Loading..!

SSLC ಪಾಸಾದ ಅಭ್ಯರ್ಥಿಗಳಿಗೆ ಕರ್ನಾಟಕ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿನ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ | ನೇರ ನೇಮಕಾತಿ
Tags: SSLC
Published by: Yallamma G | Date:28 ಜನವರಿ 2025
not found

ಕರ್ನಾಟಕ ರಾಜ್ಯ ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್-ಡಿ (ಜವಾನರ) ಬ್ಯಾಕ್ ಲಾಗ್ ಹುದ್ದೆಯ ನೇರ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯ ನಮೂನೆಯ ಪ್ರತಿಯನ್ನು ಇಲಾಖೆಯ ವೆಬ್ ಸೈಟ್ ನಿಂದ ಡೌನ್ ಲೋಡ್ ಮಾಡಿಕೊಂಡು ನಿಗದಿತ ವಿಳಾಸಕ್ಕೆ ಭರ್ತಿ ಮಡಿದ ಅರ್ಜಿಯನ್ನು ಕೊನೆಯ ದಿನಾಂಕದೊಳಗಾಗಿ ಅಂಚೆಯ ಮೂಲಕವೇ ಸಲ್ಲಿಸಬೇಕಾಗುತ್ತದೆ. ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ನಂತರ ಅರ್ಜಿಯನ್ನು ಭರ್ತಿಮಾಡಬಹುದಾಗಿದೆ.


ಈ ಹುದ್ದೆಯ ನೇಮಕಾತಿ ಪರಿಷ್ಕೃತ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ ಮಾತ್ರ ಲಭ್ಯವಿದ್ದು, ಅರ್ಜಿದಾರರು ಈ ಸಂಬಂಧ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 28 ಫೆಬ್ರವರಿ 2025 ಸಂಜೆ 5:30ರೊಳಗೆ ತಮ್ಮ ಅರ್ಜಿಯನ್ನು ಸಲ್ಲಿಸಬಹುದು.


ಅರ್ಹತಾ ಮಾನದಂಡ:
- ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗಿರಬೇಕು.
- ವಯೋಮಿತಿ: ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷ.


ಅರ್ಜಿಯನ್ನು ಸಲ್ಲಿಸಬೇಕಾದ ವಿಳಾಸ:
ನೋಂದಣಿ ಮಹಾನಿರ್ದೇಶಕರು ಮತ್ತು ಮುದ್ರಾಂಕದ ಆಯುಕ್ತರು,
ಕನರಾ ಬ್ಯಾಂಕ್ ಭವನ, 8ನೇ ಮಹಡಿ, ಕೆ.ಜಿ.ರಸ್ತೆ, ಬೆಂಗಳೂರು – 560009.

Application End Date:  28 ಫೆಬ್ರುವರಿ 2025
To Download Official Notification

Comments