ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ವಾದ್ಯಗಾರರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ
ಕೆ.ಎ.ಆರ್.ಪಿ ಮೌಂಟೆಡ್ ಕಂಪನಿ, ಮೈಸೂರು ಇಲ್ಲಿ ಆಂಗ್ಲ ಮತ್ತು ಕರ್ನಾಟಕ ವಾದ್ಯಗಾರ ಹಾಗೂ ಕರ್ನಾಟಕ ವಾದ್ಯಗಾರರ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 29/04/2023 ರೊಳಗೆ ಅಂಚೆ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿಯನ್ನು ಸಲ್ಲಿಸುವ ವಿಳಾಸ:
ಕಮಾಂಡೆಂಟ್, ಕೆ.ಎ.ಆರ್.ಪಿ ಮೌಂಟೆಡ್ ಕಂಪನಿ,
ಲಲಿತ ಮಹಲ್ ರಸ್ತೆ, ಮೈಸೂರು 570011
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಲಂಡನ್ ನ ಟ್ರಿನಿಟಿ ಸಂಗೀತ ಕಾಲೇಜು ನ ಲೆಂಟಿಯೇಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.
ಹಾಗೂ ಎಲ್ಲಾ ರೀತಿಯ ದೊಡ್ಡ ಪ್ರಮಾಣದ ಸಣ್ಣ ಪ್ರಮಾಣದ ಮತ್ತು ಕ್ರೊಮ್ಯಾಟಿಕ್ ಸ್ಕೇಲ್ ನ ವಾದ್ಯಗಳ ಬಗ್ಗೆ ತಿಳುವಳಿಕೆ ಇರಬೇಕು ಹಾಗೂ ವಾದ್ಯೋಪಕರಣಗಳನ್ನು ಆ ಕ್ಷಣವೇ ಸರಾಗವಾಗಿ ನುಡಿಸುವ ಸಾಮರ್ಥ್ಯವಿರಬೇಕು
ಸಾಮಾನ್ಯ ವರ್ಗ, ಪ್ರವರ್ಗ 2(ಎ), 2(ಬಿ), 3(ಎ), 3(ಬಿ) ಗೆ ಸೇರಿದ ಅಭ್ಯರ್ಥಿಗಳಿಗೆ ₹250/-
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳಿಗೆ ₹100/-
ಅರ್ಜಿಯನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಂದರೆ 29/04/2023ಕ್ಕೆ ಪುರುಷ ಅಭ್ಯರ್ಥಿಗಳಿಗೆ ಕನಿಷ್ಟ 18 ವರ್ಷ ವಯಸ್ಸಾಗಿರಬೇಕು. 40 ವರ್ಷಗಳನ್ನೂ ಮೀರಿರಬಾರದು.
- ಈ ಕುರಿತು ಸವಿವರವಾದ ಮಾಹಿತಿಗಾಗಿ ಅಧಿಸೂಚನೆಯನ್ನು ಗಮನಿಸಿ.
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 23,500/- ರಿಂದ 47,650/-ರೂಗಳ ವರೆಗೆ ವೇತನವನ್ನು ನಿಗದಿಪಡಿಸಲಾಗಿದೆ.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.





Comments