Loading..!

ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Tags: Degree PG
Published by: Hanamant Katteppanavar | Date:19 ಜನವರಿ 2021
not found
ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಲ್ಲಿ ಖಾಲಿ ಇರುವ 38 ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಇಲಾಖೆಯು ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. 

ಆಸಕ್ತ ಮತ್ತು ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಅರ್ಜಿ ಪ್ರಕ್ರಿಯೆಯು ಜನವರಿ 31 2021 ರಂದು ಕೊನೆಗೊಳ್ಳುತ್ತದೆ.

* ಹುದ್ದೆಗಳ ವಿವರಗಳು :
- ಜಿಲ್ಲಾ ಪ್ರವಾಸೋದ್ಯಮ ಸಲಹೆಗಾರ (ಡಿಟಿಸಿ) - 35 ಹುದ್ದೆಗಳು
- ಪಿಪಿಪಿ ಸ್ಪೆಷಲಿಸ್ಟ್- 01 ಹುದ್ದೆ
- ಪರಂಪರೆ ಸಲಹೆಗಾರ- 01 ಹುದ್ದೆ
- ಮಾನವ ಸಂಪನ್ಮೂಲ(HR) ಅಧಿಕಾರಿ- 01 ಹುದ್ದೆ
- ಒಟ್ಟು 38 ಹುದ್ದೆಗಳು

No. of posts:  38
Application End Date:  31 ಜನವರಿ 2021
Work Location:  ಕರ್ನಾಟಕ
Selection Procedure: - ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಅಭ್ಯರ್ಥಿಗಳನ್ನು ನೇರವಾಗಿ ಆಯ್ಕೆಪಟ್ಟಿ ತಯಾರಿಸಿ, ಮೂಲ ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
Qualification:
* ಜಿಲ್ಲಾ ಪ್ರವಾಸೋದ್ಯಮ ಸಲಹೆಗಾರ (ಡಿಟಿಸಿ) ಹುದ್ದೆಗಳಿಗೆ : - MBA ಅಥವಾ ಪ್ರಯಾಣ, ಪ್ರವಾಸೋದ್ಯಮ, ಆತಿಥ್ಯದಲ್ಲಿ ಕನಿಷ್ಠ 55% ಒಟ್ಟು ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಮತ್ತು ಕನಿಷ್ಠ 3 ವರ್ಷಗಳು ’ ಪ್ರವಾಸೋದ್ಯಮದಲ್ಲಿ ಕೆಲಸದ ಅನುಭವ ಹೊಂದಿರಬೇಕು.

* ಪಿಪಿಪಿ ತಜ್ಞರ ಸ್ಥಾನ: 01 ಹುದ್ದೆ :AICTE, UGC ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ 60% ಒಟ್ಟು ಅಂಕಗಳೊಂದಿಗೆ ಹಣಕಾಸು ಪರಿಣತಿಯೊಂದಿಗೆ MBA, PGDM ವಿದ್ಯಾರ್ಹತೆಯನ್ನು ಹೊಂದಿರಬೇಕು. ಮತ್ತು ಪಿಪಿಪಿ ಯೋಜನೆಗಳಲ್ಲಿ 5 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು.

* ಪಾರಂಪರಿಕ ಸಲಹೆಗಾರರ ಸ್ಥಾನ: 01 :BE / Btech ಪದವಿಯನ್ನು ಸಿವಿಲ್ ಎಂಜಿನಿಯರಿಂಗ್, B Arch ವಿಭಾಗದಲ್ಲಿ ಕನಿಷ್ಠ 60% ಒಟ್ಟು ಅಂಕಗಳೊಂದಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಹೊಂದಿರಬೇಕು. ಮತ್ತು ಪಾರಂಪರಿಕ ಯೋಜನೆಗಳಲ್ಲಿ 5 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು.
Age Limit:

* ಜಿಲ್ಲಾ ಪ್ರವಾಸೋದ್ಯಮ ಸಲಹೆಗಾರ (ಡಿಟಿಸಿ) ಹುದ್ದೆಗೆ : ಅಭ್ಯರ್ಥಿಗಳು ಕನಿಷ್ಠ- 25 ವರ್ಷಗಳನ್ನು ಹಾಗು ಗರಿಷ್ಠ - 38 ವರ್ಷಗಳನ್ನು ಮೀರಿರಬಾರದು. 
* ಪಿಪಿಪಿ ತಜ್ಞರ ಹುದ್ದೆಗೆ : ಅಭ್ಯರ್ಥಿಗಳು ಕನಿಷ್ಠ - 25 ವರ್ಷಗಳನ್ನು ಮತ್ತು ಗರಿಷ್ಠ- 50 ವರ್ಷಗಳನ್ನು ಮೀರಿರಬಾರದು. 
* ಪಾರಂಪರಿಕ ಸಲಹೆಗಾರರ ಹುದ್ದೆಗೆ : ಅಭ್ಯರ್ಥಿಗಳು ಕನಿಷ್ಠ- 25 ವರ್ಷಗಳನ್ನು ಮತ್ತು ಗರಿಷ್ಠ - 50 ವರ್ಷಗಳನ್ನೂ ಮೀರಿರಬಾರದು.

Pay Scale:

* ಜಿಲ್ಲಾ ಪ್ರವಾಸೋದ್ಯಮ ಸಲಹೆಗಾರ (ಡಿಟಿಸಿ) ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು -30,000/- ರೂ ಗಳ ವರೆಗೆ
* ಪಿಪಿಪಿ ತಜ್ಞರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ- 50,000/- ರೂ ಗಳ ವರೆಗೆ ಮತ್ತು
* ಪಾರಂಪರಿಕ ಸಲಹೆಗಾರರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ- 50,000/- ರೂ ಗಳ ವರೆಗೆ ವೇತನವನ್ನು ನೀಡಲಾಗುವುದು.

- ಆಸಕ್ತ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ನೀಡಿರುವ ಅರ್ಜಿ ನಮೂನೆಯಲ್ಲಿ ಎಲ್ಲ ವಿವರಗಳನ್ನು ಭರ್ತಿ ಮಾಡಿ ಮೂಲ ದಾಖಲೆಗಳೊಂದಿಗೆ ktilrecruitment@gmail.com ಗೆ ಮೇಲ್ ಮಾಡುವುದರ ಮುಖಾಂತರ ದಿನಾಂಕ ಜನವರಿ 31, 2021 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. 


* ಈ ನೇಮಕಾತಿಯ ಕುರಿತ ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಗಮನಿಸಬಹುದಾಗಿದೆ

To Download the official notification

Comments

Pushpa A S ಜನ. 21, 2021, 8:53 ಅಪರಾಹ್ನ