Loading..!

ಅಭಿಯೋಗ ಮತ್ತು ಸರಕಾರಿ ವ್ಯಾಜ್ಯಗಳ ಇಲಾಖೆಯಲ್ಲಿ ಖಾಲಿ ಇರುವ ಅಭಿಯೋಜಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ
| Date:12 ಅಕ್ಟೋಬರ್ 2019
not found
ಕರ್ನಾಟಕ ಸರ್ಕಾರದ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ - ಬಿ ವೃಂದದ ಸಹಾಯಕ ಸರಕಾರಿ ಅಭಿಯೋಜಕರು ಕಂ ಸಹಾಯಕ ಸರಕಾರಿ ವಕೀಲರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆನ್ಲೈನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಅರ್ಜಿ ಸಲ್ಲಿಸಲು ನವೆಂಬರ್ 8 ಕೊನೆಯ ದಿನವಾಗಿರುತ್ತದೆ.

ಹುದ್ದೆಗಳ ವಿವರ : ಒಟ್ಟು 100 ಹುದ್ದೆಗಳಿದ್ದು, ಇದರಲ್ಲಿ 21 ಹುದ್ದೆಗಳನ್ನು ಕಲ್ಯಾಣ ಕರ್ನಾಟಕದ (ಹೈಕ) ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ.
* ಸಾಮಾನ್ಯ ಅಭ್ಯರ್ಥಿಗಳು - 11
* ಎಸ್ ಸಿ - 03
* ಎಸ್ ಟಿ - 01
* ಪ್ರವರ್ಗ - 1 ಕ್ಕೆ - 02
* ಪ್ರವರ್ಗ 2ಎ - 03
*ಪ್ರವರ್ಗ 3ಬಿ - 01


-- ಹೈಕ ಹೊರತುಪಡಿಸಿದ 79 ಹುದ್ದೆಗಳಲ್ಲಿ --
* ಸಾಮಾನ್ಯ ಅಭ್ಯರ್ಥಿಗಳು - 39
* ಎಸ್ ಸಿ - 12
* ಎಸ್ ಟಿ - 02
* ಪ್ರವರ್ಗ - 1 ಕ್ಕೆ - 03
* ಒಬಿಸಿ - 23
No. of posts:  100
Application Start Date:  12 ಅಕ್ಟೋಬರ್ 2019
Application End Date:  8 ನವೆಂಬರ್ 2019
Selection Procedure: ಲಿಖಿತ ಪರೀಕ್ಷೆ ಮತ್ತು ಮೌಖಿಕ ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಲಿಖಿತ ಪರೀಕ್ಷೆ ಎರಡು ಹಂತದಲ್ಲಿ ನಡೆಯಲಿದ್ದು, ಪೂರ್ವಭಾವಿ ಪರೀಕ್ಷೆಯಲ್ಲಿ 1:10 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ.
ಪ್ರಿಲಿಮ್ಸ್ ಪರೀಕ್ಷೆಯನ್ನು ಬೆಂಗಳೂರು ರಾಜ್ಯದ ಇನ್ಯಾವುದೇ ಜಿಲ್ಲೆಗಳಲ್ಲಿ ನಡೆಸಲಾಗುತ್ತದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ ಸೈಟ್ ನಲ್ಲಿ (http:/kea.kar.nic.in) ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಲಾಗುತ್ತದೆ
Qualification: * ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಅನ್ವಯವಾಗುವಂತೆ ವಕೀಲರ ಕಾಯಿದೆ 1961 ರ ಅನ್ವಯ ಭಾರತ ದೇಶದ ಸಿವಿಲ್ ಮತ್ತು ಕ್ರಿಮಿನಲ್ ನ್ಯಾಯಾಲಯಗಳಲ್ಲಿ ಕನಿಷ್ಠ 3 ವರ್ಷ ವಕೀಲಿ ವೃತ್ತಿ ಮಾಡಿರಬೇಕು.
* ಅಭ್ಯರ್ಥಿಗಳು ವಕೀಲಿ ವೃತ್ತಿಯ ಸೇವಾ ಅವಧಿಯನ್ನು ದೃಡೀಕರಿಸಲು ತಮ್ಮ ನ್ಯಾಯವಾದಿಗಳ ಸಂಘದ ಸೇವಾ ಪ್ರಮಾಣ ಪತ್ರದ ಜೊತೆಗೆ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದಿಂದ ನ್ಯಾಯವಾದಿ ವೃತ್ತಿಯಲ್ಲಿರುವ ಬಗ್ಗೆ ಪ್ರಮಾಣ ಪತ್ರ ಲಗತ್ತಿಸಬೇಕು.
Fee: * ಅರ್ಜಿ ಶುಲ್ಕ ಎಸ್ಸಿ / ಎಸ್ಟಿ/ ಪ್ರವರ್ಗ - 1 ರ ಅಭ್ಯರ್ಥಿಗಳಿಗೆ ರೂ. 400 /-ಮತ್ತು ಅಂಚೆ ಶುಲ್ಕ 25 ರೂ. ಸೇರಿ ರೂ. 425 ಅರ್ಜಿ ಶುಲ್ಕ ಪಾವತಿಸಬೇಕು.
* ಸಾಮಾನ್ಯ ಮತ್ತು ಇತರೆ ವರ್ಗದ ಅಭ್ಯರ್ಥಿಗಳು ಅಂಚೆ ಶುಲ್ಕ 25 ರೂ.ಸೇರಿ 825 ರೂ ಪಾವತಿಸಬೇಕು.
* ಅರ್ಜಿ ಶುಲ್ಕವನ್ನು ಎಲೆಕ್ಟ್ರಾನಿಕ್ ಅಂಚೆ ಕಚೇರಿಗಳಲ್ಲಿ ಚಲನ್ ಮೂಲಕ ಮಾತ್ರ ಪಾವತಿಸಲು ಸೂಚಿಸಲಾಗಿದೆ.
Age Limit: * ಅರ್ಜಿ ಸಲ್ಲಿಸಲು ಸಾಮಾನ್ಯ ಅಭ್ಯರ್ಥಿಗಳಿಗೆ 37 ವರ್ಷ.
* ಎಸ್ಸಿ/ ಎಸ್ಟಿ ಪ್ರವರ್ಗ - 1 ರ ಅಭ್ಯರ್ಥಿಗಳಿಗೆ 42 ವರ್ಷ.
* ಒಬಿಸಿ ಅಭ್ಯರ್ಥಿಗಳಿಗೆ 40ವರ್ಷ ನಿಗದಿಪಡಿಸಲಾಗಿದೆ.
Pay Scale: Rs.43,100-1,100-46,400-1,250 -53,900-1,450-62,600 -1,650 -72,500-1,900-83,900 /-
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಸಾಮಾನ್ಯ ಜ್ಞಾನ (General Knowledge) ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments