Loading..!

ಕರ್ನಾಟಕ ರಾಜ್ಯ ಸರ್ಕಾರದ ಜವಾಹರ್‌ಲಾಲ್‌ ನೆಹರು ತಾರಾಲಯದಲ್ಲಿ FDA & SDA ಹುದ್ದೆಗಳ ನೇರ ನೇಮಕಾತಿ | ಕೂಡಲೇ ಅರ್ಜಿ ಸಲ್ಲಿಸಿ
Tags: Degree
Published by: Yallamma G | Date:18 ಅಕ್ಟೋಬರ್ 2025
not found

ಕರ್ನಾಟಕ ರಾಜ್ಯ ಸರ್ಕಾರದ ಜವಾಹರ್‌ಲಾಲ್‌ ನೆಹರು ತಾರಾಲಯದಲ್ಲಿ FDA & SDA ಹುದ್ದೆಗಳ ನೇರ ನೇಮಕಾತಿ | ಕೂಡಲೇ ಅರ್ಜಿ ಸಲ್ಲಿಸಿ

ನಿಮಗೆ ಅರ್ಹತೆ ಇದ್ದರೂ ಸರ್ಕಾರಿ ಕೆಲಸ ಸಿಗುತ್ತಿಲ್ಲವೇ? ಇಲ್ಲಿದೆ ನೋಡಿ ಒಂದು ಸುವರ್ಣಾವಕಾಶ! ಕರ್ನಾಟಕ ಸರ್ಕಾರದ ಜವಾಹರ್‌ಲಾಲ್ ನೆಹರು ತಾರಾಲಯದಲ್ಲಿ FDA ಮತ್ತು SDA ಹುದ್ದೆಗಳಿಗೆ ನೇರ ನೇಮಕಾತಿ ಪ್ರಕಟಣೆಯಾಗಿದೆ. ಈ ಅವಕಾಶ ಅರ್ಹ ಅಭ್ಯರ್ಥಿಗಳಿಗೆ ಸ್ಥಿರ ಉದ್ಯೋಗದ ಬಾಗಿಲು ತೆರೆದಿದೆ.
ಯಾರಿಗೆ ಗೊತ್ತು? ನಿಮ್ಮ ಒಂದು ಅರ್ಜಿ ನಿಮ್ಮ ಭವಿಷ್ಯವನ್ನೇ ಬದಲಾಯಿಸಬಹುದು. ಆದರೆ ನೀವು ತುಂಬಾ ತಡ ಮಾಡಬೇಡಿ - ಸಮಯ ಹೋಗುತ್ತಿದೆ.
ಈ ಬ್ಲಾಗ್‌ನಲ್ಲಿ ನೀವು ಅರ್ಜಿ ಸಲ್ಲಿಸಲು ಬೇಕಾದ ಎಲ್ಲಾ ಮಾಹಿತಿಯನ್ನು ಸರಳವಾಗಿ ತಿಳಿಸಿಕೊಡುತ್ತೇನೆ. ಆದರೆ ಮೊದಲು, ನೀವು ಅರ್ಜಿ ಸಲ್ಲಿಸಲು ಯೋಗ್ಯರೇ ಎಂದು ತಿಳಿಯಬೇಕಾದದ್ದು ಏನು?
ಕರ್ನಾಟಕ ರಾಜ್ಯ ಸರ್ಕಾರದ ಅಧೀನದ ಜವಾಹರಲಾಲ್‌ ನೆಹರು ತಾರಾಲಯ, ಬೆಂಗಳೂರು ಇಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರು ಮತ್ತು ದ್ವಿತೀಯ ದರ್ಜೆ ಸಹಾಯಕರು ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು Offline ಮೂಲಕ ಅರ್ಜಿಯನ್ನು ಸಲ್ಲಿಸಬಹುದು. 
ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು.

ಕರ್ನಾಟಕ ರಾಜ್ಯ ಸರ್ಕಾರದ ಜವಾಹರ್‌ಲಾಲ್‌ ನೆಹರು ತಾರಾಲಯದಲ್ಲಿ ಇತ್ತೀಚೆಗೆ FDA (ಪ್ರಥಮ ದರ್ಜೆ ಸಹಾಯಕ) ಮತ್ತು SDA (ದ್ವಿತೀಯ ದರ್ಜೆ ಸಹಾಯಕ) ಹುದ್ದೆಗಳಿಗೆ ನೇರ ನೇಮಕಾತಿ ಪ್ರಕಟಣೆ ಹೊರಬಿದ್ದಿದೆ. ಈ ನೇಮಕಾತಿಯಲ್ಲಿ FDA ಹುದ್ದೆಗಳು 01 ಮತ್ತು SDA ಹುದ್ದೆಗಳು 01 ಒಟ್ಟು 02 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.


ಈ ಹುದ್ದೆಗಳಲ್ಲಿ FDA ಅಭ್ಯರ್ಥಿಗಳು ಆಡಳಿತಾತ್ಮಕ ಕೆಲಸಗಳು, ದಾಖಲೆ ನಿರ್ವಹಣೆ, ಕಚೇರಿ ಪತ್ರವ್ಯವಹಾರ ಮತ್ತು ಹಣಕಾಸಿನ ವಹಿವಾಟುಗಳನ್ನು ನಿಭಾಯಿಸುವ ಜವಾಬ್ದಾರಿ ಹೊಂದಿರುತ್ತಾರೆ. SDA ಅಭ್ಯರ್ಥಿಗಳು ಕಚೇರಿ ಕೆಲಸಗಳು, ದಾಖಲೆ ನಿರ್ವಹಣೆ, ಪತ್ರ ವ್ಯವಹಾರ ಮತ್ತು ಹಿರಿಯ ಅಧಿಕಾರಿಗಳಿಗೆ ಸಹಾಯ ಮಾಡುವ ಕೆಲಸಗಳನ್ನು ನಿರ್ವಹಿಸುತ್ತಾರೆ.


ವಿದ್ಯಾರ್ಹತೆ : ಪದವಿ ಅಥವಾ ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಕನಿಷ್ಠ 50%  ಅಂಕಗಳೊಂದಿಗೆ ಪಾಸಾಗಿರಬೇಕು. ಜೊತೆಗೆ
ಎಲ್ಲಾ ಅರ್ಜಿದಾರರಿಗೆ ಕೆಳಗಿನ ತಾಂತ್ರಿಕ ಕೌಶಲ್ಯಗಳು ಅವಶ್ಯಕ:
- ಕಂಪ್ಯೂಟರ್ ಬಳಕೆಯಲ್ಲಿ ಪ್ರಾವೀಣ್ಯತೆ (MS Office, Excel, PowerPoint, Tally Etc)
- ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಟೈಪಿಂಗ್ ಜ್ಞಾನ

No. of posts:  2
Application End Date:  31 ಜುಲೈ 2025
Work Location:  ಬೆಂಗಳೂರು, ಕರ್ನಾಟಕ
Selection Procedure:

* ಮಾಸಿಕ ವೇತನ : 
ಪ್ರಥಮ ದರ್ಜೆ ಸಹಾಯಕರು : 44,425/- ರಿಂದ 83,700/- ವರೆಗೆ 
ದ್ವಿತೀಯ ದರ್ಜೆ ಸಹಾಯಕರು : 34,100/- ರಿಂದ 67,600/- ವರೆಗೆ 


ವಯೋಮಿತಿ : ಗರಿಷ್ಠ 28 ವರ್ಷ ಮೀರಿರಬಾರದು. 
- ನೇಮಕಾತಿ ನಿಯಮಾನುಸಾರವಾಗಿ ವಯೋಮಿತಿ ಸಡಿಲಿಕೆ ಇರಲಿದೆ.


ಅರ್ಜಿ ಸಲ್ಲಿಸುವ ವಿಳಾಸ : 
ನಿರ್ದೇಶಕರು, ಜವಾಹರ್ ಲಾಲ್ ನೆಹರು ತಾರಾಲಯ, ಶ್ರೀ ಟಿ. ಚೌಡಯ್ಯ ರಸ್ತೆ, ಹೈ ಗೌಂಡ್ಸ್. ಬೆಂಗಳೂರು 560001' ಇವರಿಗೆ 15.07.2025 ರೊಳಗೆ ತಲುಪುವಂತೆ ಕಳುಹಿಸಬೇಕು.
** ಆನ್ ಲೈನ್ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

ಸೂಚನೆ : ಈ ಮೊದಲಿನ ಅಧಿಸೂಚನೆ ದಿ.24.06.2025 ಕ್ಕೆ ಅನುಗುಣವಾಗಿ ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಪುನಃ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಹೊಸದಾಗಿ ಸಲ್ಲಿಸುವ ಅರ್ಜಿಗಳೊಂದಿಗೆ, ಈಗಾಗಲೇ ಸಲ್ಲಿಸಿರುವ ಅರ್ಜಿಗಳನ್ನೂ ಸಹ ಗಣನೆಗೆ ತೆಗೆದುಕೊಳ್ಳಲಾಗುವುದು. ತಾರಾಲಯವು ಪ್ರಥಮ ದರ್ಜೆ ಸಹಾಯಕ (ಒಂದು ಹುದ್ದೆ) ಹಾಗೂ ದ್ವಿತೀಯ ದರ್ಜೆ ಸಹಾಯಕರ (ಒಂದು ಹುದ್ದೆ) ಹುದ್ದೆಗೆ ಕರ್ನಾಟಕ ಸರ್ಕಾರದ ಆದೇಶದಂತೆ ಮತ್ತೊಮ್ಮೆ ಅರ್ಜಿಗಳನ್ನು ಆಹ್ವಾನಿಸುತ್ತಿದ್ದು ಸಂಪೂರ್ಣ ವಿವರಗಳು ಹಾಗೂ ಡೌನ್‌ಲೋಡ್‌ ಮಾಡಬಹುದಾದ ಅರ್ಜಿ ನಮೂನೆಗಳು taralaya.karnataka.gov.in ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ31.10.2025.

To Download Official Notification
To Download Extend Notification
Jawaharlal Nehru Tarlaya Recruitment 2025
JNT Recruitment 2025
Jawaharlal Nehru TB Hospital Jobs 2025
Jawaharlal Nehru Institute Recruitment 2025
JNT Vacancy 2025
JNT Notification 2025

Comments