Loading..!

ಬೆಂಗಳೂರಿನಲ್ಲಿರುವ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಗಣಕಯಂತ್ರ ಸಹಾಯಕರು ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Tags: Degree SSLC
Published by: Yallamma G | Date:29 ಆಗಸ್ಟ್ 2024
not found

ವೈದ್ಯಕೀಯ ಅಧೀಕ್ಷಕರ ಕಛೇರಿ ಕೆ.ಸಿ.ಜನರಲ್ ಆಸ್ಪತ್ರೆ ಮಲ್ಲೇಶ್ವರಂ ಬೆಂಗಳೂರುಇಲ್ಲಿ ಖಾಲಿ ಇರುವ 13 ಪ್ರಯೋಗ ಶಾಲಾ ತಜ್ಞರು, ಕ್ಪ-ಕಿರಣ ತಜ್ಞರು, ನೇತ್ರಸಹಾಯಕರು, ಅನುಭವಿ ಲೆಕ್ಕ ಪಾತ್ರ ಸಹಾಯಕರು, ಕಾನೂನು ಸಲಹೆಗಾರರು ಮತ್ತು ಗಣಕ ಯಂತ್ರ ಸಹಾಯಕರು ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 05 ಸೆಪ್ಟೆಂಬರ್ 2024 ರೊಳಗಾಗಿ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. 

ಈ ನೇಮಕಾತಿಯ ಕುರಿತ ಸವಿವರವಾದ ಮಾಹಿತಿ, ಅಧಿಕೃತ ಅಧಿಸೂಚನೆ ಹಾಗೂ ಅರ್ಜಿ ಸಲ್ಲಿಸುವ ಲಿಂಕ್ ಅನ್ನು ಈ ಕೆಳೆಗೆ ನೀಡಲಾಗಿದೆ.

No. of posts:  13
Application Start Date:  29 ಆಗಸ್ಟ್ 2024
Application End Date:  5 ಸೆಪ್ಟೆಂಬರ್ 2024
Selection Procedure:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.


- ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ 05 ಸೆಪ್ಟೆಂಬರ್ 2024 ರಂದು ನಡೆಯುವ ನೇರ ಸಂದರ್ಶನದಲ್ಲಿ ಅಗತ್ಯ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ. ಸಂದರ್ಶನ ನಡೆಯುವ ಸ್ಥಳ ಮತ್ತು ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಗಮನಿಸಿ.  
ಸಂದರ್ಶನ ನಡೆಯುವ ಸ್ಥಳ :
ಡಿ.ಎನ್.ಬಿ.ಸೆಮಿನಾರ್ ಹಾಲ್, ಡಿ.ಎನ್.ಬಿ. ಬ್ಲಾಕ್,
ಕೆ.ಸಿ ಸಾರ್ವಜನಿಕ ಆಸ್ಪತ್ರೆ, ಮಲ್ಲೇಶ್ವರಂ, ಬೆಂಗಳೂರು.       


ಹುದ್ದೆಗಳ ವಿವರ : 13
ಪ್ರಯೋಗ ಶಾಲಾ ತಜ್ಞರು :2
ಕ್ಪ-ಕಿರಣ ತಜ್ಞರು : 1 
ನೇತ್ರಸಹಾಯಕರು : 2 
ಫಾರ್ಮಸಿಸ್ಟ್ : 1 
ಅನುಭವಿ ಲೆಕ್ಕ ಪಾತ್ರ ಸಹಾಯಕರು : 2 
ಕಾನೂನು ಸಲಹೆಗಾರರು : 1 
ಪ್ರೋಗ್ರಾಮರ್ : 1
ಗಣಕ ಯಂತ್ರ : 3

Qualification: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು SSLC/ PUC/ Diploma/ ಬಿ ಫಾರ್ಮ್/ ಕಾನೂನು ಪದವಿ/ BE/ b.Tech/ MCA/ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವ ವಿದ್ಯಾಲಯದಿಂದ ಪಡೆದಿರಬೇಕು.ಜೊತೆಗೆ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು. ವೃತ್ತಿ ಅನುಭವವನ್ನು ಹೊಂದಿದವರಿಗೆ ಮೊದಲ ಆಧ್ಯತೆಯನ್ನು ನೀಡಲಾಗುವುದು. 
Age Limit: ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಗರಿಷ್ಠ 40  ವರ್ಷಗಳ ವಯೋಮಿತಿಯನ್ನು ಮೀರಿರಬಾರದು 
Employment Type: FULL_TIME
Hiring Organization: KPSC Vaani https://www.kpscvaani.com
Work Location: ಬೆಂಗಳೂರು, KA,
To Download Official Notification
Related Tags: Degree SSLC

Comments