ಕರ್ನಾಟಕ ಆಂಟಿಬಯೋಟಿಕ್ಸ್ ಮತ್ತು ಫಾರ್ಮಾಕ್ಯುಟಿಕಲ್ಸ್ ಲಿಮಿಟೆಡ್ (KAPL) ನಲ್ಲಿ 29 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Mallappa Myageri | Date:13 ನವೆಂಬರ್ 2021

ಕರ್ನಾಟಕ ಆಂಟಿಬಯೋಟಿಕ್ಸ್ ಮತ್ತು ಫಾರ್ಮಾಕ್ಯುಟಿಕಲ್ಸ್ ಲಿಮಿಟೆಡ್ (KAPL) ನಲ್ಲಿ 29 ಪ್ರೊಫೆಷನಲ್ ಸರ್ವಿಸ್ ರೆಪ್ರೆಸೆಂಟೇಟಿವ್ಸ್, ಸೇಲ್ಸ್ ರೆಪ್ರೆಸೆಂಟಿವ್ಸ್ ಮತ್ತು ಏರಿಯಾ ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ. ಅಲ್ಲಿ ನೀಡಿರುವ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕೆಳಗಿನ ಕಛೇರಿ ವಿಳಾಸಕ್ಕೆ ದಿನಾಂಕ : 18-11-2021 ರೊಳಗೆ ಅರ್ಜಿ ಕಳುಹಿಸಲು ಸೂಚಿಸಲಾಗಿದೆ. ಅರ್ಜಿಯನ್ನು ಕಳುಹಿಸುವಾಗ ಲಕೋಟೆಯ ಮೇಲೆ ಹುದ್ದೆಯ ಹೆಸರನ್ನು ಕಡ್ಡಾಯವಾಗಿ ನಮೂದಿಸತಕ್ಕದ್ದು.
ಕಛೇರಿ ವಿಳಾಸ:
Deputy General manager (HRD),
Karnataka Antibiotics & Pharmaceuticals Limited,
Nirman Bhavan, Dr. Rajkumar Road, 1st Block, Rajajinagar, Bengaluru-560010.
No. of posts: 29
Application Start Date: 12 ನವೆಂಬರ್ 2021
Application End Date: 18 ನವೆಂಬರ್ 2021
Work Location: Karnataka
Qualification: ಕರ್ನಾಟಕ ಆಂಟಿಬಯೋಟಿಕ್ಸ್ ಮತ್ತು ಫಾರ್ಮಾಕ್ಯುಟಿಕಲ್ಸ್ ಲಿಮಿಟೆಡ್ (KAPL) ನಲ್ಲಿಯ ವಿವಿಧ ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಲೆ/ವಾಣಿಜ್ಯ/ವಿಜ್ಞಾನ/ಫಾರ್ಮಾಸಿ ಯಲ್ಲಿ ಪದವಿಯನ್ನು ಬಿ.ಫಾರ್ಮಾ/ಎಂ.ಫಾರ್ಮಾ, ಬಿ.ಎಸ್ಸಿ ಮತ್ತು ಬಿಎಎಂಎಸ್ ವಿದ್ಯಾರ್ಹತೆ ಜೊತೆಗೆ ವೃತ್ತಿಯಲ್ಲಿ ಅನುಭವ ಹೊಂದಿರತಕ್ಕದ್ದು.
Age Limit:
ಮೇಲ್ಕಾಣಿಸಿದ ವಿವಿಧ ಹುದ್ದೆಗಳಿಗೆ ಗರಿಷ್ಟ 28 ವರ್ಷ ರಿಂದ ಗರಿಷ್ಟ 50 ವರ್ಷ ವಯೋಮಿತಿಯನ್ನು ನಿಗದಿಪಡಿಸಿದೆ.
Pay Scale:
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳಿಗೆ ರೂ26,000/- ರಿಂದ 40,000/-ರೂಗಳ ವರೆಗೆ ವೇತನವನ್ನು ನಿಗದಿಪಡಿಸಿದೆ.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಕೂಡಲೇ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಿ.

Comments