತಿಯರಿಗೆ ಸರಕಾರಿ ಕೆಲಸ ಪಡೆಯುವ ಬಹುದೊಡ್ಡ ಅವಕಾಶ. ವಿವಿಧ ಇಲಾಖೆಗಳಲ್ಲಿ ವಿಭಿನ್ನ ಅರ್ಹತೆ ಮತ್ತು ಅನುಭವದ ಹುದ್ದೆಗಳು ಲಭ್ಯವಿರುವುದರಿಂದ ಪ್ರತಿಯೊಬ್ಬರಿಗೂ ತಮ್ಮ ಯೋಗ್ಯತೆಗೆ ಸರಿಹೊಂದುವ ಅವಕಾಶ ದೊರೆಯುತ್ತದೆ. ಸರಿಯಾದ ಸಿದ್ಧತೆ ಮತ್ತು ಸಮಯಕ್ಕೆ ಅರ್ಜಿ ಸಲ್ಲಿಸುವುದು ಬಹಳ ಮುಖ್ಯ.
ಈ ನೇಮಕಾತಿಯಡಿಯಲ್ಲಿ ಖಾಲಿ ಇರುವ ಒಟ್ಟು 708 ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (KSDL), ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ (RGUHS),ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC), ಕೃಷಿ ಮಾರಾಟ ಇಲಾಖೆ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ಸಹಾಯಕ ಅಭಿಯಂತರರು, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು, ಗ್ರಂಥಪಾಲಕ, ಮಾರಾಟ ಸಹಾಯಕ, ಕಿರಿಯ ಅಭಿಯಂತರರು, ಸಹಾಯಕ ಲೆಕ್ಕಿಗ, ನಿರ್ವಾಹಕ, ಸಹಾಯಕ ಇಂಜಿನಿಯರ್, ಕಿರಿಯ ಸಹಾಯಕ, ಗ್ರೂಪ್.ಸಿ, ಸಹಾಯಕ ಗ್ರಂಥಪಾಲಕ ಮತ್ತು ಕಿರಿಯ ಅಧಿಕಾರಿ ಸೇರಿದಂತೆ ವಿವಿಧ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 31/10/2025.
ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ. ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ಅವಶ್ಯಕ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ ಮತ್ತು ಪರೀಕ್ಷೆಯ ಸಿಲೆಬಸ್ ಅನ್ನು ಚೆನ್ನಾಗಿ ಅಧ್ಯಯನ ಮಾಡಿ. ಸರಕಾರಿ ಕೆಲಸದ ಸ್ಥಿರತೆ, ಉತ್ತಮ ವೇತನ ಮತ್ತು ಇತರ ಸೌಕರ್ಯಗಳನ್ನು ಪಡೆಯಲು ಈಗಲೇ ತಯಾರಿ ಪ್ರಾರಂಭಿಸಿ. ಅಧಿಕೃತ ವೆಬ್‌ಸೈಟ್‌ನಲ್ಲಿ ನಿಯಮಿತವಾಗಿ ಅಪ್‌ಡೇಟ್‌ಗಳನ್ನು ಪರಿಶೀಲಿಸುತ್ತಾ ಇರಿ ಮತ್ತು ನಿಮ್ಮ ಭವಿಷ್ಯತ್ತನ್ನು ಭದ್ರಪಡಿಸಿಕೊಳ್ಳಿ.
ಈ ಬ್ಲಾಗ್ ಪೋಸ್ಟ್‌ನಲ್ಲಿ, ನಾವು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿ 2025ರ ಪ್ರಮುಖ ವಿವರಗಳು, ಖಾಲಿ ಹುದ್ದೆಗಳ ವಿವರವಾದ ಮಾಹಿತಿ, ಅರ್ಹತಾ ಮಾನದಂಡಗಳು ಮತ್ತು ಅಧಿಕೃತ ಸಂಪರ್ಕ ಮಾಹಿತಿಯನ್ನು ವಿವರವಾಗಿ ಚರ್ಚಿಸಲಿದ್ದೇವೆ. ಆಸಕ್ತ ಅಭ್ಯರ್ಥಿಗಳು ಮುಂದೆ ಓದಿ ಈ ಅವಕಾಶವನ್ನು ಪಡೆಯಲು ಸಿದ್ಧರಾಗಿ!
📌ಕೆಇಎ ನೇಮಕಾತಿ 2025
🏛️ಸಂಸ್ಥೆಯ ಹೆಸರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರ ( ಕೆಇಎ )
🧾ಒಟ್ಟು ಹುದ್ದೆಗಳ ಸಂಖ್ಯೆ : 708
💸ಸಂಬಳ: ಕೆಇಎ ಮಾನದಂಡಗಳ ಪ್ರಕಾರ
📍ಉದ್ಯೋಗ ಸ್ಥಳ: ಕರ್ನಾಟಕ
🌐 ಅರ್ಜಿ ಸಲ್ಲಿಸುವ ವಿಧಾನ : ಆನ್‌ಲೈನ್
📝ಅಧಿಕೃತ ವೆಬ್‌ಸೈಟ್ : cetonline.karnataka.gov.in
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅಧಿಸೂಚಿಸಲಾದ 708 ಹುದ್ದೆಗಳ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು 31/10/2025 ರಿಂದ 14/11/2025 ರವರೆಗೆ ವಿಸ್ತರಿಸಲಾಗಿದೆ. ಅರ್ಜಿ ಶುಲ್ಕ ಪಾವತಿಸುವ ಕೊನೆಯ ದಿನಾಂಕವನ್ನು 15/11/2025 ಎಂದು ನಿಗದಿಪಡಿಸಲಾಗಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲು ಪ್ರಾಧಿಕಾರದಿಂದ ದಿನಾಂಕ 15.11.2025 ರಂದು ಅಧಿಸೂಚನೆ ಹೊರಡಿಸಲಾಗಿದೆ.
ಕರ್ನಾಟಕದ ವಿವಿಧ ಸರ್ಕಾರಿ ಇಲಾಖೆ/ಸಂಸ್ಥೆ/ನಿಗಮದಲ್ಲಿ ಖಾಲಿ ಇರುವ708 ವಿವಿಧ ವೃಂದದ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅರ್ಜಿಗಳನ್ನು ಆಹ್ವಾನಿಸಿ, ದಿನಾಂಕ 08.10.2025 ಮತ್ತು 31.10.2025 ರಂದು ಉಳಿಕೆ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳಿಗೆ ಅಧಿಸೂಚನೆಗಳನ್ನು ಹೊರಡಿಸಲಾಗಿತ್ತು ಮತ್ತು ದಿನಾಂಕ 31.10.2025 ರಂದು ಪ್ರತ್ಯೇಕ ಪ್ರಕಟಣೆ ಹೊರಡಿಸಿ ಅರ್ಜಿ ಸಲ್ಲಿಸಲು ದಿನಾಂಕವನ್ನು 14.11.2025ರ ವರೆಗೆ ಹಾಗೂ ದಿನಾಂಕ 15.11.2025 ರವರೆಗೆ ಶುಲ್ಕ ಪಾವತಿಸುಲು ಅವಕಾಶ ನೀಡಲಾಗಿತ್ತು.
ಇದೀಗ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಖಾಲಿ ಇರುವ 224 ವಿವಿಧ ವೃಂದದ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿರುವುದರಿಂದ, ಈಗಾಗಲೇ ಅಧಿಸೂಚನೆ ಹೊರಡಿಸಿದ ಇಲಾಖೆ/ಸಂಸ್ಥೆಗಳ ಉಳಿಕೆ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ ವೃಂದದ 708 ವಿವಿಧ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಈ ಕೆಳಗಿನಂತೆ ನಿಗದಿಗೊಳಿಸಲಾಗಿದೆ.
1) ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : 25.11.2025
2) ಆನ್‌ಲೈನ್ ಮೂಲಕ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 26.11.2025
- ವಿಸ್ತೃತ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ :
📌 ಹುದ್ದೆಗಳ ವಿವರ : 708
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) : 25
ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (KSDL) : 21
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ (RGUHS) : 44
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) : 316
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) : 19
ಕೃಷಿ ಮಾರಾಟ ಇಲಾಖೆ : 180
ತಾಂತ್ರಿಕ ಶಿಕ್ಷಣ ಇಲಾಖೆ : 93
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) : 10
🎓ಅರ್ಹತಾ ಮಾನದಂಡ : ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10ನೇ, 12ನೇ, ಪದವಿ , ಬಿ.ಕಾಂ, ಬಿಇ ಅಥವಾ ಬಿ.ಟೆಕ್ ವಿದ್ಯಾರ್ಹತೆಯನ್ನು ಕನಿಷ್ಠ 55% ಅಂಕಗಳೊಂದಿಗೆ ಪೂರ್ಣಗೊಳಿಸಿರಬೇಕು.
⏳ ವಯಸ್ಸಿನ ಮಿತಿ: ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಠ 18 ವರ್ಷಗಳು ತುಂಬಿರತಕ್ಕದ್ದು ಹಾಗೂ ಈ ಕೆಳಕಂಡ ಗರಿಷ್ಟ ವಯೋಮಿತಿಯನ್ನು ಮೀರಿರಬಾರದು;
# ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 262 ಸೇನೆನಿ 2025 ದಿನಾಂಕ 29.09.2025 ರಲ್ಲಿ ನಿರ್ದೇಶಿಸಿರುವಂತೆ ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆಯನ್ನು ನೀಡಲಾಗಿದೆ
ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ : 38 ವರ್ಷಗಳು
OBC ಅಭ್ಯರ್ಥಿಗಳಿಗೆ : 41 ವರ್ಷಗಳು
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಪ್ರವರ್ಗ-1 ಅಭ್ಯರ್ಥಿಗಳಿಗೆ ಅಭ್ಯರ್ಥಿಗಳಿಗೆ : 43 ವರ್ಷಗಳು
💰 ಅರ್ಜಿ ಶುಲ್ಕ:
2A, 2B, 3A, 3B ಅಭ್ಯರ್ಥಿಗಳಿಗೆ : ರೂ.750/-
SC/ST, ಮಾಜಿ ಸೇನಾ ಅಭ್ಯರ್ಥಿಗಳಿಗೆ : 500/-
ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ : 250/-
ಪಾವತಿ ವಿಧಾನ: ಆನ್‌ಲೈನ್
ಪಾವತಿಸಿದ ಶುಲ್ಕವನ್ನು ಹಿದಿರುಗಿಸಲಾಗುವುದಿಲ್ಲ.
💼 ಆಯ್ಕೆ ಪ್ರಕ್ರಿಯೆ :
- ಲಿಖಿತ ಪರೀಕ್ಷೆ (OMR)
- ದಾಖಲೆಗಳ ಪರಿಶೀಲನೆ
- ಸಂದರ್ಶನ
💰 ವೇತನ:ಹುದ್ದೆಗಳಿಗೆ ಅನುಗುಣವಾಗಿ ನೇಮಕಾತಿ ನಿಯಮಾನುಸಾರ ಮಾಸಿಕ ವೇತನವನ್ನು 27,650/- ರಿಂದ 1,34,200/-ವರೆಗೆ ನಿಗದಿಪಡಿಸಲಾಗಿದೆ.
🧭 ಸ್ಪರ್ಧಾತ್ಮಕ ಪರೀಕ್ಷೆ :
a) OMR ಆಧಾರಿತ ಪರೀಕ್ಷೆಯಾಗಿದ್ದು ಒಂದು ಪ್ರಶ್ನೆಗೆ OMR ನಲ್ಲಿ 05 ವೃತ್ತಗಳಿದ್ದು, ಮೊದಲ 04 ವೃತ್ತಗಳು ಒಂದು ಸರಿಯಾದ ಉತ್ತರವನ್ನು ಶೇಡ್ ಮಾಡಲು ಸಂಬಂಧಿಸಿವೆ. ಅಭ್ಯರ್ಥಿಗೆ ಯಾವುದಾದರೂ ಪ್ರಶ್ನೆಗೆ / ಪ್ರಶ್ನೆಗಳಿಗೆ ಉತ್ತರ ತಿಳಿದಿಲ್ಲದಿದ್ದರೆ ಕಡ್ಡಾಯವಾಗಿ 05 ನೇ ವೃತ್ತವನ್ನು ಶೇಡ್ ಮಾಡಬೇಕು. ಇಲ್ಲದಿದ್ದಲ್ಲಿ 4 ಅಂಕ ಕಡಿತ ಮಾಡಲಾಗುವುದು.
b) ಋಣಾತ್ಮಕ ಮೌಲ್ಯಮಾಪನವಿದ್ದು, ಪ್ರತಿ ತಪ್ಪು ಉತ್ತರಕ್ಕೆ ನಾಲ್ಕನೇ ಒಂದಂಶದಷ್ಟು (4) ಅಂಕಗಳನ್ನು ಕಡಿತ ಮಾಡಲಾಗುವುದು.
c) ಪರೀಕ್ಷಾ ವೇಳಾಪಟ್ಟಿಯನ್ನು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗುವುದು.
d) ಒಂದೇ ಪಠ್ಯಕ್ರಮವಿರುವ ವಿವಿಧ ಇಲಾಖೆಗಳ ಹುದ್ದೆಗಳಿಗೆ ಒಂದೇ ಪರೀಕ್ಷೆ ನಡೆಸಿ ಸಂಬಂಧಪಟ್ಟ ಇಲಾಖೆಗಳಿಗೆ ಮೆರಿಟ್ ಪಟ್ಟಿ ನೀಡಲಾಗುವುದು.
📝 ಅರ್ಜಿ ಸಲ್ಲಿಸುವ ವಿಧಾನ :
- ಮೊದಲು KEA ನೇಮಕಾತಿ ಅಧಿಸೂಚನೆ ಲಿಂಕ್ ಅಥವಾ ಅಧಿಕೃತ ವೆಬ್‌ಸೈಟ್ cetonline.karnataka.gov.in ಗೆ ಭೇಟಿ ನೀಡಿ.
- ನೀವು ಈ ಹಿಂದೆ ನೋಂದಾಯಿಸಿಕೊಂಡಿದ್ದರೆ, ಬಳಕೆದಾರಹೆಸರು ಮತ್ತು ಪಾಸ್‌ವರ್ಡ್‌ನೊಂದಿಗೆ ಲಾಗಿನ್ ಮಾಡಿ. ನಿಮಗೆ ಬಳಕೆದಾರ ಐಡಿ (ಹೊಸ ಬಳಕೆದಾರ) ಇಲ್ಲದಿದ್ದರೆ ಈಗಲೇ ನೋಂದಾಯಿಸಿ.
- ಅಗತ್ಯವಿರುವ ಎಲ್ಲಾ ವಿವರಗಳನ್ನು ಅಗತ್ಯವಿರುವ ವಿವರಗಳಲ್ಲಿ ನವೀಕರಿಸಿ. ನಿಮ್ಮ ಇತ್ತೀಚಿನ ಛಾಯಾಚಿತ್ರ ಮತ್ತು ಸಹಿಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ.
- ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ (ಅನ್ವಯಿಸಿದರೆ).
- ಕೊನೆಯದಾಗಿ, ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವ ಮೊದಲು ಎಲ್ಲಾ ವಿವರಗಳನ್ನು ಪರಿಶೀಲಿಸಿ. ಹೆಚ್ಚಿನ ಉಲ್ಲೇಖಕ್ಕಾಗಿ ಉಲ್ಲೇಖ ಐಡಿಯನ್ನು ಉಳಿಸಿ / ಸೆರೆಹಿಡಿಯಿರಿ.
📅 ಪ್ರಮುಖ ದಿನಾಂಕಗಳು :
✅ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳಿಗೆ :
=> ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ : 09-10-2025
=> ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :25-11-2025
=> ಶುಲ್ಕವನ್ನು ಪಾವತಿ ಮಾಡಲು ಕೊನೆಯ ದಿನಾಂಕ : 26-11-2025 ಸಂಜೆ 4.00 ಗಂಟೆವರೆಗೆ
✅ಉಳಿಕೆ ಮೂಲಕ ವೃಂದದ ಹುದ್ದೆಗಳಿಗೆ :
=> ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ : 08-10-2025
=> ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25-11-2025
=> ಶುಲ್ಕವನ್ನು ಪಾವತಿ ಮಾಡಲು ಕೊನೆಯ ದಿನಾಂಕ : 26-11-2025 ಸಂಜೆ 4.00 ಗಂಟೆವರೆಗೆ
KPSCVaani ಪರೀಕ್ಷಾ ಸಲಹೆಗಳು
* ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪ್ರಕಟವಾಗಲಿರುವ 700+ ಸರ್ಕಾರಿ ಹುದ್ದೆಗಳು ಅಭ್ಯರ್ಥಿಗಳಿಗೆ ದೊಡ್ಡ ಅವಕಾಶ. ಯಶಸ್ಸು ಸಾಧಿಸಲು ಸರಿಯಾದ ತಯಾರಿ ಮುಖ್ಯ.
* ಅಧಿಸೂಚನೆ ಹಾಗೂ ಸಿಲೆಬಸ್‌ವನ್ನು ತಿಳಿದುಕೊಂಡು, ಸಮಯ ನಿರ್ವಹಣೆ ಮಾಡುವುದು ಅವಶ್ಯಕ. ಪ್ರಚಲಿತ ಘಟನೆಗಳನ್ನು ಪ್ರತಿದಿನ ಓದಿ, ಹಿಂದಿನ ಪ್ರಶ್ನೆ ಪತ್ರಿಕೆಗಳು ಮತ್ತು ಮಾದರಿ ಪರೀಕ್ಷೆಗಳ ಮೂಲಕ ಅಭ್ಯಾಸ ಮಾಡಿ. ಸಾಮಾನ್ಯ ಜ್ಞಾನ, ಕನ್ನಡ/ಇಂಗ್ಲಿಷ್, ಗಣಿತ-ತಾರ್ಕಿಕ ಹಾಗೂ ಹುದ್ದೆಗನುಗುಣವಾದ ವಿಷಯಾಧಾರಿತ ಅಧ್ಯಯನಕ್ಕೆ ಒತ್ತು ಕೊಡಿ.
* ಪ್ರತೀ ವಾರ ಮರುಅಧ್ಯಯನ ಮಾಡಿ, ಟಿಪ್ಪಣಿಗಳನ್ನು ಸಣ್ಣ ರೂಪದಲ್ಲಿ ತಯಾರಿಸಿ. ಆರೋಗ್ಯ ಕಾಪಾಡಿಕೊಂಡು, ಏಕಾಗ್ರತೆಯೊಂದಿಗೆ ಅಧ್ಯಯನ ಮಾಡಿದರೆ ಯಶಸ್ಸು ಖಚಿತ.
* ಸ್ಪರ್ಧಾತ್ಮಕ ಪರೀಕ್ಷೆಗಳನ್ನು: ಬೆಂಗಳೂರು, ಮೈಸೂರು, ದಾವಣಗೆರೆ, ದಕ್ಷಿಣ ಕನ್ನಡ, ಶಿವಮೊಗ್ಗ, ಬೆಳಗಾವಿ, ಧಾರವಾಡ, ಬಳ್ಳಾರಿ, ಕೊಪ್ಪಳ, ವಿಜಯಪುರ, ತುಮಕೂರು ಮತ್ತು ಕಲಬುರ್ಗಿ ಕೇಂದ್ರಗಳಲ್ಲಿ ನಡೆಸಲಾಗುವುದು.
To Download Official Notification
To Download Extended Notification
ಕೆಇಎ ಹುದ್ದೆಗಳು 2024,
ಕರ್ನಾಟಕ ಸರ್ಕಾರಿ ಉದ್ಯೋಗ,
708 ಹುದ್ದೆಗಳ ನೇಮಕಾತಿ,
KEA ಅರ್ಜಿ ಪ್ರಕ್ರಿಯೆ,
ಕರ್ನಾಟಕ ಸರ್ಕಾರಿ ಪರೀಕ್ಷೆ,
ವಿವಿಧ ಇಲಾಖೆಗಳ ಹುದ್ದೆಗಳು,
ಕರ್ನಾಟಕ ಉದ್ಯೋಗ ಅವಕಾಶಗಳು,
ಅರ್ಹತೆ ಮಾಪದಂಡಗಳು,
ಪರೀಕ್ಷಾ ಪ್ರಾಧಿಕಾರ ಸಿಲೆಬಸ್





Comments