ಕರ್ನಾಟಕದ ಕೇಂದ್ರೀಯ ವಿದ್ಯಾಲಯದಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

ಕರ್ನಾಟಕ ಕೇಂದ್ರೀಯ ವಿದ್ಯಾಲದಲ್ಲಿ ಖಾಲಿ ಇರುವ ಪೋಸ್ಟ್ ಗ್ರಾಜುವೇಟ್ ಟೀಚರ್, ಟ್ರೇನ್ಡ್ ಗ್ರಾಜುವೇಟ್ ಟೀಚರ್, ಪ್ರೈಮರಿ ಟೀಚರ್ ಹುದ್ದೆಗಳನ್ನು ಒಳಗೊಂಡಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 11/02/2023 ರಂದು ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸುವದಾಗಿದೆ.
ಹುದ್ದೆಗಳ ವಿವರ ಕೆಳಗಿನಂತಿದೆ
ಪೋಸ್ಟ್ ಗ್ರಾಜುವೇಟ್ ಟೀಚರ್ (ಹಿಂದಿ, ಇಂಗ್ಲಿಷ್, ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಅರ್ಥಶಾಸ್ತ್ರ, ವಾಣಿಜ್ಯ ಹಾಗೂ ಕಂಪ್ಯೂಟರ್ ಸೈನ್ಸ್)
ಟ್ರೇನ್ಡ್ ಗ್ರಾಜುವೇಟ್ ಟೀಚರ್ (ಕನ್ನಡ, ಹಿಂದಿ, ಇಂಗ್ಲಿಷ್, ಗಣಿತ, ಸಂಸ್ಕೃತ, ಸಮಾಜ ವಿಜ್ಞಾನ ಮತ್ತು ವಿಜ್ಞಾನ)
ಪ್ರೈಮರಿ ಟೀಚರ್
ಕಂಪ್ಯೂಟರ್ ಬೋಧಕರು
ಕ್ರೀಡಾ ತರಬೇತಿದಾರರು
ಯೋಗ ಶಿಕ್ಷಕ
ಎಜುಕೇಷನ್ ಕೌನ್ಸ್ ಲರ್
ಡಾಕ್ಟರ್ ಹಾಗೂ ನರ್ಸ್
ಸಂದರ್ಶನ ನಡೆಯುವ ಸ್ಥಳ :
Kendriya Vidyalaya Malleshwaram,
18th Cross, Malleswaram, Bengaluru-560055
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು M.Com/ B.Ed/ BE/ B. Tech(Com Sci.)/BCA/ MCA/ M.Sc/ MBBS/ B.Sc Nursing/ M.Sc Nursing ವಿದ್ಯಾರ್ಹತೆಯನ್ನು ಕನಿಷ್ಠ 50% ಅಂಕಗಳೊಂದಿಗೆ ಪಾಸಾಗಿರಬೇಕು, ಜೊತೆಗೆ ಕಂಪ್ಯೂಟರ ಜ್ಞಾನವನ್ನು ಹೊಂದಿರಬೇಕು.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಕೇಂದ್ರೀಯ ವಿದ್ಯಾಲಯದ ನಿಯಮಾನುಸಾರವಾಗಿ ವಯೋಮಿತಿಯನ್ನು ಹೊಂದಿರಬೇಕಾಗುತ್ತದೆ.
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ 21,250/- ರೂ ಗಳಿಂದ 27,500/- ರೂ ಗಳ ವರೆಗೆ ವೇತನ ನಿಗದಿಪಡಿಸಲಾಗಿದೆ.
ಡಾಕ್ಟರ್ ಹಾಗೂ ನರ್ಸ್ ಅಭ್ಯರ್ಥಿಗಳಿಗೆ ಅನುಕ್ರಮವಾಗಿ ದಿನಕ್ಕೆ 1,000/- ಹಾಗೂ 750/- ರೂ ನಿಗದಿಪಡಿಸಲಾಗಿದೆ.
* ಈ ನೇಮಕಾತಿಯ ಕುರಿತು ಹೆಚ್ಚಿನ ವಿವರಗಳಿಗೆ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದಾಗಿದೆ.





Comments