ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 310 ಅರಣ್ಯ ವೀಕ್ಷಕ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 310 ಅರಣ್ಯ ವೀಕ್ಷಕರು(ಗ್ರೂಪ್-ಡಿ) ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ಆಯ್ಕೆ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಾಂಭದ ದಿನಾಂಕ27/09/2023 ರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭಗೊಂಡು ದಿನಾಂಕ26/10/2023 ರಂದು ಕೊನೆಯಾಗುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಕದೊಳಗಾಗಿ ಆನ್ ಲೈನ್ ಮೂಲಕ ಆಯೇಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ :310
ಬೆಂಗಳೂರು - 33
ಬೆಳಗಾವಿ - 20
ಬಳ್ಳಾರಿ - 20
ಚಾಮರಾಜನಗರ - 32
ಚಿಕ್ಕಮಗಳೂರು - 25
ಧಾರವಾಡ - 7
ಹಾಸನ - 20
ಕೆನರಾ - 32
ಕಲಬುರ್ಗಿ - 23
ಕೊಡಗು - 16
ಮಂಗಳೂರು - 20
ಮೈಸೂರು - 32
ಶಿವಮೊಗ್ಗ - 30
ಈ ಅರಣ್ಯ ವೀಕ್ಷಕರು ಹುದ್ದೆಗಳಿಗೆ ಈ ಕೆಳಗಿನಂತೆ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
* ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳಿಗೆ ಅರ್ಜಿ ಶುಲ್ಕ ರೂಪಾಯಿ 200 + ಸೇವಾ ಶುಲ್ಕ 20
* ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ 1ಕ್ಕೆ ಅಭ್ಯರ್ಥಿ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 100 + ಸೇವಾ ಶುಲ್ಕ 20
ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು ಹಾಗೂ ಗರಿಷ್ಠ ವಯೋಮಿತಿಯು ಈ ಕೆಳಗಿನಂತಿದೆ.
* ಸಾಮಾನ್ಯ ವರ್ಗ : 30 ವರ್ಷ
* ಹಿಂದುಳಿದ ವರ್ಗ: 32 ವರ್ಷ
* SC ST ಹಾಗೂ CAT-1: 35 ವರ್ಷಗಳ ವಯೋಮಿತಿಯನ್ನು ಮೀರಿರಬಾರದು.
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 18,600/- ರಿಂದ 32,600/- ರೂಗಳವರೆಗೆ ಮಾಸಿಕ ವೇತನವನ್ನು ನಿಗದಿಪಡಿಸಲಾಗಿದೆ.
-ಈ ನೇಮಕಾತಿಯ ಕುರಿತು ಇನ್ನೂ ಹೆಚ್ಚಿನ ಸವಿವರವಾದ ಮಾಹಿತಿ ಗಾಗಿ ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.
- ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ





Comments