Loading..!

ಜಾನಪದ ವಿಶ್ವ ವಿದ್ಯಾಲಯಲಯ ಹಾವೇರಿ ಇಲ್ಲಿ ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ
| Date:26 ಜುಲೈ 2019
not found
ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಆರಂಭಿಸಲಿರುವ ಸ್ನಾತಕೋತ್ತರ MA, MPA, MVA, MSW ಹಾಗೂ MBA ತರಗತಿಗಳ ಬೋಧನೆ, ವಿಸ್ತರಣೆ ಹಾಗೂ ಸಲಹಾ ಕೇಂದ್ರ, ಪ್ರಾದೇಶಿಕ ಅಧ್ಯಯನ ಕೇಂದ್ರಗಳು, ಗ್ರಾಮ ಕರ್ನಾಟಕ ವಸ್ತು ಸಂಗ್ರಹಾಲಯ ಹಾಗೂ ಗ್ರಂಥಾಲಯದಲ್ಲಿ ಕಾರ್ಯನಿರ್ವಹಿಸಲು ಅಗತ್ಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.

ಖಾಲಿ ಹುದ್ದೆಗಳ ವಿವರ :
* ಬೋಧಕ ಹುದ್ದೆಗಳು - 29
* ತಾತ್ಕಾಲಿಕ ಯೋಜನಾ ಸಹಾಯಕರು - 09
* ತಾತ್ಕಾಲಿಕ ಸಹಾಯಕ ಗ್ರಂಥಪಾಲಕರು - 01

- ಬೋಧಕ ಹುದ್ದೆಗಳ ವಿಭಾಗಗಳು : ಜಾನಪದ ವಿಜ್ಞಾನ, ಜಾನಪದ ಸಾಹಿತ್ಯ, ಜಾನಪದ ಕಲೆ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಗ್ರಾಮೀಣ ಮತ್ತು ಬುಡಕಟ್ಟು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಗ್ರಾಮೀಣ ಮತ್ತು ಬುಡಕಟ್ಟು ನಿರ್ವಹಣೆ, ಕನ್ನಡ ಮತ್ತು ಜಾನಪದ, ಪ್ರವಾಸೋದ್ಯಮ ಮತ್ತು ಪ್ರಯಾಣ ನಿರ್ವಹಣೆ, ದೃಶ್ಯ ಕಲೆ, ಅರ್ಥ ಶಾಸ್ತ್ರ, ಸಮಾಜ ಶಾಸ್ತ್ರ, ಇಂಗ್ಲಿಷ್, ಸಮಾಜ ಕಾರ್ಯ(MSW), ಪ್ರದರ್ಶನ ಕಲೆ ಬುಡಕಟ್ಟು ಅಧ್ಯಯನ, ಮಹಿಳಾ ಅಧ್ಯಯನ.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಅರ್ಜಿ ಹಾಗೂ ಸ್ವ-ವಿವರದ ಮಾದರಿಯನ್ನು ವಿಶ್ವವಿದ್ಯಾಲಯದ ವೆಬ್ ಸೈಟ್ ನಲ್ಲಿ ಪಡೆದು ಭರ್ತಿ ಮಾಡಿ ವಿದ್ಯಾರ್ಹತೆ ಹೊಂದಿರುವ ದಾಖಲೆಗಳು, ಸೇವಾನುಭವ ಹೊಂದಿರುವ ದಾಖಲೆಗಳನ್ನು ಲಗತ್ತಿಸಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಬೇಕಾದ ವಿಳಾಸ :
ಕುಲಸಚಿವರು,
ಕರ್ನಾಟಕ ಜಾನಪದ ವಿಶ್ವವಿದ್ಯಾಲಯ,
ಗೊಟಗೋಡಿ, ಶಿಗ್ಗಾವಿ ತಾಲ್ಲೂಕು,
ಹಾವೇರಿ ಜಿಲ್ಲೆ .581205 ವಿಳಾಸಕ್ಕೆ ಕಚೇರಿ ವೇಳೆಯೊಳಗೆ ಸಲ್ಲಿಸಬೇಕು

ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಸಹಾಯವಾಣಿ ಸಂಖ್ಯೆ: 0836-2255180
No. of posts:  39
Application Start Date:  23 ಜುಲೈ 2019
Application End Date:  9 ಆಗಸ್ಟ್ 2019
Work Location:  ಜಾನಪದ ವಿಶ್ವ ವಿದ್ಯಾಲಯದ ಅಧೀನ ಕಾಲೇಜುಗಳಲ್ಲಿ
Selection Procedure: ಯುಜಿಸಿ(UGC) ನಿಯಮಗಳಿಗೆ ಅನುಗುಣವಾಗಿ ಲಿಖಿತ ಪರೀಕ್ಷೆ ಹಾಗೂ ನೇರ ಸಂದರ್ಶನದ ಮೂಲಕ ನೇಮಕ ಪ್ರಕ್ರಿಯೆ ನಡೆಯಲಿದೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗದ ರಾಷ್ಟ್ರೀಯ ಅರ್ಹತಾ ಪರೀಕ್ಷೆ(UGC NET), ರಾಜ್ಯಮಟ್ಟದ ಅರ್ಹತಾ ಪರೀಕ್ಷೆ(KSET), ಎಂಪಿಎಲ್, ಪಿಎಚ್ ಡಿ(Phd) ಪಡೆದಿರುವ ಮತ್ತು ಬೋಧನೆಯಲ್ಲಿ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ನೇಮಕದಲ್ಲಿ ಆದ್ಯತೆ ನೀಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ವಿಶ್ವವಿದ್ಯಾಲಯ ನಿಯೋಜಿಸುವ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ಸಿದ್ಧರಿರಬೇಕು.
Qualification: ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಗಳಿಂದ ಸಂಬಂಧಿಸಿದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು ಮತ್ತು ನಿಗದಿಪಡಿಸಿದ ವಿದ್ಯಾರ್ಹತೆಯಲ್ಲಿ ಕನಿಷ್ಠ ಶೇಕಡ. 55% ಅಂಕಗಳನ್ನು ಪಡೆದಿರಬೇಕು
Fee: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 1000/- ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
ಪರಿಶಿಷ್ಟ ಜಾತಿ, ಪಂಗಡ ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಲ್ಲಿ ಶೇ.50 ವಿನಾಯಿತಿ ಕಲ್ಪಿಸಲಾಗಿದೆ.

* ಶಿಗ್ಗಾವಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಪಾವತಿಯಾಗುವಂತೆ ಡಿಡಿಯನ್ನು ಹಣಕಾಸು ಅಧಿಕಾರಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಗೊಟಗೋಡಿ ಇವರ ಹೆಸರಿಗೆ ಪಡೆಯಬೇಕು.
Pay Scale: ಆಯಾ ಹುದ್ದೆಗಳಿಗನುಗುಣವಾಗಿ ವೇತನವನ್ನು ನಿಗದಿಪಡಿಸಲಾಗಿದೆ
to download official press releases
ನಿಮ್ಮ ಮೊಬೈಲ್ ಫೋನಿಗೆ ಬೇಕಾದ ಅತ್ಯವಶ್ಯಕ ಉಪಕರಣಗಳನ್ನು ಅತಿ ಕಡಿಮೆ ಬೆಲೆಗೆ amazon ಜಾಲತಾಣದಿಂದ ಖರೀದಿಸಿ

Comments