ಕರ್ನಾಟಕ ಆ್ಯಂಟಿಬಯೊಟಿಕ್ಸ್ & ಫಾರ್ಮಸೂಟಿಕಲ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಕರ್ನಾಟಕ ಆ್ಯಂಟಿಬಯೊಟಿಕ್ಸ್ & ಫಾರ್ಮಸೂಟಿಕಲ್ಸ್ ಲಿಮಿಟೆಡ್ ನಲ್ಲಿ 5 ವರ್ಷದ ಗುತ್ತಿಗೆ ಆಧಾರದಲ್ಲಿ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ, ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ : 41
ಆಯುಷ್ ಸೇವಾ ಪ್ರತಿನಿಧಿ-III - 11 ಹುದ್ದೆಗಳು
ಆಯುಷ್ ಏರಿಯಾ ಮ್ಯಾನೇಜರ್‌ಗಳು - 2 ಹುದ್ದೆಗಳು
ವೃತ್ತಿಪರ ಸೇವಾ ಪ್ರತಿನಿಧಿ-III - 26 ಹುದ್ದೆಗಳು
ಪ್ರದೇಶ ವ್ಯವಸ್ಥಾಪಕರು - 2 ಹುದ್ದೆಗಳು
ಕಚೇರಿ ವಿಳಾಸ: Dy. General Manager - HRD,
KAPL House, Plot no 37, ARKA The Business Centre,
Site No. 31/4, NTTF Main Road, 2nd Phase,
Peenya Industrial Area, Bengaluru - 560058.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವದು.
ಈ ಹುದ್ದೆಗಳಿಗೆ ಯಾವುದೇ ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.
ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕದ ವಿವರ ಪಡೆಯಲು ನೇಮಕಾತಿ ಅಧಿಸೂಚನೆಯನ್ನು ಗಮನಿಸಿ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 35 ವರ್ಷ ವಯೋಮಿತಿ ಹೊಂದಿರಬೇಕು.
SC, ST ಅಭ್ಯರ್ಥಿಗಳಿಗೆ 5 ವರ್ಷ
OBC ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಮಾಸಿಕ ರೂ. 26000 - 45000/- ರವರೆಗೆ ವೇತನ ಪಡೆಯಲಿದ್ದಾರೆ.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.





Comments